ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ಆಟ ಅಂದುಕೊಂಡಂತೆ ಹೊಸ ಅಧ್ಯಾಯವನ್ನ ಸೃಷ್ಟಿಸುತ್ತಿದೆ. ಪ್ರತಿ ದಿನವೂ ಹೊಸ, ಹೊಸ ಟಾಸ್ಕ್‌ಗಳನ್ನ ಕೊಡುತ್ತಿರುವ ಬಿಗ್ ಬಾಸ್ ಟೀಂ ಮನೆಯೊಳಗಿನ ಕಿಚ್ಚು ಹೆಚ್ಚಿಸುತ್ತಿದೆ. 50 ದಿನಗಳು ಕಳೆದ ಮೇಲೆ ಅಸಲಿ ಆಟ ಈಗ ಶುರು ಅನ್ನೋದು ಈ ವಾರ ಗೊತ್ತಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಸದ್ಯ ಅತಿ ಹೆಚ್ಚು ಚರ್ಚೆಯಲ್ಲಿರೋದು ಮೋಕ್ಷಿತಾ ಹಾಗೂ ಗೌತಮಿಯ ಜಗಳ. ಈ ವಾರದ ಪಂಚಾಯ್ತಿಯಲ್ಲೂ ಇದೇ ವಿಷಯವನ್ನ ಸುದೀಪ್ ಅವರು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಮೋಕ್ಷಿತಾ, ಗೌತಮಿ ಅವರು ಹಾವು-ಮುಂಗುಸಿಗಿಂತ ಹೆಚ್ಚು ದ್ವೇಷ ಸಾಧಿಸುತ್ತಿದ್ದು, ಮುಂದಿನ ಟಾಸ್ಕ್‌ಗಳು ಹೇಗಿರುತ್ತೆ ಅನ್ನೋ ಕುತೂಹಲ ಕೆರಳಿಸಿದೆ.
ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಮೋಕ್ಷಿತಾ ಅವರು ಹೊರಗುಳಿದಿದ್ದು ಅವರದೇ ಇಗೋ ಇಂದ. ಗೌತಮಿ ಅವರಿಂದ ನಾನು ಕ್ಯಾಪ್ಟನ್ ಆಗಬಾರದು. ಗೌತಮಿ ಮುಂದೆ ತಾನು ತಲೆ ತಗ್ಗಿಸಬಾರದು ಅನ್ನೋ ದೃಢ ನಿರ್ಧಾರಕ್ಕೆ ಮೋಕ್ಷಿತಾ ಅವರು ಬಂದಿದ್ದರು. ಮೋಕ್ಷಿತಾ ಇವರ ಈ ಸ್ವಾಭಿಮಾನದ ಅಹಂ ಟಾಸ್ಕ್‌ನಲ್ಲಿ ಗೌತಮಿ ಅವರಿಗೆ ಪ್ಲಸ್ ಆಗಿದೆ.
ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಮೋಕ್ಷಿತಾ ಬೇಡ ಅಂದಿದ್ದನ್ನ ಮನೆಯವರೆಲ್ಲಾ ಸೇರಿ ಒಮ್ಮತದಿಂದ ಗೌತಮಿ ಅವರಿಗೆ ಕೊಟ್ಟಿದ್ದಾರೆ. ಮನೆಯವರ ಸಪೋರ್ಟ್ ಹಾಗೂ ಟಾಸ್ಕ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣಕ್ಕೆ ಗೌತಮಿ ಅವರು ಬಿಗ್‌ಬಾಸ್ ಮನೆಯ ಕ್ವೀನ್ ಆಗಿದ್ದಾರೆ.