ಗಜೇಂದ್ರಗಡ : ಸರಕಾರವು ನೇಕಾರರಿಗೆ ನೆರವಾಗುವ ಉದ್ದೇಶಿತ ನೇಕಾರ ಸಮ್ಮಾನ್ ಯೋಜನೆಗೆ ನೋಂದಣಿ ಆಹ್ವಾನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದಿನ ವರ್ಷ ನೋಂದಣಿ ಮಾಡಿಸಿದವರು ಮತ್ತೆ ಈ ವರ್ಷ ನೋಂದಣಿ ಮಾಡಿಸುವುದು ಕಡ್ಡಾಯ ಎಂಬ ಇಲಾಖೆ ಸೂಚನೆ ಹಧಿಲಧಿವಧಿರಿಗೆ ತಿಳಿಯದೆ ಪರಿತಪಿಸುತ್ತಿರುವ ಹಿನ್ನೆಲೆ ಕಚ್ಚಾ ವಸ್ತುಗಳ ದರ ಏರಿಕೆ, ಮಾರುಕಟ್ಟೆ ಸಮಸ್ಯೆ ಸೇರಿದಂತೆ ಸಾಕಷ್ಟು ಸವಾಲು ದುರಿಸುತ್ತಿರುವ ನೇಕಾರರು ನೇಕಾರ ಸಮ್ಮಾನ್ ಯೋಜನೆ ಸೌಲಭ್ಯ ಪಡೆಯಲು ನೋಂದಣಿ ಆಹ್ವಾನಿಸಲಾಗಿದೆ.
ಪಟ್ಟಣ ಸುತ್ತಲಿನ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೇಕಾರಿಕೆ ಕುಟುಂಬಗಳಿವೆ. ಪವರ್ ಲೂಧಿಮ್ಸ್ ನೇಯ್ಗೆ ಉದ್ಯಮ ಕಾಣಬಹುದು. ಬೆಲೆ ಏರಿಕೆ, ಮಾರುಕಟ್ಟೆ ಕೊರತೆ, ಬೇಡಿಕೆ ಏರಿಳಿತದಿಂದ ನೇಕಾರರು ಸಾಕಷ್ಟು ಸವಾಲು ಎದುರಿಸುವಂತಾಗಿದೆ. ಇದರಿಂದ ಸರಕಾರ ವಿದ್ಯುತ್ ಸಬ್ಸಿಡಿ ಜತೆಗೆ ಆರ್ಥಿಕ ನೆರವಿಗಾಗಿ ನೇಕಾರ ಸಮ್ಮಾನ್ ಯೋಜನೆಯಡಿ ವಾರ್ಷಿಕ 5000 ರೂ. ನೆರವು ನೀಡಲು ಸರಕಾರ ಮುಂದಾಗಿದೆ. ಇದಕ್ಕೆ ಪ್ರತಿ ವರ್ಷ ನೋಂದಣಿ ಮಾಡಿಸಿಕೊಳ್ಳಬೇಕು. ಪ್ರಸುತ್ತ ವರ್ಷದಲ್ಲಿ ನೋಂದಣಿಗೆ ಆ.25 ರವರೆಗೂ ಅವಕಾಶ ನೀಡಲಾಗಿದೆ.
ಆಧಾರ್ ಕಾರ್ಡ್, ವಿದ್ಯುತ್ ಬಿಲ್, ಬ್ಯಾಂಕ್ ಪಾಸ್‌ಬುಕ್, ನೇಕಾರದ ಗುರುತಿನ ಚೀಟಿ, ಕಾರ್ಮಿಕರನ್ನು ಒಳಗೊಂಡ ಗ್ರೂಪ್ ಫೋಟೊ, ರೇಷನ್ ಕಾರ್ಡ್,ಪಾವರ್ ಲೂಮ್ಸ್ ಮಾಲೀಕರು ನೀಡಬೇಕು. ನೇಕಾರ ಕಾರ್ಮಿಕರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ರೇಷನ್ ಕಾರ್ಡ್, ಮಜೂರು ದೃಢೀಕರಣ ಪತ್ರ, ಫೋನ್ ನಂಬರ್ ಒಳಗೊಂಡಿರುವ ಗ್ರೂಪ್ ಫೋಟೊ, ಕಾರ್ಮಿಕರ ಭಾವಚಿತ್ರ, ನೇಕಾರ ಗುರುತಿನ ಚೀಟಿ ನೀಡಬೇಕು.
ಕೈಮಗ್ಗ, ವಿದ್ಯುತ್ ಮಗ್ಗ ಹಾಗೂ ಮಗ್ಗ ಪೂರ್ವ (ಟ್ವಿಸ್ಟಿಂಗ್, ವೈಡಿಂಗ್, ವಾಪಿಂಗ್ ಹಾಗೂ ಬಣ್ಣ ಹಾಕುವ ಘಟಕ) ಚಟವಟಿಕೆಗಳಲ್ಲಿ ತೊಡಗಿರುವ ನೇಕಾರರು, ಕೆಲಸಗಾರರಿಗೆ ನೇಕಾರರ ಸಮ್ಮಾನ್ ಯೋಜನೆಯಡಿ 2024-25 ಸಾಲ ನಿಧಿಯಲ್ಲಿ 5,000 ರೂ. ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ನೀಡಲು ಸೇವಾ ಸಿಂಧು ಪೋರ್ಟಲ್‌ನಲ್ಲಿ ಮಾಹಿತಿ ಅಪ್‌ಲೋಡ್ ಮಾಡಲು ಅನುಕೂಲವಾಗುವಂತೆ ಅರ್ಜಿ ಆಹ್ವಾನಿಸಲಾಗಿದೆ. ಮಾಹಿತಿಗಾಗಿ ಮೊ: 9448859948, 9740888550, 9916582238ಗೆ ಸಂಪರ್ಕಿಸಬಹುದು ಎಂದು ಜವಳಿ ಇಲಾಖೆಯ ಜಿಲ್ಲಾಉಪನಿರ್ದೆಶಕ ಎಚ್.ಬಿ. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.