ನವದೆಹಲಿ: ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಹಿನ್ನಲ್ಲೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ಇನ್ನು 2 ದಿನಗಳಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕೇಜ್ರಿವಾಲ್ ಅವರು ಹೇಳಿದ್ದಾರೆ.
ಇದನ್ನೂ ಓದಿ:ಸಂತೋಷದ ಸುದ್ದಿ ಸುಮಲತಾ ಅಂಬರೀಶ್ ಅವರಿಗೆ, ಅಜ್ಜಿ ಆಗುವರಿದ್ದಾರೆ; ಸೊಸೆ ಗರ್ಭಿಣಿ ಸುದ್ದಿ.!
ಇನ್ನು ಎರಡು ದಿನಗಳಲ್ಲಿ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಜನರ ಬಳಿಗೆ ಹೋಗುತ್ತೇನೆ. ಮತದಾರರು ತೀರ್ಪು ಪ್ರಕಟಿಸುವವರೆಗೂ ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳುವುದಿಲ್ಲ. ದೆಹಲಿ ಎಲೆಕ್ಷನ್ 2025ರ ಫೆಬ್ರುವರಿಯಲ್ಲಿ ನಡೆಯಲಿದೆ. ಅದಕ್ಕಿಂತ ಮುಂಚಿತವಾಗಿಯೇ ಎಲೆಕ್ಷನ್ ನಡೆಸಬೇಕು.
ಇದನ್ನೂ ಓದಿ : ಬಳ್ಳಾರಿ ಜೈಲಿಗೆ ಬಂತು ಹನುಮಾನ ಚಾಲಿಸ್ ಪುಸ್ತಕ .! ದರ್ಶನ್ಗೆ ಕಳುಹಿಸಿದ್ಯಾರು ಗೊತ್ತಾ?
ಮಹಾರಾಷ್ಟ್ರದ ಎಲೆಕ್ಷನ್ ಜೊತೆಗೆ ದೆಹಲಿ ಚುನಾವಣೆ ನಡೆಸಬೇಕು. ಕೇಜ್ರಿವಾಲ್ ನಿರಪರಾಧಿ ಅಥವಾ ಅಪರಾಧಿಯೇ ಎಂಬುದನ್ನು ಜನರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು ಅರವಿಂದ್ ಕೇಜ್ರಿವಾಲ್ . ನಾನು ಕೆಲಸ ಮಾಡಿದ್ದರೆ ಜನರು ನನಗೆ ಮತ ನೀಡುತ್ತಾರೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ ಎಂದು ತಿಳಿದಿದೆ.