spot_img
spot_img

2ನೇ ಬ್ಯಾಟ್ಸ್​ಮನ್ ಎಂಬ ಖ್ಯಾತಿ  ಯಾರು ಪಡೆಯಲಿದ್ದಾರೆ ? ಇಲ್ಲಿದೆ ಸಂಪೂರ್ಣ ಮಾಹಿತಿ.!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಇಂಡಿಯಾ ಹಾಗೂ ಬಾಂಗ್ಲಾದೇಶದ ನಡುವಿನ ಮೊದಲ ಟೆಸ್ಟ್ ಪಂದ್ಯ ಪೂರ್ಣಗೊಂಡಿದ್ದು ರೋಹಿತ್ ಶರ್ಮಾ ಬಳಗ ರೋಚಕ ಗೆಲುವು ಸಾಧಿಸಿದೆ. 2 ಇನ್ನಿಂಗ್ಸ್​​ನಲ್ಲೂ ವಿರಾಟ್ ಕೊಹ್ಲಿ ಬ್ಯಾಟಿಂಗ್ ಪ್ರದರ್ಶನ ಉತ್ತಮವಾಗಿರಲಿಲ್ಲ. ಆದರೆ ಕಾನ್ಪುರದಲ್ಲಿ ನಡೆಯುವ ಮುಂದಿನ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೆಲವು ರೆಕಾರ್ಡ್​ಗಳನ್ನ ಬ್ರೇಕ್ ಮಾಡಲಿದ್ದಾರೆ. ಇದರಲ್ಲಿ ಡಾನ್ ಬ್ರಾಡ್ಮನ್​ ಅವರ ದಾಖಲೆ ಕೂಡ ಅಳಿಸಿ ಹೋಗಲಿದೆ.

ಇದನ್ನೂ ಓದಿ : ಶೋಗೂ ಮೊದಲೇ 5 ಸ್ಪರ್ಧಿಗಳ ಹೆಸರು ರಿವೀಲ್! ಬಿಗ್ ಬಾಸ್ ಸೀಸನ್ 11 ಕ್ಕೆ .!

ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಕಿಂಗ್ ಕೊಹ್ಲಿ ಕೇವಲ 23ರನ್ ಗಳಿಸಿದರೂ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ವದೇಶದಲ್ಲಿ ವೇಗವಾಗಿ 12,000 ರನ್ ಪೂರೈಸಿ ದಾಖಲೆ ಮಾಡಿದರು. ಇದರಿಂದ ಸಚಿನ್ ತೆಂಡೂಲ್ಕರ್ ದಾಖಲೆ ಹಿಂದಿಕ್ಕಿದರು.

ಮುಂದಿನ ಟೆಸ್ಟ್ ಪಂದ್ಯದಲ್ಲಿ ಇನ್ನು 35 ರನ್​ಗಳಿಸಿದರೆ ವೇಗವಾಗಿ 27,000 ರನ್​ಗಳನ್ನು ಕಿಂಗ್ ಕೊಹ್ಲಿ ಪೂರೈಸಲಿದ್ದಾರೆ. ಈ ಮೂಲಕ 593 ಎನ್ನಿಂಗ್ಸ್​ನಲ್ಲಿ 27,000 ರನ್​ಗಳನ್ನ ಕಲೆ ಹಾಕಿದ ವಿಶ್ವದ 4ನೇ ಪ್ಲೇಯರ್ ಎನ್ನುವ ಖ್ಯಾತಿಗೆ ಪಾತ್ರರಾಗಲಿದ್ದಾರೆ. ಸಚಿನ್ ತೆಂಡೂಲ್ಕರ್ ಒಟ್ಟು 782 ಇನ್ನಿಂಗ್ಸ್​ನಿಂದ 34,357 ರನ್​ಗಳನ್ನು ಕೂಡಿ ಹಾಕಿ ಪ್ರಥಮ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ : ಕಾರ್ ಗುದ್ದಿದ ರಭಸಕ್ಕೆ ಬೈಕ್ ಪೀಸ್ ಪೀಸ್ ಆಗಿದೆ ; ಅಪಘಾತದಲ್ಲಿ 1 ವರ್ಷದ ಮಗುವಿನ ಸಾವು..!

ಸದ್ಯ ವಿರಾಟ್ ಕೊಹ್ಲಿಯವರು 113 ಕ್ಯಾಚ್​ಗಳನ್ನು ಹಿಡಿದಿದ್ದಾರೆ. ಕೇವಲ ಇನ್ನು ಮೂರೇ 3 ಕ್ಯಾಚ್​ಗಳನ್ನು ಹಿಡಿದದರೆ ಸಚಿನ್ ತೆಂಡೂಲ್ಕರ್ ಕ್ಯಾಚ್​ ದಾಖಲೆ ಬ್ರೇಕ್ ಮಾಡಲಿದ್ದಾರೆ. ರಾಹುಲ್ ದ್ರಾವಿಡ್ ಮೊದಲ ಸ್ಥಾನದಲ್ಲಿದ್ದು ಒಟ್ಟು 210 ಕ್ಯಾಚ್​ಗಳನ್ನು ಹಿಡಿದಿದ್ದಾರೆ. ವಿವಿಎಸ್ ಲಕ್ಷ್ಮಣ್ 135 ಕ್ಯಾಚ್​ಗಳಿಂದ 2ನೇ ಸ್ಥಾನದಲ್ಲಿದ್ದಾರೆ.

ಇನ್ನು ಟೆಸ್ಟ್​ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿಯವರು ಒಟ್ಟು 29 ಸೆಂಚುರಿಗಳನ್ನು ಸಿಡಿಸಿ ಅಬ್ಬರಿಸಿದ್ದಾರೆ. ಕೇವಲ ಒಂದೇ 1 ಶತಕ ಬಾರಿಸಿದರೆ ಒಟ್ಟು 30 ಶತಕ ಸಿಡಿಸಿದಂತೆ ಆಗುತ್ತದೆ. ಇದರಿಂದ ಆಸ್ಟ್ರೇಲಿಯಾದ ಕ್ರಿಕೆಟರ್ ಡಾನ್ ಬ್ರಾಡ್ಮನ್​ ಅವರ 29 ಶತಕಗಳ ದಾಖಲೆ ಬ್ರೇಕ್ ಆಗುತ್ತದೆ. ಟೆಸ್ಟ್​​ನಲ್ಲಿ ಇಡೀ ವಿಶ್ವದಲ್ಲೇ ಅತ್ಯಂತ ಹೆಚ್ಚು ಸೆಂಚುರಿ ಸಿಡಿಸಿದ 2ನೇ ಬ್ಯಾಟ್ಸ್​ಮನ್ ಎಂಬ ಖ್ಯಾತಿ ಕಿಂಗ್ ಕೊಹ್ಲಿ ಪಡೆಯಲಿದ್ದಾರೆ. ಸಚಿನ್ ಟೆಸ್ಟ್​​ನಲ್ಲಿ ಒಟ್ಟು 51 ಶತಕಗಳನ್ನು ಸಿಡಿಸಿ ಮೊದಲ ಸ್ಥಾನದಲ್ಲಿದ್ದಾರೆ.

 

WhatsApp Group Join Now
Telegram Group Join Now
Instagram Account Follow Now
spot_img

Related articles

SPECIAL VILLAGE SAGA : 20 ಕುಟುಂಬ, 60 ಜನರಿರುವ ಒಂದು ಹಳ್ಳಿಯ ಕಥೆ: ಸ್ವಾವಲಂಬನೆಯ ಯಶೋಗಾಥೆ

Nalgonda, Telangana News: ಮೂಡು ಗುಡಿಸೆಲಾ ತಾಂಡಾ ಅಂದರೆ ಮೂರು ಗುಡಿಸಲುಗಳ ತಾಂಡಾ ಎಂಬ ಈ ವಿಶಿಷ್ಟ ತಾಂಡಾವನ್ನು 70 ವರ್ಷಗಳ ಹಿಂದೆ ನೇನಾವತ್ ಚಂದ್ರು...

ULLAL BANK ROBBERY : ಎಲ್ಲ ಟೋಲ್ಗಳಲ್ಲಿ ತಪಾಸಣೆ ಮಾಡುವಂತೆ ಸಿಎಂ ಸೂಚನೆ

Mangalore News: ಕೋಟೆಕಾರು ULLAL BANK ROBBERY ಪ್ರಕರಣ ಬಗ್ಗೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಿಎಂ, ಎಲ್ಲ ಟೋಲ್​ಗಳಲ್ಲಿ ತಪಾಸಣೆ ಹಾಗೂ ಕೇರಳ ಗಡಿಯಲ್ಲಿನ ಸಿಸಿ...

HIGH COURT : ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ

Bangalore News: HIGH COURT ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಕೋರಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ...

SAIF ALI KHAN : ಸೈಫ್ ಐಸಿಯುನಿಂದ ಹೊರಕ್ಕೆ, ತನಿಖೆಗೆ 20 ಪೊಲೀಸ್ ತಂಡಗಳ ರಚನೆ

Mumbai (Maharashtra) News: ಬಾಲಿವುಡ್​​ ನಟ SAIF ಅಲಿ ಖಾನ್ ಅವರ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ.ಈ ಘಟನೆ ಬಾಲಿವುಡ್ ಮಾತ್ರವಲ್ಲದೇ...