ಜುಲೈ 31 1995ರಲ್ಲಿ ಭಾರತೀಯ ದೂರಸಂಪರ್ಕ ಕ್ಷೇತ್ರದಲ್ಲಿ ಒಂದು ದೊಡ್ಡ ಕ್ರಾಂತಿಯಾಯ್ತು. ವಾಯರ್ಲೆಸ್ ಕರೆಗಳು ದೇಶದಲ್ಲಿ ಹೊಸದೊಂದು ಇತಿಹಾಸವನ್ನೇ ಸೃಷ್ಟಿಸಿತ್ತು.
ಮೊದಲ ಬಾರಿಗೆ ಮೊಬೈಲ್ ಕಾಲ್ ಕನೆಕ್ಟ್ ಆದ ವರ್ಷವದು. ಅಂದು ದೇಶದಲ್ಲಿ ಪ್ರಮುಖ ಒಬ್ಬರು ನಾಯಕರು ಒಬ್ಬೊರಿಗೊಬ್ಬರು ಮೊದಲು ಮಾತನಾಡಿಕೊಂಡಿದ್ದರು.
ಅವರಲ್ಲಿ ಒಬ್ಬರು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಹಾಗೂ ಅಂದಿನ ಕೇಂದ್ರ ಸಂವಹನ ಸಚಿವ ಸುಖ್ ರಾಮ್. ಈ ಒಂದು ಐತಿಹಾಸಿ ಮೊಬೈಲ್ ಕರೆ ನೋಕಿಯಾ ಹ್ಯಾಂಡ್ಸೆಟ್ ಬಳಸುವ ಮೂಲಕ ನಡೆಯಿತು.
ಈ ಒಂದು ಮೊಬೈಲ್ ಫೋನ್ ಕರೆ ಇಷ್ಟೊಂದು ಯಶಸ್ವಿಯಾಗಲು ಪ್ರಮುಖ ಪಾತ್ರವಹಿಸಿದ್ದು. ಭಾರತದ ಬಿ.ಕೆ.ಮೋದಿ ಹಗೂ ಆಸ್ಟ್ರೇಲಿಯಾದ ಟೆಲ್ಸ್ತ್ರಾ. ಇದನ್ನು ಒಟ್ಟಾಗಿ ಮೋದಿ ಟೆಲ್ಸತ್ರಾ ನೆಟ್ವರ್ಕ್ ಎಂದೇ ಕರೆಯಲಾಗಿತ್ತು.
ಭಾರತದ ಈ ಮೊದಲ ಕರೆ ಕೊಲ್ಕತ್ತಾ ಹಾಗೂ ನವದೆಹಲಿಯ ನಡುವೆ ಏರ್ಪಟ್ಟಿತ್ತು. ಅಂದಿನ ಕಾಲದಲ್ಲಿ ಹ್ಯಾಂಡ್ಸೆಟ್ ಮೊಬೈಲ್ ಐಶಾರಾಮಿ ಬದುಕಿನ ಒಂದು ಭಾಗವೇ ಆಗಿ ಗುರುತಿಸಿಕೊಂಡಿತ್ತು. ಆಗ ಒಂದು ನಿಮಿಷಕ್ಕೆ 8 ರೂಪಾಯಿ 4 ಪೈಸೆ ದರ ನಿಗದಿಪಡಿಸಲಾಗಗಿತ್ತು. ಒಳ ಬರುವ ಹಾಗೂ ಹೊರ ಹೋಗುವ ಕರೆಗಳಿಗೂ ಕೂಡ ಇದೇ ದರ ಅಳವಡಿಸಲಾಗುತ್ತಿದ್ದಾರಿಂದ ಒಟ್ಟು ಒಂದು ನಿಮಿಷಕ್ಕೆ 16.8 ರೂಪಾಯಿಗಳಷ್ಟು ಚಾರ್ಜ್ ಆಗುತ್ತಿತ್ತು.
ಕಳೆದ ಎರಡು ದಶಕಗಳಲ್ಲಿ ದೂರ ಸಂಪರ್ಕ ಕ್ಷೇತ್ರದಲ್ಲಿ ಗಣನೀಯ ಬದಲಾವಣೆಗಳು ಆಗಿವೆ. ಈಗ ಹೊರ ಹೋಗುವ ಕರೆಗಳಿಗೆ ದರ ನಿಗದಿಯಿಲ್ಲ.
ಅನಿಯಮಿತ ಕರೆಯನ್ನು ಮಾಡಬಹುದು. 2016ರಲ್ಲಿ ಯಾವಾಗ ದೂರ ಸಂಪರ್ಕ ಕ್ಷೇತ್ರದಲ್ಲಿ ಕಾಲಿಟ್ಟಿತೋ ಅಂದಿನಿಂದ ಬಹು ದೊಡ್ಡ ಬದಲಾವಣೆಗಳು ನಡೆದವು. ಪ್ರತಿಯೊಬ್ಬ ನಾಗರಿಕನ ಕೈಯಲ್ಲಿ ಮೊಬೈಲ್ ಹರಿದಾಡಲು ಶುರುವಾದವು.
ಮೊಬೈಲ್ ಸೇವೆ ಸಮೂಹಿಕ ಮಟ್ಟದಲ್ಲಿ ಜನರನ್ನು ತಲುಪುವಲ್ಲಿ ಯಶಸ್ವಿಯಾದವು.
ಇದಕ್ಕೆ ಮೊದಲು ಅಡಿಗಲ್ಲು ಹಾಕಿದ್ದೇ 1995ರಲ್ಲಿ ನಡೆದ ಆ ಘಟನೆ. ಭಾರತದಲ್ಲಿ ಮೊದಲ ಬಾರಿ ಮೊಬೈಲ್ನಲ್ಲಿ ಮಾತನಾಡಿದ್ದು ಜ್ಯೋತಿ ಬಸು ಎಂದು ಇಂದಿಗೂ ಕೂಡ ಹೇಳಲಾಗುತ್ತದೆ.
ಅಂದಿನ ಒಂದು ಕರೆ ಇಂದು ಭಾರತೀಯ ದೂರ ಸಂಪರ್ಕ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ. ಇಂತಹ ಬದಲಾವಣೆಗೆ ಮೂರು ದಶಕಗಳ ಹಿಂದೆಯೇ ಒಂದು ಅಡಿಪಾಯ ಬಿದ್ದಿತ್ತು ಎಂದರೆ ತಪ್ಪಾಗುವುದಿಲ್ಲ.