spot_img
spot_img

ಹೊಸ ಫೀಚರ್​ ಪರಿಚಯಿಸಿದ ವಾಟ್ಸಾಪ್

spot_img
spot_img

Share post:

WhatsApp New Feature: ಬೀಟಾ ಪರೀಕ್ಷಕರಿಗೆ ವಾಟ್ಸಾಪ್​ ಹೊಸ ವೈಶಿಷ್ಟ್ಯ ಪರಿಚಯಿಸಿದೆ.
ವಾಟ್ಸಾಪ್​ ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯ ತ್ವರಿತ ಸಂದೇಶ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಕಂಪನಿಯು ಬಳಕೆದಾರರ ಅನುಭವವನ್ನು ಸುಧಾರಿಸುವಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ ಕಂಪನಿಯು ಅಪ್ಲಿಕೇಶನ್‌ನಲ್ಲಿ ಕೆಲವು ವೈಶಿಷ್ಟ್ಯಗಳನ್ನು ಸೇರಿಸಿದೆ. ಇದು ಬಳಕೆದಾರರನ್ನು ಕ್ರೇಜಿಯನ್ನಾಗಿ ಮಾಡುತ್ತಿದೆ.

WABetaInfo ವರದಿಯ ಪ್ರಕಾರ, ಈ ವೈಶಿಷ್ಟ್ಯವನ್ನು ಮೆಟಾದ ತ್ವರಿತ ಸಂದೇಶ ಅಪ್ಲಿಕೇಶನ್‌ಗಾಗಿ ವಾಟ್ಸಾಪ್​ ಬೀಟಾ ಆವೃತ್ತಿ 2.24.25.2 ನಲ್ಲಿ ನೋಡಲಾಗಿದೆ. ಈ ವೈಶಿಷ್ಟ್ಯವನ್ನು ಪ್ರಸ್ತುತ ಆಂಡ್ರಾಯ್ಡ್ ಬಳಕೆದಾರರಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ಫೀಚರ್​ನಲ್ಲಿ ಬಳಕೆದಾರರು ಕಸ್ಟಮ್ ಸ್ಟಿಕ್ಕರ್ ಪ್ಯಾಕ್‌ಗಳನ್ನು ರಚಿಸುವ ಆಯ್ಕೆಯನ್ನು ಸಹ ಪಡೆಯುತ್ತಾರೆ.

ಬಳಕೆದಾರರು ಒಂದೇ ಸ್ಟಿಕ್ಕರ್ ಬದಲಿಗೆ ಸಂಪೂರ್ಣ ಪ್ಯಾಕ್ ಅನ್ನು ತಮ್ಮ ಸಂಪರ್ಕಗಳೊಂದಿಗೆ ಹಂಚಿಕೊಳ್ಳಬಹುದು. ಬಳಕೆದಾರರು ಈಗ ತಮ್ಮ ನೆಚ್ಚಿನ ಸಂಗ್ರಹವನ್ನು ತಮ್ಮ ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ.

ಈ ಹೊಸ ವೈಶಿಷ್ಟ್ಯದಲ್ಲಿ, ಸ್ಟಿಕ್ಕರ್ ಪ್ಯಾಕ್ ಅನ್ನು ಹಂಚಿಕೊಳ್ಳುವುದರ ಜೊತೆಗೆ ಬಳಕೆದಾರರು ಅದನ್ನು ಲೈಬ್ರರಿಯಿಂದ ಡಿಲಿಟ್​ ಆಪ್ಷನ್​ ಸಹ ಹೊಂದಿರುತ್ತಾರೆ.

ಈ ಅಪ್ಲಿಕೇಶನ್ ಇತ್ತೀಚೆಗೆ ಅತ್ಯುತ್ತಮ ಅಪ್ಲಿಕೇಶನ್ ಪ್ರಶಸ್ತಿಯನ್ನು ಪಡೆದಿರುವುದು ಗೊತ್ತಿರುವ ಸಂಗತಿ. ಇದು ಅದರ ಜನಪ್ರಿಯತೆಯನ್ನು ತೋರಿಸುತ್ತದೆ. ವಾಟ್ಸಾಪ್​ನ ಈ ವೈಶಿಷ್ಟ್ಯವನ್ನು ಆಂಡ್ರಾಯ್ಡ್ ಬಳಕೆದಾರರಿಗಾಗಿ ತರಲಾಗುತ್ತಿದೆ. ಈ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದ ನಂತರ, ಬಳಕೆದಾರರು ಸ್ಟಿಕ್ಕರ್‌ಗಳನ್ನು ಕಳುಹಿಸುವಲ್ಲಿ ಹೊಸ ಅನುಭವವನ್ನು ಪಡೆಯುತ್ತಾರೆ.

ವಾಟ್ಸಾಪ್ ಸುಮಾರು 4 ವರ್ಷಗಳ ಹಿಂದೆ ಅಪ್ಲಿಕೇಶನ್‌ಗೆ ಸ್ಟಿಕ್ಕರ್ ವೈಶಿಷ್ಟ್ಯವನ್ನು ಸೇರಿಸಿತ್ತು. ಇದರ ಮೂಲಕ ಬಳಕೆದಾರರು ತಮ್ಮ ಭಾವನೆಗಳನ್ನು ಉತ್ತಮ ರೀತಿಯಲ್ಲಿ ಅನುಭವಿಸುತ್ತಿದ್ದಾರೆ. ಈ ಅಂತರ್ನಿರ್ಮಿತ ಸ್ಟಿಕ್ಕರ್‌ಗಳ ಹೊರತಾಗಿ, ಬಳಕೆದಾರರು ತಮ್ಮ ಪ್ರೀತಿಪಾತ್ರರಿಗೆ ಹೊಸ ರೀತಿಯಲ್ಲಿ ಮೂರನೇ ವ್ಯಕ್ತಿಯ ಸ್ಟಿಕ್ಕರ್‌ಗಳನ್ನು ಕಳುಹಿಸಲು ಅನುಮತಿಸಲಾಗುತ್ತಿದೆ.

ವಾಟ್ಸಾಪ್​ಗೆ ಸಂಬಂಧಿಸಿದ ಇತರ ಸುದ್ದಿಗಳ ಕುರಿತು ಮಾತನಾಡುವುದಾದ್ರೆ, ಸರ್ಕಾರವು ಇತ್ತೀಚೆಗೆ ಡಿಜಿಟಲ್ ಅರೆಸ್ಟ್​ ಘಟನೆಗಳ ಮೇಲೆ ಪ್ರಮುಖ ಕ್ರಮ ಕೈಗೊಂಡಿದೆ. ಈಗ ಸುಮಾರು 17 ಸಾವಿರಕ್ಕೂ ಹೆಚ್ಚು ವಾಟ್ಸಾಪ್​ ಖಾತೆಗಳನ್ನು ನಿರ್ಬಂಧಿಸಿದೆ. ಈ ಖಾತೆಗಳು ವಿದೇಶಿ ಮೊಬೈಲ್ ಸಂಖ್ಯೆಗಳಿಂದ ಕಾರ್ಯನಿರ್ವಹಿಸುತ್ತಿವೆ. ಇತ್ತೀಚೆಗೆ ಡಿಜಿಟಲ್ ಅರೆಸ್ಟ್​ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದಕ್ಕಾಗಿ ಜನರನ್ನು ಎಚ್ಚರಿಸಲು ಸರ್ಕಾರ ಸೂಚನೆಗಳನ್ನು ನೀಡಿದೆ.

ವಾಟ್ಸಾಪ್​ನಲ್ಲಿ ಸ್ಟಿಕ್ಕರ್ ಪ್ಯಾಕ್‌ಗಳನ್ನು ರಚಿಸಿದ ನಂತರ ನೀವು ನೇರ ಲಿಂಕ್ ಅನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಈ ಲಿಂಕ್ ಅನ್ನು ಯಾರಿಗೆ ಕಳುಹಿಸಲಾಗುತ್ತದೆಯೋ ಅವರು ಅದರ ಸಹಾಯದಿಂದ ಸಂಪೂರ್ಣ ಪ್ಯಾಕ್ ಅನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಬಳಕೆದಾರರು ತಮ್ಮ ಪ್ರೀತಿಪಾತ್ರರೊಂದಿಗೆ ಮೂರನೇ ವ್ಯಕ್ತಿಯ ಸ್ಟಿಕ್ಕರ್ ಪ್ಯಾಕ್‌ಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ವಾಟ್ಸಾಪ್​ನ ಈ ಹೊಸ ವೈಶಿಷ್ಟ್ಯವನ್ನು ಕೆಲವು ಆಯ್ದ ಬೀಟಾ ಪರೀಕ್ಷಕರಿಗೆ ಮಾತ್ರ ಬಿಡುಗಡೆ ಮಾಡಲಾಗಿದೆ. ಈ ವೈಶಿಷ್ಟ್ಯವನ್ನು ಮುಂಬರುವ ಸಮಯದಲ್ಲಿ ಎಲ್ಲ ಬಳಕೆದಾರರಿಗಾಗಿ ಹೊರತರಲಾಗುವುದು.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...