spot_img
spot_img

ವಾಟ್ಸ್​ಆ್ಯಪ್ ಹೊಸ ಫೀಚರ್​​! , ಇನ್ಮುಂದೆ ರೀಪ್ಲೈ ಮತ್ತಷ್ಟು ಸುಲಭ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಹೇ ಸೀತಾರಾಮ್‌ ನ್ಯೂಸ್‌ ಡೆಸ್ಕ್‌ :ವಾಟ್ಸ್ಆ್ಯಪ್​ ಬಹುಸಂಖ್ಯಾ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಪ್ಲಾಟ್​ಫಾರ್ಮ್​​. ಬಹುತೇಕ ದೇಶಗಳಲ್ಲಿ ವಾಟ್ಸ್​ಆ್ಯಪ್​ ಬಳಸುತ್ತಿದ್ದಾರೆ. ಮಾತ್ರವಲ್ಲದೆ, ದೈನಂದಿನ ವ್ಯವಹಾರದಿಂದ ಹಿಡಿದು, ಫೋಟೋ, ವಿಡಿಯೋ, ಫೈಲ್ಸ್​​ಗಳನ್ನು ಇದರ ಮೂಲಕ ಹಂಚಿಕೊಳ್ಳಲು ಯೋಗ್ಯವಾಗಿದೆ. ಹೀಗಿರುವಾಗ ವಾಟ್ಸ್​ಆ್ಯಪ್​ ಭಾರತದಲ್ಲಿ ತನ್ನ ಬಳಕೆದಾರರಿಗೆಂದು ಹೊಸ ಫೀಚರ್​​ ಪರಿಚಯಿಸಲು ಮುಂದಾಗಿದೆ. ಅದೇನು ಗೊತ್ತಾ? ಈ ಸ್ಟೋರಿ ಓದಿ.

ವಾಟ್ಸ್​ಆ್ಯಪ್​ ಸದಾ ನವೀಕರಣ ಜೊತೆಗೆ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿರುತ್ತದೆ. ಆದರೀಗ ಇನ್​ಸ್ಟಾಗ್ರಾಂನಂತೆ ಹೋಲುವ ಸಂದೇಶವನ್ನು ಎರಡು ಬಾರಿ ಟ್ಯಾಪ್​ ಮಾಡುವ ಮೂಲಕ ಪ್ರತಿಕ್ರಿಯಿಸಲು ಅನುವು ಮಾಡಿಕೊಡುವ ಹೊಸ ಫೀಚರನ್ನು ಪರಿಚಯಿಸಲು ಮುಂದಾಗಿದೆ.

ಇದನ್ನೂ ಓದಿ : ಬೆಳಗಾವಿಯಲ್ಲಿ ತಾಯಿ ಮಗುವಿನ ನೂತನ ಆಸ್ಪತ್ರೆ ಲೋಕಾರ್ಪಣೆಗೊಳಿಸಿದ ಸಚಿವ ದಿನೇಶ ಗುಂಡೂರಾವ್

ವಾಬೇಟಾಇನ್​ಫೋ ಪ್ರಕಾರ, ನೂತನ ವೈಶಿಷ್ಟ್ಯವು ಪರೀಕ್ಷಾ ಹಂತದಲ್ಲಿದ್ದು, ಮುಂಬರುವ ತಿಂಗಳು ಭಾರತೀಯರಿಗೆ ಸಿಗಲಿದೆ. ಅಂದಹಾಗೆಯೇ ಈ ಫೀಚರ್ ಫೋಟೋ, ವಿಡಿಯೋ, ಜಿಫ್​ ಸೇರಿದಂತೆ ಸ್ಕ್ರೀನ್​ ಬದಲಾಯಿಸದೇ ತ್ವರಿತವಾಗಿ ಪ್ರತಿಕ್ರಿಯಿಸಬಹುದಾಗಿದೆ. ಜೊತೆಗೆ ಸಂವಹನಕ್ಕೂ ಇದು ಅನುಕೂಲಕರವಾಗಿದೆ.

ಸಾಮಾನ್ಯವಾಗಿ ವಾಟ್ಸ್​ಆ್ಯಪ್​ನಲ್ಲಿ ಸಂದೇಶಗಳಿಗೆ ಮರು ಪ್ರತಿಕ್ರಿಯಿಸಲು ಕೆಲವು ಸೆಕೆಂಡು ತೆಗೆದುಕೊಳ್ಳುತ್ತದೆ. ಆದರೆ ಇದರ ಮೂಲಕ ಸಂದೇಶ, ಫೈಲ್​ಗಳಿಗೆ ಸುಲಭವಾಗಿ ಪ್ರತಿಕ್ರಿಯಿಸಬಹುದಾಗಿದೆ.

ಡಬಲ್​ ಟ್ಯಾಪ್​​ ವೈಶಿಷ್ಟ್ಯವು ಸಂದೇಶಗಳಿಗೆ ವೇಗವಾಗಿ ಪ್ರತಿಕ್ರಿಯಿಸುವ ಮೂಲಕ ಬಳಕೆದಾರರ ಸಂವಹನವನ್ನು ವೇಗಗೊಳಿಸುತ್ತದೆ. ಅಂದಹಾಗೆಯೇ ವಾಟ್ಸ್​ಆ್ಯಪ್​ ಈ ವೈಶಿಷ್ಟ್ಯವನ್ನು ಯಾವಾಗ ಪರಿಚಯಿಸುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿಲ್ಲ. ಅಂದಾಜಿನ ಮೇರೆಗೆ ಮುಂಬರುವ ದಿನಗಳಲ್ಲಿ ನೂತನ ಫೀಚರ್​ ಬಳಕೆದಾರನ್ನು ಸೇರಲಿದೆ.

WhatsApp Group Join Now
Telegram Group Join Now
Instagram Account Follow Now
spot_img

Related articles

TESLA BEGINS HIRING IN INDIA:ಮಸ್ಕ್ ಸಂಸ್ಥೆಯಲ್ಲಿ ಕೆಲಸ ಮಾಡಲು ಅದ್ಭುತ ಅವಕಾಶ

New Delhi News: ಇದರೊಂದಿಗೆ ಅಮೆರಿಕದ ದೈತ್ಯ ಎಲೆಕ್ಟ್ರಿಕಲ್​ ಕಾರು ಕಂಪನಿಯಲ್ಲಿ ಕೆಲಸ ಮಾಡಬೇಕೆಂಬ ಕನಸು ಹೊಂದಿರುವವರಿಗೆ ಟೆಸ್ಲಾ ಸುವರ್ಣಾವಕಾಶ ನೀಡಿದೆ. ಮುಂಬೈನಲ್ಲಿ ಹಲವು ಹುದ್ದೆಗಳ...

MAHAKUMBH : ಆ ಅಘೋರಿ ಭವಿಷ್ಯವೇ ನಿಜವಾಯ್ತಾ?

MAHAKUMBH : ಉತ್ತರ ಪ್ರದೇಶದ ದೇವ ಪ್ರಯಾಗದಲ್ಲಿ MAHAKUMBH ನಡೆಯುತ್ತಿದೆ. ಕಳೆದ 30 ದಿನಗಳ ಅಂತರದಲ್ಲಿ 7 ಅಗ್ನಿ ದುರಂತ ಎದುರಾಗಿವೆ. ಈ ಹಿಂದೆ ಹೀಗೆ...

DARSHAN : ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿ ದರ್ಶನ್ ಭಾವುಕ

Darshan News: ಫೆಬ್ರವರಿ 16 ರಂದು ಚಾಲೆಂಜಿಂಗ್ ಸ್ಟಾರ್ DARSHAN ಹುಟ್ಟುಹಬ್ಬವನ್ನು ಆಚರಿಸಿಕೊಂಡರು. 48ನೇ ವರ್ಷಕ್ಕೆ ಕಾಲಿಟ್ಟ ದಾಸನಿಗೆ ಸ್ಯಾಂಡಲ್​ವುಡ್​ ತಾರೆಯರು, ವಿವಿಧ ಕ್ಷೇತ್ರದ ಗಣ್ಯರು...

TULASI GABBARD : ಅಮೆರಿಕ ಗುಪ್ತಚರ ಇಲಾಖೆಯ ನೂತನ ಮುಖ್ಯಸ್ಥೆ

TULASI GABBARD : TULASI GABBARD​, ಈಗ ಅಮೆರಿಕಾದ ರಾಷ್ಟ್ರೀಯ ಗುಪ್ತಚರ ದಳ ನಿರ್ದೇಶನದ ನೂತನ ಮುಖ್ಯಸ್ಥೆಯಾಗಿ ಆಯ್ಕೆಯಾಗಿದ್ದಾರೆ. ಭಾರತದೊಂದಿಗೆ ಅವರಿಗಿರುವ ನಂಟಿನ ಬಗ್ಗೆಯೂ ಕೂಡ...