WhatsApp Added New Features News:
ಜನಪ್ರಿಯ ಮೆಸೇಜಿಂಗ್ ಆ್ಯಪ್ WHATSAPP ಸದ್ಯ ತನ್ನ ಬಳಕೆದಾರರಿಗೆ ಅನುಕೂಲಕರವಾದ ಫೀಚರ್ಸ್ಗಳನ್ನು ಪರಿಚಯಿಸಿದೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. WHATSAPP ಬಳಕೆದಾರರಿಗೆ ಶುಭ ಸುದ್ದಿ. ಜನಪ್ರಿಯ ಇನ್ಸ್ಟೆಂಟ್ ಮೆಸೇಜಿಂಗ್ ಆಪ್ WHATSAPP ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಈಗ ಬಳಕೆದಾರರಿಗೆ ವಿಡಿಯೋಗಳು ಮತ್ತು ಫೋಟೋಗಳನ್ನು ನೇರವಾಗಿ ಚಾಟ್‌ನಲ್ಲಿ ಎಡಿಟ್ ಮಾಡಲು 30 ರೀತಿಯ ವಿಜುವಲ್ ಎಫೆಕ್ಟ್‌ಗಳನ್ನು ನೀಡುತ್ತದೆ.
ಆ್ಯಪ್ನಿಂದ ಮತ್ತೊಬ್ಬರಿಗೆ ಸ್ಟಿಕ್ಕರ್ ಪ್ಯಾಕ್‌ಗಳನ್ನು ನೇರವಾಗಿ ಹಂಚಿಕೊಳ್ಳಲು ಮತ್ತು ಸೆಲ್ಫಿಗಳಿಂದ ಸ್ಟಿಕ್ಕರ್‌ಗಳನ್ನು ಕ್ರಿಯೆಟ್ ಮಾಡಲು ಹೊಸದಾಗಿ ಫೀಚರ್ಸ್ವೊಂದನ್ನು ಸಹ ಪರಿಚಯಿಸಿದೆ. ಈ ಆ್ಯಪ್ ರಿಯಾಕ್ಷನ್ ಫೀಚರ್ ಅನ್ನು ಸಹ ಸುಧಾರಿಸಿದೆ. WHATSAPPನಲ್ಲಿ ಹೊಸ ವೈಶಿಷ್ಟ್ಯಗಳು ಈ ಕೆಳಗಿನಂತಿವೆ.
Camera Effects: ಈಗ WHATSAPP ಕ್ಯಾಮೆರಾ ಬಳಸಿ ತೆಗೆದ ವಿಡಿಯೋಗಳು ಮತ್ತು ಫೋಟೋಗಳಿಗೂ ಈ ಫೀಚರ್ಸ್ ಲಭ್ಯವಿದೆ. ಬಳಕೆದಾರರು WHATSAPPನಲ್ಲಿ ತೆಗೆದ ಫೋಟೋಗಳು ಮತ್ತು ರೆಕಾರ್ಡ್ ಮಾಡಿದ ವಿಡಿಯೋಗಳಿಗೆ 30 ಫಿಲ್ಟರ್‌ಗಳು, ಬ್ಯಾಕ್ಗೌಂಡ್ಸ್ ಮತ್ತು ಎಫೆಕ್ಟ್‌ಗಳನ್ನು ಡೈರೆಕ್ಟ್ ಆಗಿಯೇ ಬಳಸಬಹುದು.
WHATSAPP ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿಡಿಯೋ ಕರೆಗಳಿಗಾಗಿ ಹೊಸ ಫಿಲ್ಟರ್‌ಗಳು, ಬ್ಯಾಕ್ಗ್ರೌಂಡ್ಸ್ ಮತ್ತು ಎಫೆಕ್ಟ್‌ಗಳನ್ನು ಪರಿಚಯಿಸಿತು. ಈ ಫೀಚರ್ಸ್ ವಿಡಿಯೋ ಕರೆಗಳಿಗೆ ಮಾತ್ರ ಇತ್ತು.
Selfie Stickers: ಆಗ ಬಳಕೆದಾರರು ಸೆಲ್ಫಿ ತೆಗೆದುಕೊಂಡು ಅದನ್ನು ಸ್ಟಿಕ್ಕರ್ ಆಗಿ ಪರಿವರ್ತಿಸಲು ಅನುಮತಿಸುತ್ತದೆ. ಈ ವೈಶಿಷ್ಟ್ಯವು ಈಗಾಗಲೇ ಆಂಡ್ರಾಯ್ಡ್‌ನಲ್ಲಿ ಲಭ್ಯವಿದೆ. ಇದು ಶೀಘ್ರದಲ್ಲೇ iOS ನಲ್ಲೂ ಲಭ್ಯವಾಗಲಿದೆ.ಯಾವುದೇ ಸೆಲ್ಫಿಯನ್ನು ಕಸ್ಟಮ್ ಸ್ಟಿಕ್ಕರ್ ಆಗಿ ಪರಿವರ್ತಿಸುವ ಸೌಲಭ್ಯವನ್ನು ವಾಟ್ಸ್ಆ್ಯಪ್ ಈಗ ನೀಡುತ್ತದೆ.
ಮೊದಲು ನೀವು ಅಪ್ಲಿಕೇಶನ್‌ನಲ್ಲಿರುವ ಕ್ಯಾಮೆರಾ ಬಳಸಬೇಕಾಗುತ್ತದೆ. ಬಳಕೆದಾರರು ಸ್ಟಿಕ್ಕರ್ಸ್ ಟ್ಯಾಬ್‌ಗೆ ಹೋಗಿ ಕ್ರಿಯೇಟ್ ಸ್ಟಿಕ್ಕರ್ ಆಯ್ಕೆಯನ್ನು ಟ್ಯಾಪ್ ಮಾಡಬೇಕು. ನಂತರ ವಾಟ್ಸ್ಆ್ಯಪ್ ಕ್ಯಾಮೆರಾ ಓಪನ್ ಆಗುತ್ತದೆ.
Sharing Sticker Packs: WHATSAPP ಸ್ಟಿಕ್ಕರ್ ಪ್ಯಾಕ್‌ಗಳನ್ನು ಹಂಚಿಕೊಳ್ಳುವುದನ್ನು ಸುಲಭಗೊಳಿಸುತ್ತಿದೆ. ಈಗ WHATSAPP ಬಳಕೆದಾರರು ತಮ್ಮ ಚಾಟ್‌ನಿಂದ ನೇರವಾಗಿ ತಮ್ಮ ಸ್ನೇಹಿತರಿಗೆ ಅವುಗಳನ್ನು ಕಳುಹಿಸಬಹುದಾಗಿದೆ.
Quick Reaction: WHATSAPP ಸಂದೇಶಗಳಿಗೆ ರಿಯಾಕ್ಷನ್ಸ್ ನೀಡುವುದು ಸಹ ಸುಲಭಗೊಳಿಸಿದೆ. ಬಳಕೆದಾರರು ತಾವು ಸ್ವೀಕರಿಸುವ ಸಂದೇಶವನ್ನು ಎರಡು ಬಾರಿ ಟ್ಯಾಪ್ ಮಾಡುವ ಮೂಲಕ ತಮ್ಮ ರಿಯಾಕ್ಷನ್ಸ್ ಕಳುಹಿಸಬಹುದು. ಅವರು ಹೆಚ್ಚು ಬಳಸಿದ ರಿಯಾಕ್ಷನ್ಸ್ ಸಹ ನೀವು ತ್ವರಿತವಾಗಿ ಸ್ಕ್ರೋಲ್ ಮಾಡಬಹುದು.
ಇವುಗಳಲ್ಲಿ ವಿಡಿಯೋ ಕರೆಗಳಿಗೆ ಹೊಸ ಎಫೆಕ್ಟ್ಗಳು, ಕರೆಗಳನ್ನು ಮಾಡಲು ಹೊಸ ಮಾರ್ಗಗಳು, ಗ್ರೂಪ್ ಕಾಲ್ಸ್ನಲ್ಲಿ ಆಯ್ದ ಜನರಿಗೆ ಮಾತ್ರ ನೋಟಿಫೀಕೆಶನ್ಗಳು ಮತ್ತು ಉತ್ತಮ ವಿಡಿಯೋ ಕರೆ ಗುಣಮಟ್ಟ ಸೇರಿವೆ.ಇವುಗಳ ಜೊತೆಗೆ, ಈ ವರ್ಷ ಹೆಚ್ಚಿನ ವೈಶಿಷ್ಟ್ಯಗಳನ್ನು ಸೇರಿಸುವುದಾಗಿ WHATSAPP ಹೇಳಿದೆ. ಡಿಸೆಂಬರ್ 2024 ರಲ್ಲಿ WHATSAPP ತನ್ನ ಐಫೋನ್, ಆ್ಯಂಡ್ರಾಯ್ಡ್ ಮತ್ತು ವೆಬ್ ಆಪ್ಗಳಲ್ಲಿ ಕರೆ ಮಾಡುವಿಕೆ ಸುಧಾರಿಸಿತು.
ಇದನ್ನು ಓದಿರಿ : SPECIAL DISHES FOR SON IN LAW : ಸಂಕ್ರಾಂತಿ ಹಬ್ಬಕ್ಕೆ ಮನೆಗೆ ಬಂದ ಅಳಿಯನಿಗೆ 452 ಬಗೆಯ ಖಾದ್ಯ