spot_img
spot_img

WHAT IS HYPOCHONDRIASIS DISORDER:ಕಾಯಿಲೆ ಇಲ್ಲದಿದ್ದರೂ ಯಾವುದೋ ರೋಗ ನಿಮಗಿದೆ ಅನಿಸುತ್ತಿದೆಯೇ?

spot_img
spot_img

Share post:

Hypochondriasis Disorder Symptoms News:

ವರದಿಗಳು ಸಾಮಾನ್ಯವಾಗಿದ್ದರೂ ವೈದ್ಯರು ಅವರ ಅನಾರೋಗ್ಯವನ್ನು ಪತ್ತೆಹಚ್ಚಲು ಸಾಧ್ಯವಿಲ್ಲ ಎಂದು ತಾವೇ ಭಾವಿಸುತ್ತಾರೆ. ಇದರಿಂದಾಗಿ ಅವರು ಪದೇ ಪದೇ ಆಸ್ಪತ್ರೆಗಳು ಹಾಗೂ ವೈದ್ಯರನ್ನು ಬದಲಾಯಿಸುತ್ತಾರೆ.

ಈ ರೀತಿ ಏಕೆ ಆಗುತ್ತದೆ? ಇದಕ್ಕೆ ಪ್ರಮುಖ ಕಾರಣಗಳೇನು ಎಂಬುದನ್ನು ತಿಳಿದುಕೊಳ್ಳೋಣ.ಕೆಲವರಿಗೆ ಯಾವುದೇ ಕಾಯಿಲೆ ಇಲ್ಲದಿದ್ದರೂ ಕೂಡ ಅವರು ಯಾವುದೋ ಕಾಯಿಲೆಯಿಂದ ಬಳಲುತ್ತಿದ್ದೇವೆ ಎಂದು ಅಂದುಕೊಳ್ಳುತ್ತಾರೆ. ಅವರು ಆಸ್ಪತ್ರೆಗಳಿಗೆ ತೆರಳಿ ಹೋಗಿ ಎಲ್ಲ ರೀತಿಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಾರೆ.

Research reveals that:ಪರಿಣಾಮವಾಗಿ ಜನರು ಯಾವುದೇ ರೀತಿಯ ಕಾಯಿಲೆ ಇಲ್ಲದಿದ್ದರೂ ಸಹ ಯಾವುದೋ ರೀತಿಯ ಕಾಯಿಲೆ ಇರುವ ಕುರಿತು ಯೋಚಿಸುತ್ತಾರೆ. ಈ ರೀತಿಯ ಮಾನಸಿಕ ಸ್ಥಿತಿಯನ್ನುHYPOCHONDRIASIS ಎಂದು ತಿಳಿಸುಲಾಗುತ್ತದೆ ಎನ್ನುತ್ತಾರೆ ತಜ್ಞರು.

2018ರಲ್ಲಿ ಜರ್ನಲ್ ಆಫ್ ಕ್ಲಿನಿಕಲ್ ಸೈಕಾಲಜಿಯಲ್ಲಿ ಪ್ರಕಟವಾದ (Journal of Clinical Psychology) ‘HYPOCHONDRIASIS: ಎ ರಿವ್ಯೂ ಆಫ್ ದಿ ಲಿಟರೇಚರ್’ (Hypochondriasis: A Review of the Literature) ಎಂಬ ಅಧ್ಯಯನ ತಿಳಿಸುತ್ತದೆ. ನಮ್ಮಲ್ಲಿ ಹಿಂದಿನದಕ್ಕೆ ಹೋಲಿಸಿದರೆ ನಮ್ಮ ಸಮಾಜದಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ತುಂಬಾ ಹೆಚ್ಚಾಗಿದೆ. ಟಿವಿ ಹಾಗೂ ನಿಯತಕಾಲಿಕೆಗಳಲ್ಲಿ ಆರೋಗ್ಯ ಲೇಖನಗಳನ್ನು ಓದುವುದು ಮಾತ್ರವಲ್ಲದೇ, ಅವುಗಳನ್ನು ಉಳಿಸುವವರೂ ಅನೇಕರು ಇದ್ದಾರೆ.

ಈ ಹಿನ್ನೆಲೆಯಲ್ಲಿಯೇ ಅವರು ಓದುವ ಪ್ರತಿಯೊಂದು ಅನುಮಾನಾಸ್ಪದ ಗುಣಲಕ್ಷಣಗಳನ್ನು ತಮ್ಮ ಮೇಲೆ ಆಗುತ್ತವೆಯೇ ಎಂಬ ಬಗ್ಗೆ ಅವರಿಗೆ ಅನುಮಾನವಿರುತ್ತದೆ.

Depressed:ಅವರು ತಜ್ಞ ವೈದ್ಯರನ್ನು ಭೇಟಿ ಮಾಡಲು ಹೋಗುತ್ತಾರೆ. ಈ ಅನುಮಾನಗಳನ್ನು ನಿವಾರಿಸಲು ದುಬಾರಿ ಪರೀಕ್ಷೆಗಳಿಗೆ ಕೂಡ ಒಳಗಾಗುತ್ತಾರೆ. ಅವರು ಖಿನ್ನತೆಗೆ ಒಳಗಾಗುತ್ತಾರೆ ಹಾಗೂ ತಮ್ಮನ್ನು ಮಾತ್ರವಲ್ಲದೇ ತಮ್ಮ ಕುಟುಂಬ ಸದಸ್ಯರಿಗೂ ನೋವುಂಟು ಮಾಡುತ್ತಾರೆ.

ಕುಟುಂಬದಲ್ಲಿ ಯಾರಾದರೂ ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಯಿಂದ ಸತ್ತಾಗ, ತಮಗೂ ಅದೇ ಕಾಯಿಲೆಗಳು ಬರುತ್ತವೆ ಎಂದು ಅವರು ಭಯಪಡುತ್ತಾರೆ. ಅವರು ತಮ್ಮ ದೇಹದಲ್ಲಿ ಕಾಣುವ ಪ್ರತಿಯೊಂದು ಸಣ್ಣ ದೋಷದ ಬಗ್ಗೆಯೂ ಹೆಚ್ಚು ಚಿಂತಿಸುತ್ತಾರೆ.

What do the experts say?:ಕೆಲವು ಜನರು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ನೋಡಿದಾಗ ಅವರ ರಕ್ತದೊತ್ತಡ ಬೇಗನೆ ಏರುತ್ತದೆ. ಅವರು ಆಗಾಗ್ಗೆ ತೀವ್ರ ಒತ್ತಡದಿಂದಾಗಿ ಖಿನ್ನತೆಗೆ ಒಳಗಾಗುತ್ತಾರೆ.

ವೈದ್ಯರು ಕೂಡ ಅವರಿಗೆ ಎಂತಹ ಯಾವರೀತಿಯ ಕಾಯಿಲೆ ಇದೆ ಎಂದು ಚಿಂತಿತರಾಗುತ್ತಾರೆ.ತಜ್ಞರು ತಿಳಿಸುವ ಪ್ರಕಾರ, ನಿಜವಾಗಿಯೂ ಕಾಯಿಲೆಗಳಿಲ್ಲದಿದ್ದರೂ ಅವರು ತಮಗೆ ಇವೆ ಎಂದು ದೃಢವಾಗಿ ನಂಬುವ ಮನಸ್ಥಿತಿಯಿಂದಾಗಿ ಇತರ ಸಮಸ್ಯೆಗಳು ಉದ್ಭವಿಸುತ್ತವೆ. ಈ ಕಾಯಿಲೆಯ ಬಗ್ಗೆ ಭಯದಿಂದ ರಕ್ತದೊತ್ತಡ ಹೆಚ್ಚಾಗುತ್ತದೆ

Exposure therapy:ರೋಗಿಗಳಿಗೆ ಆತಂಕ ಕಡಿಮೆ ಮಾಡಲು ಸಮಾಲೋಚನೆ ಹಾಗೂ ಔಷಧಗಳನ್ನು ನೀಡಲಾಗುವುದು. ಈ ರೋಗವನ್ನು ಹೆಚ್ಚಿನ ಔಷಧಗಳಿಂದ ನಿಯಂತ್ರಿಸಬಹುದು. ಔಷಧಗಳ ಜೊತೆಗೆ, ಕೆಲವು ಜನರಿಗೆ ಎಕ್ಸ್‌ಪೋಸರ್ ಥೆರಪಿ ಕೂಡ ನೀಡಲಾಗುವುದು.

ಇದರ ಭಾಗಿವಾಗಿ ರೋಗಿಯು ಶಂಕಿಸುವ ಕಾಯಿಲೆಯಿಂದ ನಿಜವಾಗಿಯೂ ಬಳಲುತ್ತಿರುವ ಬಗ್ಗೆ ಮನವರಿಕೆ ಮಾಡಿಕೊಳ್ಳಲಾಗುತ್ತದೆ. ಆ ಲಕ್ಷಣಗಳನ್ನು ಗಮನಿಸಿದ ಬಳಿಕ ತಮಗೆ ಆ ಕಾಯಿಲೆ ಇಲ್ಲ ಹಾಗೂ ಅಸ್ವಸ್ಥತೆ ಕಡಿಮೆಯಾಗುತ್ತದೆ ಎಂಬ ವಿಶ್ವಾಸ ಅವರಲ್ಲಿ ಬರುತ್ತದೆ ಎಂದು ತಿಳಿಸುತ್ತಾರೆ. ಓರ್ವ ವ್ಯಕ್ತಿಯಲ್ಲಿ ಅಂತಹ ಲಕ್ಷಣಗಳು ಕಂಡು ಬಂದರೆ, ವಿಳಂಬ ಮಾಡದೇ ತಕ್ಷಣವೇ ಮನೋವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.

ಮಾನಸಿಕ ಅಸ್ವಸ್ಥತೆಗೆ ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯವಿದೆ. ಇದು ಒಂದು ಕಾಯಿಲೆ ಅಸ್ತಿತ್ವದಲ್ಲಿಲ್ಲದಿದ್ದರೂ ಸಹ ಅಸ್ತಿತ್ವದಲ್ಲಿದೆ ಎಂಬುದು ಭ್ರಮೆಯಾಗಿದೆ.

Important Note to Readers:ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

 

ಇದನ್ನು ಓದಿರಿ :DELHI ELECTIONS 2025:ಅಭಿವೃದ್ಧಿ, ಉತ್ತಮ ಆಡಳಿತಕ್ಕೆ ಸಿಕ್ಕ ಜಯ- ಪ್ರಧಾನಿ ಮೋದಿ.

 

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...