ಪುಣೆ: ಎಂಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ (ಅ.24) 3 ಟೆಸ್ಟ್‌ಗಳ ಸರಣಿಯ ಎರಡನೇ ಪಂದ್ಯಕ್ಕೆ ವಾಷಿಂಗ್ಟನ್ ಸುಂದರ್ ಆಯ್ಕೆ ಬಗ್ಗೆ ಕ್ರಿಕೆಟ್ ಪಂಡಿತರು ಅಸಮಾಧಾನ ಹೊರಹಾಕಿದ್ದರು.
ಸೆಲೆಕ್ಟರ್ಸ್ ಇಟ್ಟ ಭರವಸೆಗೆ ಬೆಲೆ ತಂದ ವಾಷಿಂಗ್ಟನ್ ಸುಂದರ್ 7 ವಿಕೆಟ್ ಕಿತ್ತರು. ಪರಿಣಾಮ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 259 (79.1 ಓವರ್‌ಗಳಲ್ಲಿ) ರನ್‌ಗಳಿಗೆ ಆಲ್‌ಔಟ್ ಆಯಿತು.
ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ತಮಿಳುನಾಡು ಪರ ಆಲ್‌ರೌಂಡ್ ಪ್ರದರ್ಶನ ನೀಡಿ ಮಿಂಚಿರುವ ವಾಷಿಂಗ್ಟನ್ ಸುಂದರ್, ಅದೇ ಆತ್ಮವಿಶ್ವಾಸ ಕಾಯ್ದುಕೊಂಡು ಕಿವೀಸ್ ಬ್ಯಾಟರ್‌ಗಳನ್ನು ಅಕ್ಷರಶಃ ಬೇಟೆಯಾಡಿದರು.
ಫ್ರೆಷ್ ಪಿಚ್ ಮತ್ತು ಬ್ಯಾಟಿಂಗ್‌ಗೆ ಯೋಗ್ಯ ಸ್ಥಿತಿಗತಿಗಳ ಲಾಬ ಪಡೆದು ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಸ್ಕೋರ್ ಕಲೆಹಾಕುವುದು ಕಿವೀಸ್ ಕಪ್ತಾನ ಟಾಮ್ ಲೇಥಮ್ ಅವರ ಲೆಕ್ಕಾಚಾರವಾಗಿತ್ತು.
ಜೀವಮಾನದ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ ವಾಷಿಂಗ್ಟನ್ ಸುಂದರ್, ಇನಿಂಗ್ಸ್ ಒಂದರಲ್ಲಿ ತಮ್ಮ ಮೊದಲ 5 ವಿಕೆಟ್ ಸಾಧನೆ ಮೆರೆದರೆ, ಅವರಿಗೆ ಉತ್ತಮ ಸಾಥ್ ನೀಡಿದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 64ಕ್ಕೆ 3 ವಿಕೆಟ್ ಪಡೆದರು.