spot_img
spot_img

ವಿಶ್ವ ವಿಶೇಷ ಚೇತನರ ದಿನ : ವಿಶೇಷ ಚೇತನ ವ್ಯಕ್ತಿಗಳ ಹಕ್ಕುಗಳು ಮತ್ತು ಯೋಗಕ್ಷೇಮದ ಬಗ್ಗೆ ಅರಿವು

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಹೈದರಾಬಾದ: ವಿಶ್ವಸಂಸ್ಥೆಯು 1992 ರಲ್ಲಿ ಸಾಮಾನ್ಯ ಸಭೆಯ ನಿರ್ಣಯದಲ್ಲಿ ವಿಶ್ವ ವಿಶೇಷ ಚೇತನರ ದಿನದ ಆಚರಣೆ ಘೋಷಣೆ ಮಾಡಲಾಗಿದೆ.

ಅಂತಾರಾಷ್ಟ್ರೀಯ ವಿಶೇಷ ಚೇತನರ ದಿನವನ್ನು ಪ್ರತಿ ವರ್ಷ ಡಿಸೆಂಬರ್ 3 ರಂದು ಆಚರಿಸಲಾಗುತ್ತದೆ. ಸಮಾಜ ಮತ್ತು ಅಭಿವೃದ್ಧಿಯ ಪ್ರತಿಯೊಂದು ಹಂತಗಳಲ್ಲಿ ವಿಶೇಷ ಚೇತನ ವ್ಯಕ್ತಿಗಳ ಹಕ್ಕುಗಳು ಮತ್ತು ಯೋಗಕ್ಷೇಮ ಉತ್ತೇಜಿಸುವುದು ಮತ್ತು ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಜೀವನದ ಎಲ್ಲ ಅಂಶಗಳಲ್ಲಿ ವಿಶೇಷ ಚೇತನ ವ್ಯಕ್ತಿಗಳ ಪರಿಸ್ಥಿತಿಯ ಅರಿವು ಮೂಡಿಸುವುದು ಈ ದಿನದ ಉದ್ದೇಶವಾಗಿದೆ.

ವಿಶ್ವ ವಿಶೇಷ ಚೇತನರ ದಿನದ ಆಚರಣೆಯನ್ನು ವಿಶ್ವಸಂಸ್ಥೆಯು 1992 ರಲ್ಲಿ ಸಾಮಾನ್ಯ ಸಭೆಯ ನಿರ್ಣಯದಲ್ಲಿ ಘೋಷಿಸಿತು. ಈ ವಾರ್ಷಿಕ ಆಚರಣೆಯನ್ನು ಜನರಲ್ ಅಸೆಂಬ್ಲಿ ರೆಸಲ್ಯೂಶನ್ 47/3 ಅಡಿ ಘೋಷಿಸಲಾಯಿತು.

ಹೆಚ್ಚಿನ ಜನರಿಗೆ ತಮ್ಮ ನೆರೆಹೊರೆಯಲ್ಲಿ ಎಷ್ಟು ವಿಶೇಷ ಚೇತನರು ಇದ್ದಾರೆ ಎಂಬುದು ತಿಳಿದಿರುವುದಿಲ್ಲ. ಅವರು ಸಮಾಜದಲ್ಲಿ ತಮ್ಮ ಹಕ್ಕುಗಳನ್ನು ಪಡೆಯುತ್ತಿದ್ದಾರೆಯೇ ಅಥವಾ ಇಲ್ಲವೇ? ಉತ್ತಮ ಆರೋಗ್ಯ ಮತ್ತು ಸ್ವಾಭಿಮಾನವನ್ನು ಪಡೆಯಲು, ಅವರಿಗೆ ಸಮಾಜದ ಇತರ ಜನರ ಸಹಾಯ ಬೇಕಾಗುತ್ತದೆ.

ಆದರೆ, ಸಾಮಾನ್ಯವಾಗಿ ಜನರು ಇದನ್ನು ಮಾಡುವುದಿಲ್ಲ. ಆದ್ದರಿಂದ, ವಿಶೇಷ ಚೇತನರ ನೈಜ ಸ್ಥಿತಿಯನ್ನು ಸಾಮಾನ್ಯ ಜನರಿಗೆ ತಿಳಿಸಲು ಮತ್ತು ಅರಿವು ಮೂಡಿಸಲು ವಿಶ್ವ ಚೇತನರ ದಿನವನ್ನು ಆಚರಿಸಲಾಗುತ್ತದೆ.

ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ವಿಶೇಷಚೇತನರ ಹಕ್ಕುಗಳು ಮತ್ತು ಕಲ್ಯಾಣವನ್ನು ಉತ್ತೇಜಿಸುವುದು ಇದರ ಉದ್ದೇಶ. ಇದಲ್ಲದೇ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಬದುಕಿನ ಪ್ರತಿಯೊಂದು ಅಂಶದಲ್ಲೂ ವಿಶೇಷ ಚೇತನರ ಸ್ಥಿತಿಗತಿಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ವಿಶೇಷ ಚೇತನ ವ್ಯಕ್ತಿಗಳ ಹಕ್ಕುಗಳ ಸಮಾವೇಶವನ್ನು 2006 ರಲ್ಲಿ ವಿಶ್ವಸಂಸ್ಥೆಯಲ್ಲಿ ಅಂಗೀಕರಿಸಲಾಯಿತು.

2011 ರ ಜನಗಣತಿಯ ಪ್ರಕಾರ, ದೇಶದಲ್ಲಿ ವಿಶೇಷ ಚೇತನ ವ್ಯಕ್ತಿಗಳ ಸಂಖ್ಯೆ 2.68 ಕೋಟಿ, ಇದು ದೇಶದ ಒಟ್ಟು ಜನಸಂಖ್ಯೆಯ 2.21 ಪ್ರತಿಶತ. RPwD ಕಾಯಿದೆ, 2016 ರ ಪ್ರಕಾರ, 21 ವಿಧದ ಅಂಗವೈಕಲ್ಯಗಳಿವೆ. ಇದರಲ್ಲಿ ಲೊಕೊಮೊಟರ್ ಅಸಾಮರ್ಥ್ಯ, ದೃಷ್ಟಿ ದೋಷ, ಶ್ರವಣ ದೋಷ, ವಾಕ್ ಮತ್ತು ಭಾಷಾ ಅಸಾಮರ್ಥ್ಯ, ಬೌದ್ಧಿಕ ಅಸಾಮರ್ಥ್ಯ, ಬಹು ಅಂಗವೈಕಲ್ಯ, ಸೆರೆಬ್ರಲ್ ಪಾಲ್ಸಿ, ಡ್ವಾರ್ಫಿಸಮ್ ಇತ್ಯಾದಿಗಳು ಸೇರಿವೆ.

ಭಾರತದಲ್ಲಿ ವಿಶೇಷ ಚೇತನರ ಹಕ್ಕುಗಳು ಪರಿವರ್ತಕ ಬದಲಾವಣೆಗೆ ಒಳಗಾಗುತ್ತಿವೆ. ವಿಶೇಷ ಚೇತನ ವ್ಯಕ್ತಿಗಳ ಒಳಗೊಳ್ಳುವಿಕೆ ಮತ್ತು ಸಬಲೀಕರಣಕ್ಕಾಗಿ ಸರ್ಕಾರ ಬದ್ಧತೆಯಿಂದ ಕೆಲಸ ಮಾಡುತ್ತಿದೆ.

ಶಿಕ್ಷಣ, ಸಾರಿಗೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಡೆತಡೆ – ಮುಕ್ತ ವಾತಾವರಣವನ್ನು ಸೃಷ್ಟಿಸಲು ಸರ್ಕಾರವು ಪ್ರಾರಂಭಿಸಿರುವ ಆಕ್ಸೆಸಿಬಲ್ ಇಂಡಿಯಾ ಅಭಿಯಾನವು ಈ ಪ್ರಯತ್ನದ ಕೇಂದ್ರವಾಗಿದೆ.

ಭಾರತ ಸರ್ಕಾರವು ಆರ್ಥಿಕ ನೆರವು ಕಾರ್ಯಕ್ರಮಗಳು, ಕೌಶಲ್ಯ ಅಭಿವೃದ್ಧಿ ಉಪಕ್ರಮಗಳು ಮತ್ತು ಶಿಕ್ಷಣಕ್ಕೆ ಬೆಂಬಲ ಸೇರಿದಂತೆ ಸಬಲೀಕರಣದ ಮೇಲೆ ಕೇಂದ್ರೀಕರಿಸಿದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಪ್ರಯತ್ನಗಳ ಪೈಕಿ ದಿವ್ಯ ಕಲಾ ಮೇಳವು ವಿಭಿನ್ನ ವಿಶೇಷ ಚೇತನ ಕುಶಲಕರ್ಮಿಗಳ ಕೌಶಲ್ಯಗಳನ್ನು ಆಚರಿಸುವ, ಅವರ ಪ್ರತಿಭೆಯನ್ನು ಪ್ರದರ್ಶಿಸುವ ಮತ್ತು ಸಮುದಾಯದೊಳಗೆ ಆರ್ಥಿಕ ಸ್ವಾವಲಂಬನೆ ಬೆಳೆಸುವ ಕಾರ್ಯಕ್ರಮವಾಗಿದೆ.

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಪೈಕಿ ಸಿಕ್ಕಿಂ ಅತಿ ಹೆಚ್ಚು ವಿಶೇಷ ಚೇತನರನ್ನು ಹೊಂದಿದೆ. ಸಿಕ್ಕಿಂನ ಒಟ್ಟು ಜನಸಂಖ್ಯೆಯ 2.98% ವಿಶೇಷ ಚೇತನರಿದ್ದಾರೆ ಎಂದು ವರದಿಯಾಗಿದೆ. ದಮನ್ ಮತ್ತು ದಿಯು (0.9%) ಅತ್ಯಂತ ಕಡಿಮೆ ವಿಶೇಷ ಚೇತನರನ್ನು ಹೊಂದಿದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಡಿ.29 ಕ್ಕೆ 384 ಕೆಎಎಸ್‌ ಹುದ್ದೆ ಪೂರ್ವಭಾವಿ ಮರುಪರೀಕ್ಷೆ

ಕರ್ನಾಟಕ ಲೋಕಸೇವಾ ಆಯೋಗವು ಡಿಸೆಂಬರ್ 29, 2024 ರಂದು ನಡೆಸಲು ಉದ್ದೇಶಿಸಿರುವ ಕೆಎಎಸ್‌ - ಗೆಜೆಟೆಡ್‌ ಪ್ರೊಬೇಷನರ್ ಹುದ್ದೆಗಳ ಪೂರ್ವಭಾವಿ ಮರುಪರೀಕ್ಷೆ ಸಂಬಂಧ, ಮಹತ್ವದ...

ಕಿರುತೆರೆ ಕಾರ್ಮಿಕರ ಪ್ರತಿಭಟನೆ : ಸೀರಿಯಲ್ ಗಳು ಸ್ಥಗಿತ

ಬೆಂಗಳೂರು: ಮೂರು ದಿನಗಳಿಂದ ಕನ್ನಡ ಕಿರುತೆರೆ ಧಾರಾವಾಹಿಗಳ (Kannada TV Serials) ಕಾರ್ಮಿಕರು ಸಂಬಳ ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೆಲಸ (Serial shooting) ನಿಲ್ಲಿಸಿ...

ಹೊಸ ಜಿಲ್ಲೆಯಲ್ಲಿ ಮಹಾಕುಂಭ ಮೇಳ : ಸರ್ಕಾರದಿಂದ ಘೋಷಣೆ

ಲಖನೌ: ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರ ಪ್ರದೇಶ (Uttar Pradesh)ದ ಬಿಜೆಪಿ ಸರ್ಕಾರ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುವ ಸ್ಥಳವನ್ನು ಹೊಸ ಜಿಲ್ಲೆಯಾಗಿ ಘೋಷಿಸಿ...

13 ಜನವರಿ ಮತ್ತು 26 ರ ನಡುವೆ ಮಹಾಕುಂಭ ಮೇಳ

ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ಮುಂಬರುವ 13 ಜನವರಿ ಮತ್ತು 26 ರ ನಡುವೆ ಮಹಾಕುಂಭ ಮೇಳವನ್ನು ಆಯೋಜಿಸಲಾಗಿದೆ. ದೇಶದಾದ್ಯಂತ ಹಿಂದೂ ಸಂಸೃತಿಯನ್ನು ಪಸರಿಸಲು...