spot_img
spot_img

ಗ್ರೂಪ್​ ನೋಟಿಫಿಕೇಶನ್​ ನಿರ್ವಹಿಸಲು ಹೊಸ ಫೀಚರ್ ತಂದ ವಾಟ್ಸ್‌ಆ್ಯಪ್

spot_img
spot_img

Share post:

WhatsApp Group Notifications Feature: ಜನಪ್ರಿಯ ಮೆಸೇಜಿಂಗ್​ ಆ್ಯಪ್​ ವಾಟ್ಸ್‌ಆ್ಯಪ್​ ತನ್ನ ಬಳಕೆದಾರರಿಗೆ ಅದ್ಭುತ ಫೀಚರ್‌ವೊಂದನ್ನು ಪರಿಚಯಿಸಿದೆ.

ವಾಟ್ಸ್‌ಆ್ಯಪ್ ತನ್ನ ಗ್ರಾಹಕರಿಗೆ​ ಹೊಸ ಫೀಚರ್​ ಪರಿಚಯಿಸಿದೆ. ಇದು​ ಗ್ರೂಪ್​ ನೋಟಿಫಿಕೇಶನ್​ ನಿರ್ವಹಿಸಲು ಅವಕಾಶ ಕಲ್ಪಿಸುತ್ತದೆ. ಗ್ರೂಪ್​ನಲ್ಲಿ ಬರುವ ಸಂದೇಶಗಳು ಎಷ್ಟು ಕಿರಿಕಿರಿ ಉಂಟು ಮಾಡುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ.

ಯಾವುದೇ ಕೆಲಸ ಅಥವಾ ಇನ್ನಿತರ ಚಟುವಟಿಕೆಯಲ್ಲಿ ನಿರತರಾಗಿರುವಾಗ ಫೋನ್​ ಸದ್ದು ಮಾಡುತ್ತದೆ. ಇದರಿಂದ ನಮಗಷ್ಟೇ ಅಲ್ಲದೇ, ಪಕ್ಕದಲ್ಲಿರುವವರಿಗೂ ಕಿರಿಕಿರಿಯಾಗುತ್ತದೆ.

ಫೋನ್​ ಸದ್ದು ಮಾಡಿದ ತಕ್ಷಣವೇ ನಾವು ಯಾರ ಸಂದೇಶ ಬಂತು ಎಂದು ಚೆಕ್​ ಮಾಡುತ್ತೇವೆ. ಆಗ ನಮಗೆ ಇಷ್ಟವಿಲ್ಲದ ಸಂದೇಶವನ್ನು ನೋಡಿ ಕೊಂಚ ಬೇಸರಗೊಳ್ಳುತ್ತೇವೆ. ಹೀಗಾಗಿ ವಾಟ್ಸ್‌ಆ್ಯಪ್​​ ತನ್ನ ಬಳಕೆದಾರರಿಗೆ ಗ್ರೂಪ್​ ನೋಟಿಫಿಕೇಶನ್​ ಆಫ್​ ಮಾಡಲು ಅವಕಾಶ ನೀಡಿದೆ. ವಾಟ್ಸ್‌ಆ್ಯಪ್​ ಅಪ್​ಡೇಟ್​ ಮಾಡುವ ಮೂಲಕ ನೀವು ಈ ಫೀಚರ್​ನ ಲಾಭ ಪಡೆಯಬಹುದು.

WABetainfo ವೆಬ್​​ಸೈಟ್​ ಈ ಕುರಿತ ಸ್ಕ್ರೀನ್​ಶಾಟ್​ ಹಂಚಿಕೊಂಡಿದೆ. ಗ್ರೂಪ್​ ಚಾಟ್​ಗಳಿಗೆ ಅಲರ್ಟ್‌ಗಳನ್ನು ನಿರ್ವಹಿಸುವಾಗ ಬಳಕೆದಾರರು ಆ್ಯಕ್ಟಿವಿಟಿ ಫೀಚರ್​ ಅನ್ನು ನೋಡಬಹುದು. ಪ್ರತಿಯೊಂದು ಗ್ರೂಪ್​ ಚಾಟ್​ಗಳ ನೋಟಿಫಿಕೇಶನ್​ ಅನ್ನು ಮ್ಯೂಟ್​ ಮಾಡುವ ಆಯ್ಕೆಯನ್ನು ಬಳಕೆದಾರರಿಗೆ ಕಲ್ಪಿಸಲಾಗಿದೆ. ಹೊಸ ಹೈಲೆಟ್ಸ್​ಗಳ ಆಯ್ಕೆಯನ್ನೂ ಪಡೆಯಬಹುದು.

ವಾಟ್ಸ್‌ಆ್ಯಪ್​​ ಬಳಕೆದಾರರು​ ತಮಗೆ ಬೇಕಾದ ಗ್ರೂಪ್​ ನೋಟಿಫಿಕೇಶ್​ ಅನ್ನು ಸುಲಭವಾಗಿ ಮ್ಯೂಟ್​ ಮಾಡಬಹುದು. ಅಷ್ಟೇ ಅಲ್ಲ, ವಾಟ್ಸ್‌ಆ್ಯಪ್​​ ತನ್ನ ಬಳಕೆದಾರರಿಗೆ ಮುಖ್ಯವಾದ ಗ್ರೂಪ್​ಗಳಿಗೆ ಮಾತ್ರ ನೋಟಿಫಿಕೇಶನ್​ ಸಂದೇಶ ಬರುವಂತೆ ಸೆಟ್​ ಮಾಡಿಕೊಳ್ಳಬಹುದು. ಹೌದು, ಪ್ರತೀ ಮೆಸೇಜ್​ಗೆ ನೋಟಿಫಿಕೇಶನ್​ ಪಡೆಯುವ ಬದಲು ಬಳಕೆದಾರರು ಅವರಿಗೆ ಸಂಬಂಧಿಸಿದ ಗ್ರೂಪ್​ ಚಾಟ್​ಗಳಿಗೆ ಮಾತ್ರ ನೋಟಿಫಿಕೇಶನ್​ ಪಡೆಯಬಹುದಾಗಿದೆ.

ಈ ಫೀಚರ್​ ವರ್ಷಗಳಿಂದ ಡೀಫಾಲ್ಟ್​ ಆಗಿದೆ. ಆದ್ರೆ ಬಳಕೆದಾರರು ಗುಂಪು ಅಧಿಸೂಚನೆಗಳನ್ನು ಹೇಗೆ ಮ್ಯೂಟ್ ಮಾಡಬಹುದು ಎಂಬುದರ ಕುರಿತು ವಾಟ್ಸ್‌ಆ್ಯಪ್​​ ಈಗ ಎಚ್ಚೆತ್ತುಕೊಂಡಿದೆ.

ಈ ವೈಶಿಷ್ಟ್ಯವು ಪ್ರಸ್ತುತ ಆಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯ. ಮುಂಬರುವ ದಿನಗಳಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಾಗುವುದು.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...