spot_img
spot_img

ಮೋದಿ ಸರ್ಕಾರ ಕೈಗೊಂಡ ಮಹತ್ವದ ತೀರ್ಮಾನಗಳು ಏನು? ಕೇಂದ್ರ ಸರ್ಕಾರದ ಮೆಗಾ ಪ್ಲಾನ್‌ ಏನು?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಳೆ ಹುಟ್ಟುಹಬ್ಬದ ಸಂಭ್ರಮ. 3ನೇ ಬಾರಿಗೆ ಪ್ರಧಾನಮಂತ್ರಿ ಆಗಿರುವ ಮೋದಿ ಅವರು ನಾಳೆ 74ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಇದರ ಜೊತೆಗೆ ನಾಳೆ ಅಂದ್ರೆ ಸೆಪ್ಟೆಂಬರ್ 17ಕ್ಕೆ  ಮೋದಿ 3.O ಸರ್ಕಾರ ನೂರು ದಿನಗಳನ್ನು ಪೂರೈಸಲಿದೆ.

ಮೊದಲ ನೂರು ದಿನಗಳಲ್ಲಿ ಮಹತ್ವದ ಯೋಜನೆಗಳಿಗೆ ಮೋದಿ ಚಾಲನೆ ನೀಡಿದ್ದರು. ಚುನಾವಣೆಗೂ ಮುನ್ನವೇ 100 ದಿನಗಳ ರೋಡ್ ಮ್ಯಾಪ್​ ಸಿದ್ಧಪಡಿಸಲು ಮೋದಿ ಸೂಚಿಸಿದ್ದ ಎಲ್ಲರಿಗೂ ಗೊತ್ತಿರುವ ವಿಚಾರವೇ. ಅದರಂತೆ ಮೋದಿ 3.0 ಸರ್ಕಾರ ಮೊದಲ 100 ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿದೆ ಈ ಮೊದಲ 100 ದಿನಗಳಲ್ಲಿ ಮೋದಿ ಸರ್ಕಾರ ಕೈಗೊಂಡ ಮಹತ್ವದ ತೀರ್ಮಾನಗಳು ಏನು ಅನ್ನೋದನ್ನು ನೋಡುವುದಾದರೆ.

ಇದನ್ನೂ ಓದಿ:ಸೂಪರ್‌ ಪ್ಲಾನ್​ BSNL: ಅನಿಯಮಿತ ಕರೆ, 320GB ಡೇಟಾ.. 160 ದಿನಗಳ ವ್ಯಾಲಿಡಿಟಿ .!

ಮೋದಿ ಸರ್ಕಾರದ 7 ಸಾಧನೆಗಳು

  • ಮೊದಲ ನೂರು ದಿನಗಳಲ್ಲಿ ಬರೋಬ್ಬರಿ 15 ಲಕ್ಷ ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಯೋಜನೆಗೆ ಮೋದಿ ಸರ್ಕಾರ ಚಾಲನೆ ನೀಡಿದೆ
  • ಈ ನೂರು ದಿನದಲ್ಲಿ ದೇಶಾದ್ಯಂತ 11 ಲಕ್ಷ ಲಕ್​ಪತಿ ದೀದಿಯರ ಸೃಷ್ಟಿ. ಮಹಿಳಾ ಸಬಲೀಕರಣಕ್ಕೆಂದೇ ಜಾರಿಗೆ ಬಂದ ಈ ಯೋಜನೆಯಲ್ಲಿ 11 ಲಕ್ಷ ಮಹಿಳೆಯರೂ ಲಕ್​ಪತಿ ದೀದಿಗಳ ಸೃಷ್ಟಿಯಾಗಿದೆ. ಒಟ್ಟಾರೆ ದೇಶದಲ್ಲಿ 1 ಕೋಟಿ ಲಕ್​ಪತಿ ದೀದಿಯರು ಇದ್ದಾರೆ.
  • ಮೋದಿ ಸರ್ಕಾರ ಕಳೆದ ಎರಡು ಅವಧಿಯಲ್ಲಿ ಅತಿಹೆಚ್ಚು ಗಮನ ಕೊಟ್ಟಿದ್ದು ಮೂಲಸೌಕರ್ಯ ಅಭಿವೃದ್ಧಿಯ ಕಡೆಗೆ. ಈ ಕ್ಷೇತ್ರದಲ್ಲಿ ಕಳೆದ 100 ದಿನಗಳಲ್ಲಿ 3 ಲಕ್ಷ ಕೋಟಿ ವೆಚ್ಚದ ಯೋಜನೆಗೆ ಚಾಲನೆ ನೀಡಲಾಗಿದೆ.
  • 4-ಪಿಎಂ ಗ್ರಾಮ್ ಸಡಕ್ ಯೋಜನೆಯಡಿ 25 ಸಾವಿರ ಗ್ರಾಮಗಳಿಗೆ 49 ಸಾವಿರ ಕೋಟಿ ವೆಚ್ಚದಲ್ಲಿ ರಸ್ತೆ ಸಂಪರ್ಕ
  • 76, 200 ಕೋಟಿ ರೂ ವೆಚ್ಚದಲ್ಲಿ ಮಹಾರಾಷ್ಟ್ರದ ವಧವನ್ ಪೋರ್ಟ್ ನಿರ್ಮಾಣಕ್ಕೆ ಶಂಕುಸ್ಥಾಪನೆ
  • ದೇಶದಲ್ಲಿ 75 ಸಾವಿರ ಹೊಸ ಮೆಡಿಕಲ್ ಸೀಟುಗಳ ಮಂಜೂರು, ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ
  • ದೇಶದಲ್ಲಿ 70 ವರ್ಷ ಮೇಲ್ಪಟ್ಟ ಎಲ್ಲರಿಗೂ ಆಯುಷ್ಮಾನ್ ಭಾರತ್ ಯೋಜನೆಯಡಿ 5 ಲಕ್ಷ ರೂವರೆಗೆ ಉಚಿತ ಚಿಕಿತ್ಸೆಗೆ ಒಪ್ಪಿಗೆ

ಸದ್ಯ ಇವೆಲ್ಲವೂ ಮೋದಿ ಸರ್ಕಾರದ ನೂರು ದಿನಗಳ ಸಾಧನೆ. ಆದ್ರೆ ಇದು ಇಲ್ಲಿಗೆ ನಿಂತಿಲ್ಲ. ಇನ್ನೂ ಅನೇಕ ಯೋಜನೆಗಳನ್ನು ಜಾರಿಗೆ ತರಲು ಮೋದಿ ಸರ್ಕಾರ ನಿರ್ಧರಿಸಿದೆ.

ಇದನ್ನೂ ಓದಿ : ದೆಹಲಿ ಸಿಎಂ ವದಂತಿ ನಡುವೆ ಸಿಸೋಡಿಯಾ – ಅರವಿಂದ್ ಕೇಜ್ರಿವಾಲ್ ಭೇಟಿ ಸಭೆ ತೀವ್ರ ಕುತೂಹಲ.!

1-ಇದೇ ಅವಧಿಯಲ್ಲಿ ದೇಶದಲ್ಲಿ ಒನ್ ನೇಷನ್, ಒನ್ ಎಲೆಕ್ಷನ್ ಜಾರಿ
2014ರಲ್ಲಿ ಮೊದಲ ಬಾರಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಪ್ರಧಾನಿ ನರೇಂದ್ರ ಮೋದಿ ಒನ್ ನೇಷನ್ ಒನ್ ಎಲೆಕ್ಷನ್ ಅಂದ್ರೆ ಒಂದು ರಾಷ್ಟ್ರ ಒಂದು ಚುನಾವಣೆಯ ಬಗ್ಗೆ ಮಾತನಾಡುತ್ತಿದ್ದಾರೆ. ದೇಶದಲ್ಲಿ ಪದೇ ಪದೇ ಚುನಾವಣೆಗಳು ನಡೆಯುವುದರಿಂದ ಅತಿಯಾದ ವೆಚ್ಚ ಉಂಟಾಗುತ್ತದೆ. ಹೀಗಾಗಿ ಒಂದು ದೇಶ ಒಂದು ಚುನಾವಣೆ ಅಡಿಯಲ್ಲಿ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯನ್ನು ದೇಶದೆಲ್ಲೆಡೆ ಏಕಕಾಲಕ್ಕೆ ನಡೆಸುವ ಚಿಂತನೆಯನ್ನು 2014ರಿಂದಲೂ ಮೋದಿ ಸರ್ಕಾರ ಮಾಡುತ್ತಿದೆ. ಈ ಬಾರಿ ಅದನ್ನು ಅನುಷ್ಠಾನಕ್ಕೆ ತರುತ್ತಾರಾ ಅನ್ನುವ ಪ್ರಶ್ನೆ ಇನ್ನೂ ಇದೆ.

2-ದೇಶದಲ್ಲಿ ಸಮಾನ ನಾಗರಿಕ ಸಂಹಿತೆಯೂ ಜಾರಿ, ಐದಾರು ರಾಜ್ಯಗಳಲ್ಲಿ ಈ ಬಗ್ಗೆ ಅಧ್ಯಯನ
ಸಮಾನ ನಾಗರಿಕ ಸಂಹಿತೆ. ಯುನಿಫಾರ್ಮ್​ ಸಿವಿಲ್ ಕೋಡ್ ಜಾರಿಗೆ ಮೋದಿ ಸರ್ಕಾರ ಕಳೆದ ಬಾರಿಯ ಅಧಿಕಾರದ ಅವಧಿಯಲ್ಲಿಯೇ ಚಿಂತನೆ ನಡೆಸಿತ್ತು. ಬಿಜೆಪಿ ಆರಂಭದಿಂದಲೂ ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿಕೊಂಡು ಬರುತ್ತಿರುವ ಅತಿಮುಖ್ಯ ಅಂಶಗಳು ಅಂದ್ರೆ ಅದು ರಾಮಮಂದಿರ ನಿರ್ಮಾಣ, ಜಮ್ಮು ಕಾಶ್ಮೀರದಿಂದ ಆರ್ಟಿಕಲ್ 370 ತೆರವು ಹಾಗೂ ಸಮಾನ ನಾಗರಿಕ ಸಂಹಿತೆಯ ಜಾರಿ. ಈಗಾಗಲೇ ಎರಡು ಪ್ರಮುಖ ಅಂಶಗಳನ್ನು ಬಿಜೆಪಿ ಪೂರ್ಣಗೊಳಿಸಿದ್ದು ಈಗ ಸಮಾನ ನಾಗರಿ ಸಂಹಿತೆಯನ್ನು ಈ ಅವಧಿಯಲ್ಲಿ ಜಾರಿಗೆ ತರುವ ಚಿಂತನೆಯಲ್ಲಿದೆ.

3-ಜನಗಣತಿ ಜೊತೆಗೆ ಜಾತಿ ಗಣತಿಗೂ ಮುಕ್ತ ಮನಸ್ಸು ಹೊಂದಿರುವ ಕೇಂದ್ರ ಸರ್ಕಾರ
ಇದರ ಜೊತೆಗೆ ಈ ಮೋದಿ 3.0 ಅವಧಿಯಲ್ಲಿ ಜನಗಣತಿ ಜೊತೆ ಜೊತೆಗೆ ಜಾತಿ ಗಣತಿಯನ್ನು ಮಾಡುವ ಉದ್ದೇಶವನ್ನು ಮೋದಿ ಸರ್ಕಾರ ಹೊಂದಿದೆ. ಮೋದಿ ಸರ್ಕಾರ ತನ್ನ ಮೂರನೇ ಅವಧಿಯಲ್ಲಿ ಈ ಒಂದು ಗಣತಿಯನ್ನುಕ ಕೈಗೊಳ್ಳುವ ಎಲ್ಲಾ ಸಾಧ್ಯತೆಗಳು ಇವೆ

4-ದೇಶದಲ್ಲಿ ರಸ್ತೆ, ರೈಲು, ಮೆಟ್ರೋ, ವಿಮಾನ ನಿಲ್ದಾಣ ಸೇರಿ ಮೂಲಸೌಕರ್ಯ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ
ರಸ್ತೆ ಹಾಗೂ ರೈಲು ಸಂಪರ್ಕ ವಿಚಾರದಲ್ಲಿ ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ ದೊಡ್ಡ ಮಟ್ಟದ ಕ್ರಾಂತಿಯನ್ನು ಮಾಡಿದೆ ಅದರ ಜೊತೆಗೆ ಮೆಟ್ರೋ ಹಾಗೂ ವಿಮಾನ ನಿಲ್ದಾಣಗಳನ್ನ ಸೇರಿ ಮೂಲಕಸೌಕರ್ಯ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿಯನ್ನ ಮಾಡುವ ಉದ್ದೇಶ ಮೋದಿ ಸರ್ಕಾರದ್ದಿದೆ.

ಇದನ್ನೂ ಓದಿ :ಬಳ್ಳಾರಿಯಲ್ಲಿ ಹೆಚ್ಚಿದ ಭದ್ರತೆ, ಚೆಕ್ ಪೋಸ್ಟ್; ಈದ್ ಮಿಲಾದ್-ಗಣೇಶ ಮೂರ್ತಿ ಮೆರವಣಿಗೆ.!!!

5-ಸರ್ಕಾರಿ, ಖಾಸಗಿ ರಂಗದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಒತ್ತು ನೀಡುವ ಗುರಿ
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅತಿಹೆಚ್ಚು ಟೀಕೆಗೆ ಒಳಗಾಗಿದ್ದು ನಿರುದ್ಯೋಗ ವಿಷಯದಲ್ಲಿ. ದೇಶಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿಕೊಂಡೇ ಮೋದಿ ಸರ್ಕಾರ 2014ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಈ ಹಿನ್ನೆಲೆ ಈ ಬಾರಿ ಸರ್ಕಾರಿ ಹಾಗೂ ಖಾಸಗಿ ರಂಗದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡುವ ನಿಟ್ಟಿನಲ್ಲಿ ತನ್ನದೇ ಆದ ಗುರಿಯನ್ನು ಹೊಂದಿದೆ.

 

6-ದೇಶವು ಈಗ 3.75 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶ. 2029ರೊಳಗೆ 5 ಟ್ರಿಲಿಯನ್ ಡಾಲರ್‌ಗಿಂತ ದೊಡ್ಡ ಆರ್ಥಿಕತೆಯ ದೇಶದ ಗುರಿ
ವಿಶ್ವದ ಆರ್ಥಿಕ ಶಕ್ತಿಯಲ್ಲಿ ಈಗ ಭಾರತ 5ನೇ ಸ್ಥಾನದಲ್ಲಿ ಇದನ್ನು 3ನೇ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಗುರಿಯಲ್ಲಿದೆ ಮೋದಿ ಸರ್ಕಾರ. ಸದ್ಯ ಭಾರತ 3.75 ಟ್ರಿಲಿಯನ್ ಡಾಲರ್ ಆರ್ಥಿಕ ಶಕ್ತಿಯನ್ನು ಹೊಂದಿದ್ದು ಇದನ್ನು 5 ಟ್ರಿಲಿಯನ್ ಡಾಲರ್​ಗೆ ತೆಗದುಕೊಂಡು ಹೋಗುವ ಗುರಿಯನ್ನು ಮೋದಿ ಸರ್ಕಾರ ಇಟ್ಟುಕೊಂಡಿದೆ.

 

WhatsApp Group Join Now
Telegram Group Join Now
Instagram Account Follow Now
spot_img

Related articles

ಕಾರ್ಪೊರೇಟ್ ಯುಗದಲ್ಲಿ Ratan Tata ವ್ಯಾಪಾರ ಸಾಮ್ರಾಜ್ಯ ಕಟ್ಟಿದ್ದು ಹೇಗೆ ?

Ratan Tata Death ವಿಶ್ವದ ಅತ್ಯಂತ ಪ್ರಭಾವಿ ಕೈಗಾರಿಕೋದ್ಯಮಗಳಲ್ಲಿ ಒಬ್ಬರಾದ ರತನ್ ಟಾಟಾ. ೧೦೦ ಕ್ಕೂ ಹೆಚ್ಚು ದೇಶಗಳಲ್ಲಿ ೩೦ ಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿದ್ದು...

ಎರಡನೇ ಟೆಸ್ಟ್‌ಗೆ ತಂಡ ಹೇಗೆ ಇರಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ ? ಸ್ಟಾರ್​ ಆಟಗಾರನಿಗೆ ಕೊಕ್​​̤!

ಬಾಂಗ್ಲಾದೇಶ ತಂಡ ಟೆಸ್ಟ್ ಮತ್ತು ಟಿ20 ಸರಣಿಗಾಗಿ ಭಾರತದ ಪ್ರವಾಸ ಕೈಗೊಂಡಿದೆ. ಈಗಾಗಲೇ ಟೀಮ್​ ಇಂಡಿಯಾ 2 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0 ಮುನ್ನಡೆ...

ತಿರುಪತಿ ವಿಚಾರ : ಡಿಸಿಎಂ ಪವನ್ ಕಲ್ಯಾಣ್‌ಗೆ ಕ್ಷಮೆ ಕೇಳಿದ ನಟ ಯಾರು ?

ತಿರುಪತಿ-ತಿರುಮಲ ಲಡ್ಡು ಪ್ರಸಾದದಲ್ಲಿ ಕಲಬೆರಕೆ ವಿಚಾರ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಲಡ್ಡು ವಿಚಾರವಾಗಿ ಸಾಕಷ್ಟು ರೀಲ್ಸ್ ಗಳು ಮತ್ತು ಮೀಮ್ಸ್ ಗಳು ಹರಿದಾಡುತ್ತಿವೆ....

ನಿಮ್ಮ ಮನೆಯಲ್ಲಿರುವ ತುಪ್ಪ ಶುದ್ಧವಾಗಿದೆಯಾ ಕಲಬೆರಕೆವಾಗಿದೆಯಾ ? ಇಲ್ಲಿವೆ ಸರಳವಾದ ಉಪಾಯಗಳು.!

ತಿರುಪತಿ ಬಾಲಾಜಿಯ ಪ್ರಸಾದದಲ್ಲಿ ಕಲಬೆರಕೆ ಆಗಿದೆ ಎಂಬ ವಿಷಯ ತಿಳಿದಾಗಿನಿಂದ ತುಪ್ಪದ ವಿಚಾರದಲ್ಲಿ ಅನೇಕ ಸಂಶಯಗಳು ಮೂಡುತ್ತಿವೆ. ನಂದಿನಿ ತುಪ್ಪದ ಬಿಟ್ರೆ ಬೇರೆ ಯಾವ...