Wayanad Landslideನಿಂದ ಕೇರಳ ಜನರ ತತ್ತರಿಸಿ ಹೋಗಿದ್ದಾರೆ. ಕಾರಣ ನೆರವಿಗೆ ನಿಂತ ಕರ್ನಾಟಕ ಸರ್ಕಾರ ಹೌದು Wayanadನಲ್ಲಿ 100 ಮನೆ ನಿರ್ಮಾಣ, ಸಿಎಂ ದೊಡ್ಡ ಘೋಷಣೆ!
Wayanad Landslide ದುರಂತಕ್ಕೆ CM Siddu ದೊಡ್ಡ ಘೋಷಣೆ!
ದುರಂತದಲ್ಲಿ ಸಿಕ್ಕಿ ನಲುಗಿ ಹೋಗಿರುವ ಜನರಿಗೆ ನೆರವು ನೀಡಲು ಕರ್ನಾಟಕ ಸರ್ಕಾರ ಮುಂದಾಗಿದ್ದು, ವಯನಾಡ್ ನಲ್ಲಿ ಕರ್ನಾಟಕ ಸರ್ಕಾರದಿಂದ 100 ಮನೆ ನಿರ್ಮಾಣ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ. ದುರಂತದಲ್ಲಿ ಸಿಕ್ಕಿ ನಲುಗಿ ಹೋಗಿರುವ ಜನರಿಗೆ ನೆರವು ನೀಡಲು ಕರ್ನಾಟಕ ಸರ್ಕಾರ ಮುಂದಾಗಿದ್ದು, Wayanad ನಲ್ಲಿ ಕರ್ನಾಟಕ ಸರ್ಕಾರದಿಂದ 100 ಮನೆ ನಿರ್ಮಾಣ ಮಾಡುವುದಾಗಿ Chief Minister of Karnataka ಅವರು ಘೋಷಣೆ ಮಾಡಿದ್ದಾರೆ. ಈ ಕುರಿತು ಎಕ್ಸ್ ಪೋಸ್ಟ್ ನಲ್ಲಿ ಒಂದು ಪೋಸ್ಟ್ ಮಾಡಿ ಸಿಎಂ ಮಾಹಿತಿ ನೀಡಿದ್ದು, ವಯನಾಡಿನಲ್ಲಿ ನಡೆದ ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ಹಾಗೂ ಕೇರಳ ಸರ್ಕಾರದೊಂದಿಗೆ ಕರ್ನಾಟಕ ಒಗ್ಗಟ್ಟಿನಿಂದ ನಿಂತಿದೆ.
100 ಮನೆ ನಿರ್ಮಾಣದ ಭರವಸೆ!
ವಯನಾಡಿನಲ್ಲಿ ಬೀಡು ಬಿಟ್ಟಿರುವ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದರು. ಮುಂಡಕ್ಕೈಗೆ ಭೇಟಿ ನೀಡಿ ರಕ್ಷಣಾಪಡೆಗಳ ಕಾರ್ಯವನ್ನ ಶ್ಲಾಘಿಸಿದ್ದರು. ಚೂರಲ್‌ಮಲಾಗೆ ರಾಹುಲ್ ವಾಪಸ್ ಆಗುತ್ತಿದ್ದಾಗ ಅವರ ವಾಹನವನ್ನ ಸ್ಥಳೀಯರು ಅಡ್ಡಗಟ್ಟಿದ್ದರು. ಸ್ಥಳೀಯ ಶಾಸಕರು ನಮ್ಮ ಕಷ್ಟ ಕೇಳ್ತಿಲ್ಲ, ನೆರವಿಗೂ ಬಂದಿಲ್ಲ ಅಂತ ಸಮಸ್ಯೆ ಬಗೆಹರಿಸಿ ಅಂತ ಕೂಗಾಡಿದ್ದರು. ದುರಂತ ಸ್ಥಳದಿಂದ ವಾಪಸ್ಸಾದ ರಾಹುಲ್, ಪ್ರಿಯಾಂಕಾ ಅಧಿಕಾರಿಗಳ ಜೊತೆ ಸಭೆ ಮಾಡಿ ವಿವರಣೆ ಪಡೆದುಕೊಂಡರು.
Wayanad Landslide ಕುರಿತು ಪೋಸ್ಟ್ ನಲ್ಲಿ ಸಿಎಂ ಹೇಳಿದ್ದೇನು?
ಭೂಕುಸಿತದಿಂದ ಸೂರು ಕಳೆದುಕೊಂಡ 100 ಕುಟುಂಬಗಳಿಗೆ ನಮ್ಮ ಸರ್ಕಾರ ಮಾನವೀಯ ನೆಲೆಯಲ್ಲಿ ಮತ್ತೆ ಮನೆ ನಿರ್ಮಿಸಿಕೊಡಲಿದೆ ಎಂಬ ಭರವಸೆಯನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ನೀಡಿದ್ದೇನೆ. ಸಂಕಷ್ಟದ ಕಾಲದಲ್ಲಿ ಜೊತೆ ನಿಂತು ಭರವಸೆಯನ್ನು ಮರಳಿ ಕಟ್ಟೋಣ ಎಂದು ಸಿಎಂ ತಿಳಿಸಿದ್ದಾರೆ.
Wayanadನಲ್ಲಿ ಮೈಸೂರಿನ ಜನರ ಶವ ಪತ್ತೆ!
Wayanadನ ಗುಡ್ಡ ಕುಸಿತದಲ್ಲಿ ಸಿಲುಕಿ ಸಾವನ್ನಪ್ಪಿದ ಒಂದೇ ಕುಟುಂಬದ 8 ಕನ್ನಡಿಗರ ಶವಪತ್ತೆಯಾಗಿದೆ. ಮೈಸೂರಿನ .ನರಸೀಪುರ ತಾಲೂಕಿನ ಕುಟುಂಬದ 9 ಜನರ ಪೈಕಿ 8 ಜನರ ಶವ ಪತ್ತೆಯಾಗಿದೆ. ಮಹದೇವಮ್ಮ ಕುಟುಂಬದ ಅಶ್ವಿನ್, ಶ್ರೇಯ, ಶಿವಣ್ಣ, ಗುರುಮಲ್ಲಣ್ಣ ಸೇರಿ 9 ಜನರ ಪೈಕಿ 8 ಜನರ ಶವ ಸಿಕ್ಕಿದೆ.
ಕರ್ನಾಟಕದ ಕುಟುಂಬ ಯಾವುದು?
ಚೂರಲ್‌ಮಲದಲ್ಲಿದ್ದ ಮಹದೇವಮ್ಮ ಇಡೀ ಕುಟುಂಬ ಭೂಕುಸಿತದ ಅವಶೇಷಗಳಡಿ ಮುಚ್ಚಿ ಹೋಗಿದ್ದರು. ಸದ್ಯ ಎನ್‌ಡಿಆರ್‌ಎಫ್ ತಂಡ ಶ್ವಾನದಳದ ಸಹಾಯದಿಂದ ಎಲ್ಲರ ಶವಗಳನ್ನ ಮೇಲೆ ತೆಗೆದಿದ್ದಾರೆ. ಎಲ್ಲರ ಶವಗಳನ್ನೂ ಸಾಮೂಹಿಕವಾಗಿ ಇಂದು ಅಂತ್ಯಸಂಸ್ಕಾರ ನಡೆಸಲಾಗುತ್ತೆ.
ಇನ್ನಷ್ಟು ಓದಿರಿ:
Yadgir News 2024: ನಿನ್ನೆ ಸೆಂಡ್ ಆಫ್, ಇಂದು ಈ ಲೋಕದಿಂದ ಆಫ್!
IPL 2025: ವಿದೇಶಿ ಆಟಗಾರರು ಬ್ಯಾನ್? ಏನು ಸುದ್ದಿ?