ಬೆಂಗಳೂರು : ಬೆಂಗಳೂರಿನ ಟಿಂಬರ್ ಯಾರ್ಡ್ ಲೇಔಟ್‌ನಲ್ಲಿರುವ ಕರ್ನಾಟಕ ಅರಣ್ಯ ಇಲಾಖೆಯ ಟಿಂಬರ್ ನಲ್ಲಿ ಮರದ ಬಾಗಿಲು, ಕಿಟಕಿ ಇತ್ಯಾದಿ ಮಾಡಿಸಬಹುದು ಎಂದು ನೆಟ್ಟಿಗರು ತಿಳಿಸಿದ್ದಾರೆ.
ಮನೆ ಕಟ್ಟುವಾಗ ಪ್ರವೇಶದ್ವಾರ ಅಥವಾ ದ್ವಾರ ಬಾಗಿಲಿಗೆ ಉತ್ತಮ ಗುಣಮಟ್ಟದ ಮರವನ್ನೇ ಬಳಸಲು ದುಡ್ಡು ಕೊಟ್ಟರೂ ಗುಣಮಟ್ಟ ಚೆನ್ನಾಗಿರುವ ಮರ ಸಿಗದ ದಿನದಲ್ಲಿ ನಿರ್ದಿಷ್ಟವಾಗಿ ಬಾಗಿಲು – ಕಿಟಕಿ ಇಂಥವುಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಹೊನ್ನೆ, ಮತ್ತಿ, ಮಹಾಗನಿ, ಅಕೇಶಿಯಾ ಮರಗಳಿಂದ ಕಿಟಿಕಿ- ಬಾಗಿಲು ತಯಾರಿಸಿ ಕೊಡಲಾಗುತ್ತದೆ.
ನೈತಿಕವಾಗಿಯೂ ಇಲ್ಲಿ ಮರದ ಕಟಾವು ಎಂಬುದು ವ್ಯಾಪಾರೀಕರಣದ ಉದ್ದೇಶದಿಂದ ಜನರಿಗೆ ಸಹಾಯ ಆಗಲಿ ಹಾಗೂ ಹಸಿ ಮರಗಳನ್ನು ಕಡಿದು ಹಾಳು ಮಾಡುವುದನ್ನು ನಿಲ್ಲಿಸಲಿ ಎಂಬ ಉದ್ದೇಶದಿಂದ ಕೇವಲ ಮರಗಳನ್ನು ಮಾರುವುದಿಲ್ಲ. ಮರದ ಕೆಲಸ ಮಾಡುವವರು, ಪಾಲಿಷ್ ಮೊದಲಾದವನ್ನು ಮಾಡುವಂಥ ಕೆಲಸಗಾರರು ಇಲ್ಲಿಯೇ ಸಿಗುತ್ತಾರೆ.
ಈ ಅರಣ್ಯ ಇಲಾಖೆ ಟಿಂಬರ್‌ನಲ್ಲಿ ಯಾವ ಕಾರಣಕ್ಕೂ ಕಳಪೆ ಮರಗಳನ್ನು ಬಳಸಲ್ಲ ಹಾಗೂ ಅತ್ಯುತ್ತಮ ಮರಗೆಲಸಗಾರರು ಇಲ್ಲಿದ್ದಾರೆ.
ಮುಖ್ಯವಾಗಿ ಯಾರು ಗುಣಮಟ್ಟದ ಮರಗಳನ್ನೇ ಮನೆಯ ಕಿಟಕಿ- ಬಾಗಿಲುಗಳಿಗೆ ಬಳಸಬೇಕು.
ಡೈನಿಂಗ್ ಟೇಬಲ್, ಮಂಚ, ಸೋಫಾ ಇತ್ಯಾದಿ ರೋಸ್‌ವುಡ್‌ನಲ್ಲಿ ಮಾಡಿರುವುದು ಸಿಗುತ್ತವೆ.
ಟೀಕ್ ವುಡ್ ಸೇರಿದಂತೆ ಇತರ ಮರಗಳಿಂದ ತಯಾರಾದ ಉತ್ತಮ ಗುಣಮಟ್ಟದ ಪೀಠೋಪಕರಣಗಳು ಕಾಣಬಹುದು.
ಯಾವ ಮರ ಅಂತ ನಿರ್ಧರಿಸಬೇಕು, ಇಲ್ಲಿನ ಕಾರ್ಪೆಂಟರ್‌ಗಳಿಗೆ ಹೇಗಿರಬೇಕು ಮತ್ತು ಏನು ಬೇಕು ಎಂಬ ಮಾಹಿತಿ ನೀಡಬೇಕು. ಮೊದಲಿಗೆ ಒಟ್ಟಾರೆ ಮೊತ್ತದ ಶೇ 50ರಷ್ಟು ಅಡ್ವಾನ್ಸ್ ಆಗಿ ನೀಡಬೇಕು. ಡಿಸೈನ್‌ಗಳನ್ನು ಮುಂಚಿತವಾಗಿಯೇ ಅಂತಿಮ ಮಾಡಿಕೊಂಡು ಹೋದರೆ ಸಮಯ ಉಳಿತಾಯ ಆಗುತ್ತದೆ. ಗುಣಮಟ್ಟದ ಮರಗಳು ಅರಣ್ಯ ಇಲಾಖೆಯಿಂದ ಬರುತ್ತದೆ.