- ಕೇರಳ – ದೇವರ ನಾಡಿನಲ್ಲಿ ಮಳೆಯ ಅಬ್ಬರ ವಯನಾಡಿನಲ್ಲಿ ಭಾರಿ ಭೂ ಕುಸಿತ
- ಮಣ್ಣಿನಲ್ಲಿ ಸಿಲುಕಿ ೨೪ ಜನರ ದಾರುಣ ಸಾವು
- ರಕ್ಷಣಾ ಕಾರ್ಯ ಆರಂಭಿಸಿದ ಏನ್ ಡಿ ಆರ್ ಎಫ್ ಮತ್ತು ಅಗ್ನಿಶಾಮಕ ದಳ
ಮಳೆಯ ರಕ್ಕಸ ಅಬ್ಬರಕ್ಕೆ ಕೇರಳ ನಲುಗಿದೆ . ಮಂಗಳವಾರ ಮುಂಜಾನೆ ಸುರಿದ ಭಾರೀ ಮಳೆಗೆ ವಯನಾಡಿನಲ್ಲಿ ಭಾರೀ ಭೂಕುಸಿತ ಸಂಭವಿಸಿದೆ. ಪರಿಣಾಮ 24 ಜನರು ಜೀವ ಕಳೆದುಕೊಂಡಿದ್ದಾರೆ ,ಮಣ್ಣಿನಲ್ಲಿ ನೂರಾರು ಜನರು ಸಿಲುಕಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಮುಂಡಕ್ಕೈ ಮತ್ತು ಚೂರಲ್ಮಲಾ ಪ್ರದೇಶವು ಅಕ್ಷರಶಃ ಗುರುತಿ ಸದಂತಾಗಿದೆ. ಭಾರೀ ಮಳೆಯಾರ್ಭಟಕ್ಕೆ ಸ್ಮಶಾನವಾಗಿದೆ. ಭೂಕುಸಿತದ ಪರಿಣಾಮ ಮರಗಳು, ಮಣ್ಣು, ಮನೆಗಳು ನೆಲಸಮ ಆಗಿವೆ . ಸದ್ಯ ಸ್ಥಳದಲ್ಲಿ ರಕ್ಷಣಾ ತಂಡಗಳು ಕಾರ್ಯ ಆರಂಭಿಸಿವೆ . ಅಗ್ನಿಶಾಮಕ ದಳ, ಎನ್ಡಿಆರ್ಎಫ್ ಮತ್ತು ಸ್ಥಳೀಯ ಸಂಘಟನೆಗಳು ಸೇರಿ ಸುಮಾರು 250 ಕ್ಕೂ ಹೆಚ್ಚು ಜನರು ರಕ್ಷಣಾ ಕಾರ್ಯದಲ್ಲಿ ಮುಂದಾಗಿದ್ದಾರೆ.
ಮುಂಡಕ್ಕೈ ಮತ್ತು ಚೂರಲ್ಮಲಾ ಪ್ರದೇಶದಲ್ಲಿ ಮುಂಜಾನೆಭಾರೀ ಭೂಕುಸಿತ ಸಂಭವಿಸಿದ್ದು. ನಸುಕಿನ ವೇಳೆ 2-4 ಗಂಟೆಯ ಮದ್ಯೆ ಭಾರೀ ಭೂಕುಸಿತ ಸಂಭವಿಸಿದೆ. ಸದ್ಯ ಘಟನೆ ಬಗ್ಗೆ ಮುಖ್ಯಮಂತ್ರಿ ಪಿಣರಾಯಿಗೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ಮಾಡಿ. ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ
ಇನ್ನು ಈ ದುರ್ಘಟನೆಯಲ್ಲಿಜೀವ ಕಳೆದುಕೊಂಡ ಕುಟುಂಬಗಳಿಗೆ ಮೋದಿಯವರು 2 ಲಕ್ಷ ರೂಪಾಯಿ ಪರಿಹಾರ ಮತ್ತು ಘಟನೆಯಲ್ಲಿ ಗಾಯಗೊಂಡ ಕುಟುಂಬಗಳಿಗೆ 50 ಸಾವಿರ ಪರಿಹಾರವನ್ನು ಘೋಷಿಸಿದ್ದಾರೆ .