spot_img
spot_img

WPL 2025:RCB ತಂಡದಿಂದ ಹೊರಬಿದ್ದ ಆಲ್ರೌಂಡರ್.

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

WPL 2025 News:

ಇದೀಗ ಅವರ ಸ್ಥಾನಕ್ಕೆ ಬದಲಿ ಪ್ಲೇಯರ್​ ಆಗಿ ಇಂಗ್ಲೆಂಡ್‌ನ ಆಲ್‌ರೌಂಡರ್ ಚಾರ್ಲಿ ಡೀನ್ (charlie dean) ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆರ್‌ಸಿಬಿ ಡೀನ್‌ ಅವರನ್ನು 30 ಲಕ್ಷಕ್ಕೆ ಖರೀದಿಸಿದೆ. ಈ ಬಗ್ಗೆ ಸ್ವತಃ ಆರ್​ಸಿಬಿ ಬಹಿರಂಗ ಪಡಿಸಿದೆ.

ಮೊಣಕಾಲಿನ ಗಾಯದಿಂದಾಗಿ ಮೋಲಿನೆಕ್ಸ್ WPL (2025) ಮುಂದಿನ ಆವೃತ್ತಿಯಿಂದ ಹೊರಗುಳಿಯಲಿದ್ದಾರೆ ಎಂದು ತಿಳಿಸಿದೆ. ಗಾಯಕ್ಕೆ ತುತ್ತಾಗಿರುವ ಕಾರಣ ಮೊಲಿನೆಕ್ಸ್​ ಮುಂದಿನ ಋತುವಿನಿಂದ ಹೊರಗುಳಿಯಲಿದ್ದಾರೆ.

ಮಹಿಳಾ ಪ್ರೀಮಿಯರ್​ ಲೀಗ್​ (WPL) ಆರಂಭಕ್ಕೂ ಮೊದಲೇ ಆಸ್ಟ್ರೇಲಿಯಾದ ಬೌಲಿಂಗ್ ಆಲ್‌ರೌಂಡರ್ ಸೋಫಿ ಮೊಲಿನೆಕ್ಸ್ (Sophie Molineux) ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ತಂಡದಿಂದ ಹೊರಬಿದ್ದಿದ್ದಾರೆ

Molyneux: ಈ ಅವಧಿಯಲ್ಲಿ ಒಟ್ಟು 71 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ ಟೆಸ್ಟ್‌ನಲ್ಲಿ 7, ಏಕದಿನದಲ್ಲಿ 23 ಮತ್ತು ಟಿ-20 ಗಳಲ್ಲಿ 41 ವಿಕೆಟ್​ ಉರುಳಿಸಿದ್ದಾರೆ.

ಎಡಗೈ ಆಫ್-ಸ್ಪಿನ್ ಬೌಲರ್ ಆಗಿರುವ ಮೊಲಿನೆಕ್ಸ್​ ಆಸ್ಟ್ರೇಲಿಯಾ ಪರ ಒಟ್ಟು 44 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 3 ಟೆಸ್ಟ್, 13 ಏಕದಿನ ಮತ್ತು 28 ಟಿ- 20 ಪಂದ್ಯಗಳನ್ನು ಆಡಿದ್ದಾರೆ.

Charlie Dean: ಈ ಅವಧಿಯಲ್ಲಿ ಅವರು ಒಟ್ಟು 122 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೆಸ್ಟ್‌ನಲ್ಲಿ 7, ಏಕ ದಿನಗಳಲ್ಲಿ 69 ಮತ್ತು ಟಿ-20ಗಳಲ್ಲಿ 46 ವಿಕೆಟ್​ಗಳನ್ನು ಕಬಳಿಸಿದ್ದಾರೆ.

ಬಲಗೈ ಬ್ಯಾಟಿಂಗ್ ಆಲ್‌ರೌಂಡರ್ ಆಗಿರುವ ಚಾರ್ಲಿ ಡೀನ್, ಇಂಗ್ಲೆಂಡ್ ಪರ 78 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 3 ಟೆಸ್ಟ್, 39 ಏಕದಿನ ಮತ್ತು 36 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಇದೀಗ ಮೂರನೇ ಆವೃತ್ತಿಗೆ ವೇದಿಕೆ ಸಿದ್ಧವಾಗಿದ್ದು, ಈ ಪಂದ್ಯಾವಳಿಗಳು ಫೆಬ್ರವರಿ 7 ರಿಂದ ಮಾರ್ಚ್ 2 ರವರೆಗೆ ನಡೆಯಲಿವೆ. ಈ ಬಾರಿಯ ಪಂದ್ಯಾವಳಿಗಳು ಒಟ್ಟು ನಾಲ್ಕು ಸ್ಥಳಗಳಲ್ಲಿ ನಡೆಯಲಿದೆ. ಬೆಂಗಳೂರು, ಲಕ್ನೋ, ಮುಂಬೈ ಮತ್ತು ವಡೋದರಾ ಮೈದಾನಗಳು WPL ಗೆ ಆತಿಥ್ಯ ವಹಿಸಿಕೊಳ್ಳುತ್ತಿವೆ.ಏತನ್ಮಧ್ಯೆ, ಮಹಿಳಾ ಪ್ರೀಮಿಯರ್​ ಲೀಗ್​ ಈ ವರೆಗೂ ಎರಡು ಆವೃತ್ತಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಚೊಚ್ಚಲ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಕಪ್​ ಗೆದ್ದುಕೊಂಡಿದ್ದರೇ, ಎರಡನೇ ಆವೃತ್ತಿಯಲ್ಲಿ ಆರ್‌ಸಿಬಿ ಚಾಂಪಿಯನ್ ಪಟ್ಟಕ್ಕೇರಿತ್ತು.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

NARGIS FAKHRI MARRIAGE:ವರ ಟೋನಿ ಬಗ್ಗೆ ಇಲ್ಲಿದೆ ಮಾಹಿತಿ

  Nargis marriage news: ಸೂಪರ್​ ಹಿಟ್​ ರಾಕ್‌ಸ್ಟಾರ್, ಮೆ ತೇರಾ ಹೀರೋ ಮತ್ತು ಹೌಸ್‌ಫುಲ್ 3 ಚಿತ್ರಗಳಿಗೆ ಹೆಸರುವಾಸಿಯಾಗಿರುವ ಬಾಲಿವುಡ್ ನಟಿ ನರ್ಗಿಸ್ ಫಕ್ರಿ (Nargis...

THREE BUS EXPLOSION IN ISRAEL:ಉಗ್ರರ ಕೃತ್ಯದ ಶಂಕೆ, ವ್ಯಗ್ರಗೊಂಡ ಇಸ್ರೇಲ್

Bat Yam News: ಒಂದೂವರೆ ವರ್ಷಗಳ ಕಾಲ ನಡೆದ ಯುದ್ದದ ಬಳಿಕ ಕದನ ವಿರಾಮಕ್ಕೆ ಹಮಾಸ್​, ISRAEL​ ಒಪ್ಪಿದ್ದು, ಇದರ ಭಾಗವಾಗಿ ಹಸ್ತಾಂತರ ಪ್ರಕ್ರಿಯೆ ಕೂಡ...

NEW BAT CORONAVIRUS: ಕೋವಿಡ್ ರೀತಿಯ ಮತ್ತೊಂದು ವೈರಸ್ ಬಾವಲಿಯಲ್ಲಿ ಪತ್ತೆ

  Beijing, China News: ಇದು ಜನರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ಚೀನಾದ ಬ್ಯಾಟ್​ ವುಮೆನ್​ ಎಂದೇ ಖ್ಯಾತಿಯಾಗಿರುವ ವೈರಾಲಾಜಿಸ್ಟ್​​ ಶಿ ಜೆಂಗಾಲಿ ಅಧ್ಯಯನ ನಡೆಸಿದ್ದಾರೆ....

CONTENT CREATORS KUMBH JOURNEY:1500 ಕಿ.ಮೀ ದೂರದ ಪ್ರಯಾಗ್ರಾಜ್ಗೆ ನಯಾಪೈಸೆ ಖರ್ಚಿಲ್ಲದೆ ತಲುಪಿದ ಕಂಟೆಂಟ್ ಕ್ರಿಯೇಟರ್!

New Delhi News: ಮಹಾರಾಷ್ಟ್ರದ ಕಂಟೆಂಟ್​ ಕ್ರಿಯೇಟರ್​ ದಿವ್ಯಾ ಫೋಫಾನಿ ಕುಂಭಮೇಳಕ್ಕೆ ತಾವು ಮುಂಬೈನಿಂದ ಬಂದ ರೀತಿ ಮತ್ತು ಹಾದಿಯ ನಡುವೆ ಜನರು ನೀಡಿದ ನೆರವನ್ನು...