Shivarajkumar News :
CANCER ವಿರುದ್ಧ ಧೈರ್ಯದಿಂದ ಹೋರಾಡಿ, ಎಷ್ಟೋ ರೋಗಿಗಳಿಗೆ ಬದುಕಿನ ಭರವಸೆ ಮೂಡಿಸಿದ ಸೆಲೆಬ್ರಿಟಿಗಳ ಮಾಹಿತಿ ಇಲ್ಲಿದೆ.
ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಇತ್ತೀಚೆಗಷ್ಟೇ CANCER ಗೆದ್ದು ಬಂದಿದ್ದಾರೆ. 2024ರ ಡಿಸೆಂಬರ್ 24ರಂದು ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ಸ್ಯಾಂಡಲ್ವುಡ್ನ ಖ್ಯಾತ ನಟ, ಅಲ್ಲೇ ಕೆಲ ದಿನಗಳವರೆಗೆ ಸೂಕ್ತ ಚಿಕಿತ್ಸೆ, ವಿಶ್ರಾಂತಿ ಪಡೆದುಕೊಂಡರು.
2024ರ ಜನವರಿ 26ರಂದು ರಾಜ್ಯಕ್ಕೆ ಮರಳಿದರು. ನಂತರ, ಪತ್ನಿ ಗೀತಾ, ಸಂಬಂಧಿಕರು, ಆಪ್ತರು, ವೈದ್ಯರ ತಂಡ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಶಿವಣ್ಣ ಧನ್ಯವಾದ ಅರ್ಪಿಸಿದರು.
Sanjay Dutt:ಅಲ್ಲಿ ನಾನ್ ಸ್ಮಾಲ್ ಸೆಲ್ ಲಂಗ್ CANCER ಇರುವುದು ಪತ್ತೆಯಾಯ್ತು. ನಂತರ ಮುನ್ನಾ ಭಾಯಿ ಎಂಬಿಬಿಎಸ್ ನಟ ಮುಂಬೈನಲ್ಲಿ ಚಿಕಿತ್ಸೆ ಪಡೆದರು. 2021ರಲ್ಲಿ CANCER ಮುಕ್ತರಾಗಿದ್ದಾರೆ ಎಂದು ಘೋಷಿಸಲಾಯಿತು.
2020ರಲ್ಲಿ ಬಾಲಿವುಡ್ನ ಬಹುಬೇಡಿಕೆ ನಟ ಸಂಜಯ್ ದತ್ ಅವರಿಗೆ 4ನೇ ಹಂತದ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಯ್ತು. ಉಸಿರಾಟದ ತೊಂದರೆ ಅನುಭವಿಸಿದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
Sonali Bendre: ಆ ಪ್ರಕಾರ, ನ್ಯೂಯಾರ್ಕ್ನಲ್ಲಿ 4ನೇ ಹಂತದ ಮೆಟಾಸ್ಟಾಟಿಕ್ CANCERಗೆ ಚಿಕಿತ್ಸೆ ಪಡೆದಿದ್ದಾರೆ. ವೈದ್ಯರು ಅವರಿಗೆ ಬದುಕುಳಿಯುವ ಸಾಧ್ಯತೆ ಕೇವಲ ಶೇ.30ರಷ್ಟಿದೆ ಎಂದು ಹೇಳಿದ್ದರೂ, ನಟಿ ಈ ಹೋರಾಟದಲ್ಲಿ ಜಯಿಸಿದರು.
ಕೀಮೋಥೆರಪಿಯಂತಹ ಕಠಿಣ ಕ್ಷಣದಲ್ಲಿ ತಮ್ಮ ಕುಟುಂಬ ಮತ್ತು ಸ್ನೇಹಿತರ ಬೆಂಬಲ ಅಪಾರವಾಗಿತ್ತು ಎಂಬುದನ್ನು ಬಹಿರಂಗಪಡಿಸಿದರು. ನಟಿ 2021ರಲ್ಲಿ CANCER ಮುಕ್ತರಾದರು.ಹಮ್ ಸಾಥ್ ಸಾಥ್ ಹೈ ನಟಿ ಸೋನಾಲಿ ಬೇಂದ್ರೆಗೆ 2018ರಲ್ಲಿ CANCER ಇರುವುದು ಪತ್ತೆಯಾಯ್ತು. ನಟಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಚಿಕಿತ್ಸೆಯ ಕುರಿತು ಅಪ್ಡೇಟ್ಸ್ ಹಂಚಿಕೊಂಡರು.
Manisha Koirala: ತಮ್ಮ CANCER ಹೋರಾಟದ ಉದ್ದಕ್ಕೂ ಸಕಾರಾತ್ಮಕವಾಗಿಯೇ ಇದ್ದು, ಅಭಿಮಾನಿಗಳಿಗೆ ಧೈರ್ಯ ತುಂಬಿದ್ರು. ವಿದೇಶದಲ್ಲಿ ಶಸ್ತ್ರಚಿಕಿತ್ಸೆ ಮತ್ತು ಕೀಮೋಥೆರಪಿಗೆ ಒಳಗಾದರು. ಮನ್ ನಟಿ ಮನೀಷಾ ಕೊಯಿರಾಲಾ 2012ರಲ್ಲಿ, ತಮ್ಮ 42ನೇ ಹರೆಯದಲ್ಲಿ CANCERಗೆ (ovarian cancer) ಒಳಗಾದರು.
Mahima Chaudhary: ಅನುಪಮ್ ಖೇರ್ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ನಿಂದ ಅವರ CANCER ಹೋರಾಟದ ಬಗ್ಗೆ ತಿಳಿದ ನಂತರ ಅಭಿಮಾನಿಗಳು ಆಘಾತಕ್ಕೊಳಗಾದ್ರು. ಕೀಮೋಥೆರಪಿ ಮತ್ತು ಹಲವು ಚಿಕಿತ್ಸೆ ಬಳಿಕ CANCER ಮುಕ್ತರಾದ್ರು.ಪರ್ದೇಸ್ ಮತ್ತು ಧಡ್ಕನ್ ಚಿತ್ರಗಳ ಪಾತ್ರಗಳಿಗೆ ಹೆಸರುವಾಸಿಯಾಗಿರೋ ನಟಿ ಮಹಿಮಾ ಚೌಧರಿ ಅವರಿಗೆ 2022ರಲ್ಲಿ ಸ್ತನ CANCER ಇರುವುದು ಪತ್ತೆಯಾಯಿತು.