ಚಿತ್ರದುರ್ಗದ ರೇಣುಕಾಸ್ವಾಮಿ ಕೇಸ್‌ನಲ್ಲಿ ದರ್ಶನ್ ಗ್ಯಾಂಗ್ ಜೈಲಿನಲ್ಲೇ 100ಕ್ಕೂ ಹೆಚ್ಚು ದಿನಗಳನ್ನು ಕಳೆದಿದೆ. ಪೊಲೀಸರು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ ಬಳಿಕ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ನಟ ದರ್ಶನ್ ಸೇರಿ ಎಲ್ಲಾ 17 ಆರೋಪಿಗಳು ಚಾರ್ಜ್‌ಶೀಟ್ 3991 ಪುಟಗಳನ್ನು ನೋಡಿ ಶಾಕ್ ಆಗಿದ್ದರು. ಇದೀಗ ಜಾಮೀನಿಗಾಗಿ ನ್ಯಾಯಾಲಯಗಳ ಮೊರೆ ಹೋಗುತ್ತಿದ್ದಾರೆ.
ಇದನ್ನೂ ಓದಿ : ನಾಡ ಹಬ್ಬ ದಸರಾ ರಜೆ ಘೋಷಣೆ ; ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ ಗೊತ್ತಾ?
ದರ್ಶನ್ ಗ್ಯಾಂಗ್‌ನಲ್ಲಿ A1 ಪವಿತ್ರಾ ಗೌಡ ಅವರೇ ಮೊದಲಿಗೆ ಜಾಮೀನಿಗಾಗಿ ಅರ್ಜಿ ಹಾಕಿದ್ದರು. ಇದಾದ ಬಳಿಕ ದರ್ಶನ್ ಸೇರಿದಂತೆ ಪ್ರತಿಯೊಬ್ಬರು ಜಾಮೀನಿನ ನಿರೀಕ್ಷೆಯಲ್ಲಿ ಕೋರ್ಟ್ ಮೆಟ್ಟಿಲು ಏರುತ್ತಿದ್ದಾರೆ. ಜೈಲಿನ ಒಳಗೆ ಜಾಮೀನಿನ ಜಪ ಮಾಡುತ್ತಿರುವ ದರ್ಶನ್ ಗ್ಯಾಂಗ್ ಸದಸ್ಯರಿಗೆ ಮೊದಲ ಬಾರಿಗೆ ಬಿಡುಗಡೆಯ ಬಾಗಿಲು ತೆರೆದಿದೆ.
ಇದನ್ನೂ ಓದಿ : ಗುರುವನ್ನೇ ಮೀರಿಸಿದ ಶಿಷ್ಯ ರಿಷಬ್ ಪಂತ್ ; ಗಿಲ್ ಕ್ರಿಸ್ಟ್ ಶಾಕ್, ಪಂತ್ ಆಟಕ್ಕೆ.!!
ರೇಣುಕಾಸ್ವಾಮಿ ಕೇಸ್‌ನಲ್ಲಿ ಆರೋಪಿ ಆಗಿರುವ A16 ಕೇಶವ್ ಮೂರ್ತಿಗೆ ಇಂದು ಜಾಮೀನು ಮಂಜೂರು ಆಗಿದೆ. ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್ ಕೇಶವಮೂರ್ತಿಗೆ ಷರತ್ತು ಬದ್ಧ ಜಾಮೀನು ನೀಡಿದೆ. ನ್ಯಾ.ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ, ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ.
A16 ಕೇಶವಮೂರ್ತಿ ಅವರು ರೇಣುಕಾಸ್ವಾಮಿ ಕೇಸ್‌ನಲ್ಲಿ 5 ಲಕ್ಷ ರೂಪಾಯಿ ಹಣ ಪಡೆದು ಮೃತದೇಹ ಸಾಗಿಸುವಲ್ಲಿ ಭಾಗಿಯಾಗಿದ್ದರು. ಬಳಿಕ ಪೊಲೀಸರ ಮುಂದೆ ಸರೆಂಡರ್ ಆಗಿದ್ದಾರೆ.