ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ದಿನಕ್ಕೊಂದು ತಿರುವು ಪಡೆದುಕೊಂಡು ಮುನ್ನುಗ್ಗುತ್ತಿದೆ. ಸ್ಪರ್ಧಿಗಳು 11ನೇ ವಾರಕ್ಕೆ ಕಾಲಿಟ್ಟ ಹೊತ್ತಲ್ಲೇ ಬಿಗ್ಬಾಸ್ ಮನೆಗೆ ಹಳೆಯ ಸ್ಪರ್ಧಿಗಳ ಎಂಟ್ರಿಯಾಗಿದೆ.
ಬಿಗ್ಬಾಸ್ ಮನೆಯಲ್ಲಿರೋ 12 ಸ್ಪರ್ಧಿಗಳಿಗೆ ಹೊಸ ಹುರುಪು ತುಂಬಲು ತನಿಷಾ ಕುಪ್ಪಂಡ, ಡ್ರೋನ್ ಪ್ರತಾಪ್, ವರ್ತೂರ್ ಸಂತೋಷ್ ಹಾಗೂ ತುಕಾಲಿ ಸಂತೋಷ್ ಆಗಮನವಾಗಿದೆ.
ಇನ್ನೂ ಬಿಗ್ಬಾಸ್ ಮನೆಗೆ ಬಂದ ಡ್ರೋನ್ ಪ್ರತಾಪ್ ಸ್ಪರ್ಧಿಗಳಿಗಾಗಿಯೇ ಒಂದು ಟಾಸ್ಕ್ ಅನ್ನು ಹೊತ್ತು ತಂದಿದ್ದರು. ಸೀಸನ್ 10ರಲ್ಲಿ ಸ್ಪರ್ಧಿಯಾಗಿದ್ದ ಡ್ರೋನ್ ಪ್ರತಾಪ್ ಅವರ ದಿಕ್ಕನ್ನೇ ಬದಲಾಯಿಸಿದ ಟಾಸ್ಕ್ ಅನ್ನು ಈಗ ಮೂರು ಸ್ಪರ್ಧಿಗಳಿಗೆ ಕೊಟ್ಟಿದ್ದಾರೆ.
ನೂರಾರು ಬಲೂನ್ಗಳನ್ನು ಬಿಗ್ಬಾಸ್ ಮನೆ ತುಂಬಾ ಹರಡಿಸಲಾಗಿದೆ. ಅಷ್ಟು ಬಲೂನ್ಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ನಾಮಿನೇಷನ್ ಪಾಸ್ ಇಡಲಾಗಿದೆ. ಅಷ್ಟು ಬಲೂನ್ಗಳನ್ನು ಒಡೆದ ಬಳಿಕ ಯಾರಿಗೆ ನಾಮಿನೇಷನ್ ಪಾಸ್ ಸಿಗುತ್ತದೆ ಎಂದು ಇಂದಿನ ಎಪಿಸೋಡ್ನಲ್ಲಿ ತಿಳಿದು ಬರಲಿದೆ.
ಇನ್ನೂ, ಈ ಟಾಸ್ಕ್ಗೆ ತ್ರಿವಿಕ್ರಮ್, ಶಿಶಿರ್ ಹಾಗೂ ರಜತ್ನನ್ನು ಡ್ರೋನ್ ಪ್ರತಾಪ್ ಆಯ್ಕೆ ಮಾಡಿದ್ದಾರೆ. ಈ ಮೂವರ ಪೈಕಿ ಯಾರಿಗೆ ನಾಮಿನೇಷನ್ ಪಾಸ್ ಸಿಗುತ್ತದೆ ಅಂತ ಕಾದು ನೋಡಬೇಕಿದೆ.