ಕನ್ನಡನೆಲದಲ್ಲಿ ಕನ್ನಡಿಗರ ಹೆಸರಿಡದೆ ಇನ್ನೆಲ್ಲಿ ಇಡಬೇಕು ಎಂದು ರೂಪೇಶ್ ರಾಜಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ ಹಾಕಿದ್ದಾರೆ.
ಕಾನೂನಾತ್ಮಕವಾಗಿ ಅನುಮತಿ ಪಡೆದು ರಸ್ತೆಗಳಿಗೆ ಕನ್ನಡ ಕವಿಗಳ ಹಾಗೂ ಮಹನೀಯರ ಹೆಸರು ಹಾಕಲು ಸ್ಥಳೀಯ ಕನ್ನಡಪರರು ಪ್ರಯತ್ನ ಮಾಡಿದಾಗ ಲೇಔಟ್ ನಾ ಒಂದಷ್ಟು ದ್ರೋಹಿಗಳು ಹಾಕಲು ಬಿಡದೆ ಫಲಕಗಳನ್ನು ಕಿತ್ತು ಬಿಸಾಡಲಾಗಿದೆ ಎಂದು ಬಿಗ್ಬಾಸ್ ಮಾಜಿ ಸ್ಪರ್ಧಿ ರೂಪೇಶ್ ರಾಜಣ್ಣ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬಹಳಷ್ಟು ರಸ್ತೆಗಳು, ಲೇಔಟ್ಗಳಿಗೆ ಕನ್ನಡಿಗರ ಹೆಸರುಗಳೇ ಇಲ್ಲ ಎನ್ನುವುದು ವಿಪರ್ಯಾಸ. ಕೆಲವೊಂದು ಹೆಸರುಗಳು ಬಹಳ ಹಿಂದಿನಿಂದಲೇ ಇದ್ದು ಇವು ಕನ್ನಡಕ್ಕೋ, ಕರುನಾಡಿಗೂ ಸಂಬಂಧಿಸಿಲ್ಲ ಎಂದು ಹೇಳಿದ್ದಾರೆ.
ಕನಿಷ್ಠ ಹೊಸ ರಸ್ತೆ, ಹೊಸ ಲೇಔಟ್ಗಳು ಬಂದಾಗಲಾದರೂ ಕನ್ನಡದ ಹಿರಿಯ ಗಣ್ಯರ ಹೆಸರುಗಳನ್ನು ಇಡುವುದು ಕನ್ನಡ ಉಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.
ಕನ್ನಡ ಬೋರ್ಡ್ ಕಿತ್ತ ಖುಷಿಗೆ ಡ್ಯಾನ್ಸ್ ಮಾಡುತ್ತಿರುವ ಅವಿವೇಕಿಗಳು. ಆ ಬೋರ್ಡ್ಗಳನ್ನು ಎಲ್ಲಿ ಕಿತ್ತು ಹಾಕಿದ್ದಾರೋ ಅಲ್ಲಿಯೇ ಹಾಕಿಸದೆ ಬಿಡುವುದಿಲ್ಲ ಎಂದು ಅವರು ಇನ್ನೊಂದು ಟ್ವೀಟ್ ಕೂಡಾ ಮಾಡಿದ್ದಾರೆ.
ಕನ್ನಡಕ್ಕೆ ಸಂಬಂಧಿಸಿ ಯಾವುದೇ ಬೆಳವಣಿಗೆ ಆದರೂ ಅವರು ರಿಯಾಕ್ಟ್ ಮಾಡುತ್ತಾರೆ.
ಇತ್ತೀಚೆಗೆ ಕಿಚ್ಚ ಸುದೀಪ್ ಅವರು ಈ ಸೀಸನ್ ಅವರು ನಡೆಸಿಕೊಡುತ್ತಿರುವ ಕೊನೆಯ ಸೀಸನ್ ಎಂದು ಟ್ವೀಟ್ ಮಾಡಿದ ನಂತರ ಅವರ ಟ್ವೀಟ್ ವೈರಲ್ ಆಗಿದೆ.
ಅಸಲಿ ವಿಷಯ ನಾಳೆ ಮಾತಾಡ್ತೀನಿ ಎಂದು ಬರೆದು ಚಕ್ರವರ್ತಿ ಚಂದ್ರಚೂಡ್ ಅವರನ್ನು ಟ್ಯಾಗ್ ಮಾಡಿದ್ದಾರೆ.