spot_img
spot_img

ಪಟ್ಟಣಗೆರೆ ಶೆಡ್‌ನಲ್ಲಿ ನಿಜಕ್ಕೂ ನಡೆದಿದ್ದೇನು? A1-A17 ಪಾತ್ರ ಏನೇನು? ಇಲ್ಲಿದೆ ಕಂಪ್ಲಿಟ್‌ ಸ್ಟೋರಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಂಗಳೂರು: ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್‌ನಲ್ಲಿ ಹತ್ಯೆ ಮಾಡಿದ ಕೇಸ್‌ನಲ್ಲಿ ಭಾಗಿಯಾದ 17 ಆರೋಪಿಗಳ ಭವಿಷ್ಯ ಈಗ ನ್ಯಾಯಾಲಯದ ಅಂಗಳದಲ್ಲಿದೆ. ಈ ಕೇಸ್‌ನ ತನಿಖೆ ನಡೆಸಿದ ಪೊಲೀಸರು ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆ. 3991 ಪುಟಗಳ ಚಾರ್ಜ್‌ಶೀಟ್‌ನಲ್ಲಿ 17 ಆರೋಪಿಗಳ ಪಾತ್ರದ ಬಗ್ಗೆ ವಿವರವಾದ ಸಾಕ್ಷ್ಯ ಮತ್ತು ಕೃತ್ಯದಲ್ಲಿ ಭಾಗಿಯಾದ ಪಾತ್ರದ ಬಗ್ಗೆ ದಾಖಲಿಸಿದ್ದಾರೆ.

ಇದನ್ನೂ ಓದಿ :ರಾಕ್ಷಸನ ರೀತಿಯಲ್ಲಿ ವರ್ತನೆ; ರೇಣುಕಾಸ್ವಾಮಿ ಕೈಮುಗಿದು ಬೇಡಿಕೊಂಡರೂ ಬಿಡಲಿಲ್ಲವಂತೆ ದರ್ಶನ್

ರೇಣುಕಾಸ್ವಾಮಿ ಕೇಸ್‌ನಲ್ಲಿ A1 ಪವಿತ್ರಾಗೌಡ ಅವರೇ ಈ ಕೃತ್ಯಕ್ಕೆ ಮೂಲ ಕಾರಣ ಎಂದು ತನಿಖೆಯ ಆರಂಭದಿಂದಲೂ ಹೇಳಲಾಗಿದೆ. ಇದರ ಜೊತೆಗೆ A2 ದರ್ಶನ್, A3 ಪವನ್, A4 ರಾಘವೇಂದ್ರ, A5 ನಂದೀಶ್, A6 ಜಗದೀಶ್, A7 ಅನು, A8 ರವಿ, A9 ಧನರಾಜು, A10 ವಿನಯ್, A11 ನಾಗರಾಜು, A12 ಲಕ್ಷ್ಮಣ್, A13 ದೀಪಕ್, A14 ಪ್ರದೋಶ್, A15 ಕಾರ್ತಿಕ್, A16 ಕೇಶವಮೂರ್ತಿ, A17 ನಿಖಿಲ್ ಅವರ ಪಾತ್ರ ಏನು ಅನ್ನೋದನ್ನ ತಿಳಿಸಲಾಗಿದೆ.

ಇದನ್ನೂ ಓದಿ : ಕಾಂಗ್ರೇಸ್ನಲ್ಲಿ ಏನಾಗ್ತಿದೆ ಗೊತ್ತಾ? ಸಂಚಲನ ಮೂಡಿಸಿದ ಜಾರಕಿಹೊಳಿ ಹೈಕಮಾಂಡ್ ಗುಪ್ತ ಭೇಟಿ

A1 ಪವಿತ್ರಾಗೌಡ: ರೇಣುಕಾಸ್ವಾಮಿ ಕೊಲೆ ಮಾಡಲು ಮೂಲ ಕಾರಣವೇ ಇವರು. ಪಟ್ಟಣಗೆರೆ ಶೆಡ್‌ನಲ್ಲಿ ಪವಿತ್ರಾ ಗೌಡ ಅವರು ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಥಳಿಸಿದ್ದಾರೆ.

A2 ದರ್ಶನ್: ಚಿತ್ರದುರ್ಗದಲ್ಲಿದ್ದ ರೇಣುಕಾಸ್ವಾಮಿಯನ್ನು ಹಗರಣ ಮಾಡಲು ದರ್ಶನ್ ಅವರೇ ಸೂಚನೆ ನೀಡಿದ್ದಾರೆ. ಕಿಡ್ನ್ಯಾಪ್ ಮಾಡಿದ ಬಳಿಕ ಶೆಡ್‌ನಲ್ಲಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ನಂತರ ಕೊಲೆಯನ್ನು ಮುಚ್ಚಿ ಹಾಕಲು ದರ್ಶನ್ ಅವರು ಹಣ ಕೂಡ ನೀಡಿದ್ದ ಆರೋಪ ಹೊರಿಸಲಾಗಿದೆ.

A3 ಪವನ್: ಪವಿತ್ರಾ ಗೌಡ ಅವರು ನೀಡಿದ ಮಾಹಿತಿ ಮೇರೆಗೆ ರೇಣುಕಾಸ್ವಾಮಿಯ ಕಿಡ್ನ್ಯಾಪ್​ಗೆ ಪ್ಲಾನ್ ಮಾಡಿದ್ದಾರೆ. ಚಿತ್ರದುರ್ಗದ ರಘು ಅವರನ್ನು ಸಂಪರ್ಕ ಮಾಡಿದ್ದ ಪವನ್ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿಸುವಲ್ಲಿ ಪಾತ್ರ ವಹಿಸಿದ್ದಾರೆ. ಶೆಡ್​ನಲ್ಲಿ ಆರೋಪಿ ಪವನ್ ಅವರು ರೇಣುಕಾಸ್ವಾಮಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

A4 ರಾಘವೇಂದ್ರ: ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಇವರು. ರೇಣುಕಾಸ್ವಾಮಿಯನ್ನು ಹುಡುಕಿ, ಹುಡುಗರನ್ನ ಸೇರಿಸಿ ಕಿಡ್ನ್ಯಾಪ್ ಮಾಡಿದ್ದಾರೆ. ರೇಣುಕಾಸ್ವಾಮಿ ಧರಿಸಿದ್ದ ಚಿನ್ನಾಭರಣವನ್ನೂ ದೋಚಿದ್ದ ಆರೋಪ ಮಾಡಲಾಗಿದೆ.

A5 ನಂದೀಶ್: ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದ ಆರೋಪಿ ನಂದೀಶ್ ಅವರಾಗಿದ್ದಾರೆ. ಮೆಗ್ಗರ್ ಮೆಷಿನ್ ಬಳಸಿ ಕರೆಂಟ್ ಶಾಕ್ ನೀಡಲು ಸಹಾಯ ಮಾಡಿದ್ದು, ಮೃತದೇಹ ವಿಲೇವಾರಿ ಮಾಡುವಲ್ಲಿಯೂ ಇವರು ಪ್ರಮುಖ ಪಾತ್ರವಹಿಸಿದ್ದಾರೆ.

A6 ಜಗದೀಶ್: ರೇಣುಕಾಸ್ವಾಮಿ ಕಿಡ್ನ್ಯಾಪ್ ಮಾಡಿಕೊಂಡು ಬಂದವರಲ್ಲಿ ಇವರು ಮತ್ತೊಬ್ಬ ಆರೋಪಿ. ಹಣ ಪಡೆದು ಮೃತದೇಹ ಎಸೆಯೋದ್ರಲ್ಲಿ ಭಾಗಿಯಾಗಿದ್ದರು.

A7 ಅನು: ರೇಣುಕಾಸ್ವಾಮಿ ಕಿಡ್ನ್ಯಾಪ್ ಮಾಡಿಕೊಂಡು ಬಂದವರಲ್ಲಿ ಇವರೂ ಒಬ್ಬರು. ಅನು ಅವರು ಹಲ್ಲೆಯಲ್ಲಿ ಭಾಗಿಯಾಗಿಲ್ಲ ಮತ್ತು ಶವ ಎಸೆಯೋದ್ರಲ್ಲೂ ಭಾಗಿಯಾಗಿಲ್ಲ. ಆದರೆ ರೇಣುಕಾಸ್ವಾಮಿ ಮೈಮೇಲಿನ ಒಡವೆ ಕಸಿದಿದ್ದ ಆರೋಪವಿದೆ.

A8 ರವಿ: ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದರು. ರೇಣುಕಾಸ್ವಾಮಿ ಬೆಂಗಳೂರಿಗೆ ಕರೆತರುವಲ್ಲಿ ಆರೋಪಿ ರವಿ ಸಹಾಯ ಮಾಡಿದ್ದಾರೆ. ಹಣ ಪಡೆದು ಮೃತದೇಹ ಎಸೆಯೋದ್ರಲ್ಲಿ ಭಾಗಿಯಾಗಿದ್ದಾರೆ.

A9 ಧನರಾಜು: ರೇಣುಕಾಸ್ವಾಮಿಯ ಮೇಲೆ ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಎಲೆಕ್ಟ್ರಿಕ್ ಮೆಗ್ಗರ್ ಮಷಿನ್ ಮೂಲಕ ಶಾಕ್ ಕೊಟ್ಟಿದ್ದ ಆರೋಪಿ ಇವರು.

A10 ವಿನಯ್: ಇವರು ದರ್ಶನ್ ಆಪ್ತನಾಗಿದ್ದು, ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಮಾಲೀಕರು. ರೇಣುಕಾಸ್ವಾಮಿಗೆ ಲಾಠಿ ಬೀಸಿ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

A11 ನಾಗರಾಜು: ದರ್ಶನ್​ನ ಅನಧಿಕೃತ ಮ್ಯಾನೇಜರ್ ಇವರು. ಶೆಡ್‌ನಲ್ಲಿ ಹಲ್ಲೆ ವೇಳೆ ರೇಣುಕಾಸ್ವಾಮಿಗೆ ಕಾಲಿನಿಂದ ಒದ್ದಿದ್ದಾರೆ ಅನ್ನೋ ಆರೋಪ ಹೊರಿಸಲಾಗಿದೆ.

A12 ಲಕ್ಷ್ಮಣ್: ದರ್ಶನ್ ಕಾರು ಚಾಲಕ ಇವರು. ಕೊಲೆಯಾದ ಸ್ಥಳದಲ್ಲಿ ಲಕ್ಷ್ಮಣ್ ಇದ್ದು, ಮೃತ ದೇಹವನ್ನು ಎಸೆಯಲು ಬೇಕಾದ ವ್ಯವಸ್ಥೆ ಮಾಡಿದ್ದಾರೆ.

A13 ದೀಪಕ್: ದರ್ಶನ್ ಆಪ್ತ, ನಿಖಿಲ್, ಕೇಶವಮೂರ್ತಿ, ಕಾರ್ತಿಕ್​ಗೆ ಹಣ ಹಂಚಿಕೆ ಮಾಡಿದ್ದು ದೀಪಕ್‌. ದರ್ಶನ್, ಪ್ರದೋಶ್ ಸೂಚನೆಯಂತೆ ತಲಾ 5 ಲಕ್ಷ ಹಣ ನೀಡಿದ್ದರು ಎನ್ನಲಾಗಿದೆ.

A14 ಪ್ರದೋಶ್: ಕೊಲೆ ಮಾಡಿದ್ದವರ ಖರ್ಚಿಗಾಗಿ 30 ಲಕ್ಷ ಹಣದ ವ್ಯವಸ್ಥೆ ಮಾಡಿದ್ದ ಆರೋಪ ಇವರ ಮೇಲಿದೆ. ಆರೋಪಿಗಳನ್ನು ದರ್ಶನ್​ಗೆ ಭೇಟಿ ಮಾಡಿಸಿ ಸರೆಂಡರ್ ಮಾಡಿಸಿದ್ದಾರೆ.

A15 ಕಾರ್ತಿಕ್: ಪಟ್ಟಣಗೆರೆ ಶೆಡ್​ನಲ್ಲಿ ಕೆಲಸ ಮಾಡುತ್ತಾರೆ. ರೇಣುಕಾಸ್ವಾಮಿಯ ಮೃತದೇಹ ಸಾಗಿಸಿ ಪೊಲೀಸರ ಮುಂದೆ ಸರೆಂಡರ್ ಆಗಿದ್ದಾರೆ.

A16 ಕೇಶವಮೂರ್ತಿ: 5 ಲಕ್ಷ ರೂಪಾಯಿ ಹಣ ಪಡೆದು ಶವದೇಹ ಸಾಗಿಸುವಲ್ಲಿ ಭಾಗಿಯಾಗಿದ್ದರು. ಬಳಿಕ ಪೊಲೀಸರ ಮುಂದೆ ಸರೆಂಡರ್ ಆಗಿದ್ದಾರೆ.

A17 ನಿಖಿಲ್: 5 ಲಕ್ಷ ರೂಪಾಯಿ ಹಣ ಪಡೆದು ಮೃತದೇಹ ಸಾಗಿಸುವಲ್ಲಿ ಭಾಗಿಯಾಗಿದ್ದರು. ಹಣ ಪಡೆದು ಪೊಲೀಸರ ಮುಂದೆ ಸರೆಂಡರ್ ಆಗಿದ್ದರು.

 

WhatsApp Group Join Now
Telegram Group Join Now
Instagram Account Follow Now
spot_img

Related articles

ಕಾರ್ಪೊರೇಟ್ ಯುಗದಲ್ಲಿ Ratan Tata ವ್ಯಾಪಾರ ಸಾಮ್ರಾಜ್ಯ ಕಟ್ಟಿದ್ದು ಹೇಗೆ ?

Ratan Tata Death ವಿಶ್ವದ ಅತ್ಯಂತ ಪ್ರಭಾವಿ ಕೈಗಾರಿಕೋದ್ಯಮಗಳಲ್ಲಿ ಒಬ್ಬರಾದ ರತನ್ ಟಾಟಾ. ೧೦೦ ಕ್ಕೂ ಹೆಚ್ಚು ದೇಶಗಳಲ್ಲಿ ೩೦ ಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿದ್ದು...

ಎರಡನೇ ಟೆಸ್ಟ್‌ಗೆ ತಂಡ ಹೇಗೆ ಇರಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ ? ಸ್ಟಾರ್​ ಆಟಗಾರನಿಗೆ ಕೊಕ್​​̤!

ಬಾಂಗ್ಲಾದೇಶ ತಂಡ ಟೆಸ್ಟ್ ಮತ್ತು ಟಿ20 ಸರಣಿಗಾಗಿ ಭಾರತದ ಪ್ರವಾಸ ಕೈಗೊಂಡಿದೆ. ಈಗಾಗಲೇ ಟೀಮ್​ ಇಂಡಿಯಾ 2 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0 ಮುನ್ನಡೆ...

ತಿರುಪತಿ ವಿಚಾರ : ಡಿಸಿಎಂ ಪವನ್ ಕಲ್ಯಾಣ್‌ಗೆ ಕ್ಷಮೆ ಕೇಳಿದ ನಟ ಯಾರು ?

ತಿರುಪತಿ-ತಿರುಮಲ ಲಡ್ಡು ಪ್ರಸಾದದಲ್ಲಿ ಕಲಬೆರಕೆ ವಿಚಾರ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಲಡ್ಡು ವಿಚಾರವಾಗಿ ಸಾಕಷ್ಟು ರೀಲ್ಸ್ ಗಳು ಮತ್ತು ಮೀಮ್ಸ್ ಗಳು ಹರಿದಾಡುತ್ತಿವೆ....

ನಿಮ್ಮ ಮನೆಯಲ್ಲಿರುವ ತುಪ್ಪ ಶುದ್ಧವಾಗಿದೆಯಾ ಕಲಬೆರಕೆವಾಗಿದೆಯಾ ? ಇಲ್ಲಿವೆ ಸರಳವಾದ ಉಪಾಯಗಳು.!

ತಿರುಪತಿ ಬಾಲಾಜಿಯ ಪ್ರಸಾದದಲ್ಲಿ ಕಲಬೆರಕೆ ಆಗಿದೆ ಎಂಬ ವಿಷಯ ತಿಳಿದಾಗಿನಿಂದ ತುಪ್ಪದ ವಿಚಾರದಲ್ಲಿ ಅನೇಕ ಸಂಶಯಗಳು ಮೂಡುತ್ತಿವೆ. ನಂದಿನಿ ತುಪ್ಪದ ಬಿಟ್ರೆ ಬೇರೆ ಯಾವ...