spot_img
spot_img

ಲವಂಗ ನೀರಿನಿಂದ ಆರೋಗ್ಯಕ್ಕೆ ಏನೆಲ್ಲ ಉಪಯೋಗ..

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಲವಂಗ ನೀರನ್ನು ಕುಡಿಯುವುದರಿಂದ ಈ ರೋಗಗಳು ಬರಲ್ಲ, ಮಳೆ ಹೋಯಿತು, ಚಳಿಗಾಲ ಬಂತು ಲವಂಗ ಉಪಯೋಗಿಸುವುದು ಒಳ್ಳೆಯದು

ಮಳೆಗಾಲ ಗುಡ್​​ ಬೈ ಹೇಳುವ ಸಮಯ ಬಂದಿದ್ದು ಚಳಿಗಾಲ ಮೆಲ್ಲಗೆ ಆಗಮಿಸಿತ್ತಿದ್ದು ಅಬ್ಬಬ್ಬಾ.. ಎಷ್ಟೊಂದು ಚಳಿ ಎನ್ನುವಾಗೆ ಆಗಿದೆ. ಏನೇ ಆಗಲಿ ಚಳಿಗಾಲ ಬಂತು ಎಂದರೆ ತುಸು ಆರೋಗ್ಯದ ಕಡೆ ಹೆಚ್ಚಿನ ಗಮನಕೊಡಬೇಕು ಆಗುತ್ತದೆ.

ಆರೋಗ್ಯದಲ್ಲಿ ಸ್ವಲ್ಪ ಏರು ಪೇರು ಆದರೆ ಚಳಿಯಲ್ಲಿ ಇನ್ನಷ್ಟು ಸುಸ್ತು ಆಗುವುದರ ಜೊತೆಗೆ ಮನೆ ಮೂಲೆನೇ ಸೇರುವುದು ಪಕ್ಕಾ. ಅದಕ್ಕೆ ಚಳಿಗಾಲದಲ್ಲಿ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿದರೆ ಆರೋಗ್ಯವನ್ನ ಸದೃಢವಾಗಿ ಕಾಪಾಡಿಕೊಳ್ಳಬಹುದು.

ಚಳಿ ಬಂದರೆ ಸಾಕು ಶೀತ, ಕೆಮ್ಮು ಮತ್ತು ಗಂಟಲಿನ ಸಮಸ್ಯೆಗಳು ಬರಲು ಪ್ರಾರಂಭಿಸುತ್ತವೆ. ಇದಕ್ಕೆ ಇಂದಿನ ಪರಿಸರ ಮಾಲಿನ್ಯ ಕೂಡ ಕಾರಣವಾಗಬಹುದು. ಇಂತಹ ಸಮಯದಲ್ಲಿ ಮನೆಮದ್ದುಗಳ ಮೊರೆ ಹೋಗುವುದು ಸಾಮಾನ್ಯ. ಆಯುರ್ವೇದ ಚಿಕಿತ್ಸೆಯು ದೇಹದಲ್ಲಿನ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೆಚ್ಚಿಸುತ್ತದೆ.

ಅದರಂತೆ ಚಳಿಯಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಮಸಾಲೆ ಪದಾರ್ಥಗಳಲ್ಲಿ ಒಂದಾಗಿರುವ ಲವಂಗ ಕೂಡ ಒಂದಾಗಿದೆ. ಚಳಿಗಾಲದಲ್ಲಿ ಲವಂಗವನ್ನ ನೀರಿನ ಜೊತೆ ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಏನೆಲ್ಲಾ ಉಪಯೋಗವಾಗುತ್ತದೆ ಎಂದು ತಿಳಿಯೋಣ.

ವಾತ, ಪಿತ್ತ ಮತ್ತು ಕಫದಿಂದ ನಮ್ಮ ದೇಹ ತೊಂದರೆಗೆ ಒಳಗಾದಾಗ, ಅನೇಕ ರೀತಿಯ ಬೇರೆ ರೋಗಗಳು ಉದ್ಭವಿಸುತ್ತವೆ. ಇದನ್ನು ತಡೆಯಬೇಕು ಎಂದರೆ ಕಾಲಿ ಹೊಟ್ಟೆಯಲ್ಲಿ ಲವಂಗ ನೀರನ್ನು ಕುಡಿಯಬೇಕು. ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ ಹೊಟ್ಟೆಯನ್ನ ತಂಪಾಗಿರುತ್ತದೆ.

ಲವಂಗ ನೀರು ಗ್ಯಾಸ್ಟಿಕ್, ಆಮ್ಲೀಯತೆ, ಹೊಟ್ಟೆ ಉಬ್ಬುವುದು ಹಾಗೂ ಅಜೀರ್ಣದಂತಹ ಹೊಟ್ಟೆಯ ಕಾಯಿಲೆಗಳನ್ನು ಗುಣಪಡಿಸುತ್ತದೆ. ಲವಂಗದ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಕಿಣ್ವಗಳು ಹೆಚ್ಚಾಗುವುದರಿಂದ ಆಹಾರದ ಜೀರ್ಣ ಸುಲಭವಾಗುತ್ತದೆ.

ಲವಂಗವನ್ನು ನೀರಿಗೆ ಹಾಕಿದಾಗ ಅದರೊಂದಿಗೆ ಬೆರೆತು ನೈಸರ್ಗಿಕವಾಗಿ ತಂಪು ಆಗುತ್ತದೆ. ಇದು ಬಾಯಾರಿಕೆಯನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೆ ಹೊಟ್ಟೆಯಲ್ಲಿ ಸುಡುವ ಸಂವೇದನೆ ಇದ್ದರೇ ಅದನ್ನು ನಿವಾರಿಸುತ್ತದೆ. ಲವಂಗ ನೀರು ದೇಹದ ತೇವಾಂಶವನ್ನ ಕಾಪಾಡುತ್ತದೆ.

ಬದಲಾಗುತ್ತಿರುವ ಹವಾಮಾನದಲ್ಲಿ ಶೀತ, ಕೆಮ್ಮು ಮತ್ತು ಕಫದಂತಹ ಸಮಸ್ಯೆಗಳಿಂದ ಲವಂಗ ನೀರು ಪರಿಹಾರವನ್ನು ನೀಡುತ್ತದೆ. ಆಂಟಿಬ್ಯಾಕ್ಟೀರಿಯಲ್ (Antibacterial) ಮತ್ತು ಆಂಟಿವೈರಲ್ (Antiviral) ಗುಣಲಕ್ಷಣಗಳನ್ನು ಲವಂಗ ಹೊಂದಿದೆ. ಯಾವುದೇ ಸೋಂಕನ್ನು ತಡೆಯಲು ಲವಂಗ ಸಹಾಯ ಮಾಡುತ್ತೆ. ಋತುಮಾನದ ರೋಗಗಳನ್ನು ದೂರ ಇಡುವಲ್ಲಿ ಲವಂಗ ಬಹುಮುಖ್ಯ ಪಾತ್ರವಹಿಸುತ್ತದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಮೀನುಗಾರಿಕೆಗೆ ಕೇಂದ್ರದಿಂದ ₹4,969 ಕೋಟಿ ಅನುದಾನ

ನವದೆಹಲಿ: 4,969.62 ಕೋಟಿ ರೂ.ಗಳ ಪ್ರಸ್ತಾವನೆಗಳಿಗೆ ಕೇಂದ್ರದ ಮೀನುಗಾರಿಕೆ ಇಲಾಖೆ ಅನುಮೋದನೆ ನೀಡಿದೆ. ಸಣ್ಣ ಮೀನುಗಾರ ಸಮುದಾಯಗಳು ಹಾಗೂ ಸಾಂಪ್ರದಾಯಿಕ ಮೀನುಗಾರರ ಅಭಿವೃದ್ಧಿಗಾಗಿ ಮತ್ತು ಅವರ...

ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್.ಐ.ಆರ್. : ಸಿದ್ದರಾಮಯ್ಯ

ಬೆಂಗಳೂರು : ಚಂದ್ರಶೇಖರ ಸ್ವಾಮೀಜಿ ಅವರ ಪ್ರಕರಣದಲ್ಲಿ ಪೊಲೀಸರು ಕಾನೂನಿನ ದೃಷ್ಟಿಯಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ಕಾನೂನಿನ ಚೌಕಟ್ಟಿನೊಳಗೆ ಬಂದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇಲ್ಲವಾದರೆ...

ಶಾಂತಿ, ಸೌಹಾರ್ದತೆ ಕಾಪಾಡಬೇಕು : ಸಂಭಲ್ ಜಾಮಾ ಮಸೀದಿ

ಹೊಸದಿಲ್ಲಿ: ಸಂಭಲ್ ಜಾಮಾ ಮಸೀದಿಯ ಆವರಣದಲ್ಲಿನ ಸಮೀಕ್ಷೆಗೆ ಸುಪ್ರೀಂಕೋರ್ಟ್ ತಡೆ ನೀಡಿದ್ದು, ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಹೇಳಿದೆ. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅಲಹಾಬಾದ್...

99.17 crore released to Karnataka

The central government has taken steps to globally develop major tourist destinations that are not so popular in...