spot_img
spot_img

ಬಿಗ್ ಬಾಸ್ ಮನೆಯಲ್ಲಿ ಡ್ರೋನ್​ ಪ್ರತಾಪ್​ನಿಂದ ಒಲಿದು ಬಂದ ಅದೃಷ್ಟ ಸಿಗೋದು ಯಾರಿಗೆ ?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ದಿನಕ್ಕೊಂದು ತಿರುವು ಪಡೆದುಕೊಂಡು ಮುನ್ನುಗ್ಗುತ್ತಿದೆ. ಸ್ಪರ್ಧಿಗಳು 11ನೇ ವಾರಕ್ಕೆ ಕಾಲಿಟ್ಟ ಹೊತ್ತಲ್ಲೇ ಬಿಗ್​ಬಾಸ್​ ಮನೆಗೆ ಹಳೆಯ ಸ್ಪರ್ಧಿಗಳ ಎಂಟ್ರಿಯಾಗಿದೆ.

ಬಿಗ್​ಬಾಸ್​ ಮನೆಯಲ್ಲಿರೋ 12 ಸ್ಪರ್ಧಿಗಳಿಗೆ ಹೊಸ ಹುರುಪು ತುಂಬಲು ತನಿಷಾ ಕುಪ್ಪಂಡ, ಡ್ರೋನ್​ ಪ್ರತಾಪ್​, ವರ್ತೂರ್ ಸಂತೋಷ್​ ಹಾಗೂ ತುಕಾಲಿ ಸಂತೋಷ್​ ಆಗಮನವಾಗಿದೆ.

ಇನ್ನೂ ಬಿಗ್​ಬಾಸ್​ ಮನೆಗೆ ಬಂದ ಡ್ರೋನ್​ ಪ್ರತಾಪ್ ಸ್ಪರ್ಧಿಗಳಿಗಾಗಿಯೇ ಒಂದು ಟಾಸ್ಕ್​ ಅನ್ನು ಹೊತ್ತು ತಂದಿದ್ದರು. ಸೀಸನ್​ 10ರಲ್ಲಿ ಸ್ಪರ್ಧಿಯಾಗಿದ್ದ ಡ್ರೋನ್​ ಪ್ರತಾಪ್​ ಅವರ ದಿಕ್ಕನ್ನೇ ಬದಲಾಯಿಸಿದ ಟಾಸ್ಕ್​ ಅನ್ನು ಈಗ ಮೂರು ಸ್ಪರ್ಧಿಗಳಿಗೆ ಕೊಟ್ಟಿದ್ದಾರೆ.

ನೂರಾರು ಬಲೂನ್​ಗಳನ್ನು ಬಿಗ್​ಬಾಸ್​ ಮನೆ ತುಂಬಾ ಹರಡಿಸಲಾಗಿದೆ. ಅಷ್ಟು ಬಲೂನ್​ಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ನಾಮಿನೇಷನ್​ ಪಾಸ್​ ಇಡಲಾಗಿದೆ. ಅಷ್ಟು ಬಲೂನ್​ಗಳನ್ನು ಒಡೆದ ಬಳಿಕ ಯಾರಿಗೆ ನಾಮಿನೇಷನ್​ ಪಾಸ್​ ಸಿಗುತ್ತದೆ ಎಂದು ಇಂದಿನ ಎಪಿಸೋಡ್​ನಲ್ಲಿ ತಿಳಿದು ಬರಲಿದೆ.

ಇನ್ನೂ, ಈ ಟಾಸ್ಕ್​ಗೆ ತ್ರಿವಿಕ್ರಮ್​, ಶಿಶಿರ್ ಹಾಗೂ ರಜತ್​ನನ್ನು ಡ್ರೋನ್​ ಪ್ರತಾಪ್​ ಆಯ್ಕೆ ಮಾಡಿದ್ದಾರೆ. ಈ ಮೂವರ ಪೈಕಿ ಯಾರಿಗೆ ನಾಮಿನೇಷನ್​ ಪಾಸ್​ ಸಿಗುತ್ತದೆ ಅಂತ ಕಾದು ನೋಡಬೇಕಿದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SAMSUNG GALAXY S25 SERIES : ಭಾರತೀಯ ಮಾರುಕಟ್ಟೆಗೆ ಕಾಲಿಟ್ಟ ಸ್ಯಾಮ್ಸಂಗ್ ಹೊಸ ಸ್ಮಾರ್ಟ್ಫೋನ್ಗಳು

Hyderabad News: ಬಹುನಿರೀಕ್ಷಿತ SAMSUNG GALAXY S25ಸರಣಿಯು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಈ ಫೋನ್‌ಗಳ ಬೆಲೆ ಮತ್ತು ವಿಶೇಷತೆಗಳು ಇಲ್ಲಿವೆ.ದಕ್ಷಿಣ ಕೊರಿಯಾದ ಟೆಕ್ ದೈತ್ಯ...

WANKHEDE STADIUM 50TH ANNIVERSARY:14,505 ಲೆದರ್ ಬಾಲ್ಗಳಿಂದ ‘ವಾಕ್ಯ’ ರಚಿಸಿ ಗಿನ್ನೆಸ್ ದಾಖಲೆ.

Mumbai News: ಎಂಸಿಎ ಈ ದಾಖಲೆಯನ್ನು ಆ ಪಂದ್ಯದಲ್ಲಿ ಶತಕ ಗಳಿಸಿದ ದಿವಂಗತ ಏಕನಾಥ್ ಸೋಲ್ಕರ್ ಮತ್ತು ಕ್ರೀಡೆಗೆ ಅಸಾಧಾರಣ ಕೊಡುಗೆಗಳನ್ನು ನೀಡಿದ ಮುಂಬೈನ ಇತರ...

GALWAN VALLEY IN LEH LADAKH:ಭರದ ಕಾರ್ಯಾಚರಣೆ.

Leh (Ladakh) News: ಭಾರತೀಯ ಸೇನೆ ಮತ್ತು ಸ್ಥಳೀಯ ಮಧ್ಯಸ್ಥಗಾರರ ಸಹಯೋಗದಲ್ಲಿ ಅಧಿಕಾರಿಗಳು ಕಣಿವೆಯಲ್ಲಿ ಈ ಯೋಜನೆಗೆ ಮುಂದಾಗಿದ್ದು, ಸ್ಥಳೀಯ ಪ್ರವಾಸಿಗ ಆಕರ್ಷಿಣೀಯ ತಾಣವಾಗಿ ರೂಪಿಸುವ...

PINK SALT BENEFITS FOR HEALTH : ಪಿಂಕ್ ಉಪ್ಪಿನಿಂದ ಆರೋಗ್ಯಕ್ಕೆ ಹಲವು ಪ್ರಯೋಜನ

Pink Salt Benefits for Health News: ಹಿಮಾಲಯನ್ ಪಿಂಕ್ ರಾಕ್ SALT ಅಥವಾ ಪಿಂಕ್ ಉಪ್ಪು ಸೇವಿಸುವುದರಿಂದ ದೇಹದ ಆರೋಗ್ಯಕ್ಕೆ ಹಲವು ಪ್ರಯೋಜನಗಳು ದೊರೆಯುತ್ತವೆ...