xiaomi 15 Ultra Launched:
XIAOMI 15 ULTRA ಚೀನಿ ಮಾರುಕಟ್ಟೆಗೆ ಕಾಲಿಟ್ಟಿದೆ. ಇದರ ಬೆಲೆ ಮತ್ತು ವಿಶೇಷತೆಗಳ ಕುರಿತ ವಿವರ ಇಲ್ಲಿದೆ ನೋಡಿ.
Xiaomi 15 Ultra Launched: ‘
XIAOMI 15 ULTRA’ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇದು ‘ಶಿಯೋಮಿ 15’ ಮತ್ತು ‘ಶಿಯೋಮಿ 15 ಪ್ರೊ’ ಮಾದರಿಗಳೊಂದಿಗೆ ಕಂಪನಿಯ ಪ್ರಮುಖ ಸ್ಮಾರ್ಟ್‌ಫೋನ್ ಲೈನ್ಅಪ್ಗೆ ಸೇರುತ್ತದೆ.
ಈ ಫೋನ್ ಕಳೆದ ವರ್ಷ ಬಿಡುಗಡೆಯಾದ ‘ಶಿಯೋಮಿ 14 ಅಲ್ಟ್ರಾ’ದ ಉತ್ತರಾಧಿಕಾರಿಯಾಗಿ ಬಾರ್ಸಿಲೋನಾದಲ್ಲಿ ನಡೆಯಲಿರುವ MWC (ಮೊಬೈಲ್ ವರ್ಲ್ಡ್ ಕಾಂಗ್ರೆಸ್) 2025ರ ಕಾರ್ಯಕ್ರಮದಲ್ಲಿ ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸುವ ನಿರೀಕ್ಷೆಯಿದೆ.
ಶಿಯೋಮಿ 14 ಸೀರಿಸ್ನ ಇತರ ಫೋನ್‌ಗಳಂತೆ, ಶಿಯೋಮಿ 15 ಅಲ್ಟ್ರಾ ಕ್ವಾಲ್ಕಾಮ್‌ನ ಇತ್ತೀಚಿನ ಸ್ನಾಪ್‌ಡ್ರಾಗನ್ 8 ಎಲೈಟ್ SoC ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದರ ಜೊತೆಗೆ, ಹೊಸ ಹೈಪರ್ಓಎಸ್ 2 ಬಳಕೆದಾರ ಇಂಟರ್ಫೇಸ್‌ನೊಂದಿಗೆ ಬರುತ್ತದೆ.
Xiaomi 15 Ultra Specifications:
Operating system:
ಡ್ಯುಯಲ್ ಸಿಮ್ (ನ್ಯಾನೋ) ‘ಶಿಯೋಮಿ 15 ಅಲ್ಟ್ರಾ’ ಆಂಡ್ರಾಯ್ಡ್ 15 ಆಧಾರಿತ ಹೈಪರ್ಓಎಸ್ 2 ಆಪರೇಟಿಂಗ್ ಸಿಸ್ಟಮ್ (OS)ನಲ್ಲಿ ಕಾರ್ಯನಿರ್ವಹಿಸುತ್ತದೆ.
Display:
6.73-ಇಂಚಿನ (1440 x 3200 ಪಿಕ್ಸೆಲ್‌ಗಳು) LTPO AMOLED ಸ್ಕ್ರೀನ್ ಅನ್ನು 120Hz ರಿಫ್ರೆಶ್ ರೇಟ್ ಮತ್ತು 3,200 nits ಗರಿಷ್ಠ ಹೊಳಪನ್ನು ಹೊಂದಿದೆ. ಈ ಪ್ಯಾನಲ್ 300Hz ಟಚ್ ಸ್ಯಾಂಪ್ಲಿಂಗ್ ರೇಟ್, HDR 10+ ಮತ್ತು ಡಾಲ್ಬಿ ವಿಷನ್ ಅನ್ನು ಬೆಂಬಲಿಸುತ್ತದೆ.
Processor:
ಈ ಫೋನ್‌ನಲ್ಲಿರುವ ಪ್ರೊಸೆಸರ್‌ಗಾಗಿ ಕಂಪನಿಯು ಕ್ವಾಲ್ಕಾಮ್‌ನ ಪ್ರಮುಖ ಆಕ್ಟಾ-ಕೋರ್ 3nm ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ ಒದಗಿಸಿದೆ. ಇದು ಹುಡ್ ಅಡಿಯಲ್ಲಿ ಗರಿಷ್ಠ ಗಡಿಯಾರದ ವೇಗ 4.32GHz ಹೊಂದಿದೆ. ಈ ಚಿಪ್‌ಸೆಟ್ 16GB ವರೆಗಿನ LPDDR5X RAM, 1TB ವರೆಗಿನ UFS 4.1 ಸ್ಟೋರೇಜ್ ಮತ್ತು ಅಡ್ರಿನೊ 830 GPUನೊಂದಿಗೆ ಬರುತ್ತದೆ.
Camera setup:
ಕ್ಯಾಮೆರಾ ಸೆಟಪ್ ವಿಷಯಕ್ಕೆ ಬಂದರೆ, ಶಿಯೋಮಿ 15 ಅಲ್ಟ್ರಾ ಸೆಂಟ್ರೆಟೆಡ್, ಸರ್ಕ್ಯೂಲರ್ ಮಾಡ್ಯೂಲ್‌ನಲ್ಲಿ ಕ್ವಾಡ್ ರಿಯರ್ ಕ್ಯಾಮೆರಾ ಸಿಸ್ಟಮ್‌ನೊಂದಿಗೆ ಬರುತ್ತದೆ.
Primary Sensor:
1-ಇಂಚಿನ 50-MP ಸೋನಿ LYT900 ಪ್ರೈಮೇರಿ ಸೆನ್ಸಾರ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS), ಫಿಕ್ಸೆಡ್ f/1.63 ಅಪರ್ಚರ್ ಹೊಂದಿದೆ.
Telephoto sensor:
50-MP ಸೋನಿ IMX858 ಸೆನ್ಸರ್ ಜೊತೆಗೆ f/1.8 ಅಪರ್ಚರ್, 3x ಆಪ್ಟಿಕಲ್ ಜೂಮ್, 75mm ಫೋಕಲ್ ಲೆಂತ್, 200-MP ಸ್ಯಾಮ್‌ಸಂಗ್ ISOCELL HP9 ಟೆಲಿಫೋಟೋ ಸೆನ್ಸರ್ ಜೊತೆಗೆ 100mm ಫೋಕಲ್ ಲೆಂತ್, f/2.6 ಅಪರ್ಚರ್ ಹೊಂದಿದೆ.
Ultrawide-angle camera:
f/2.2 ಅಪರ್ಚರ್ ಹೊಂದಿರುವ 50-MP ಅಲ್ಟ್ರಾ-ವೈಡ್- ಆ್ಯಂಗಲ್ ಕ್ಯಾಮೆರಾ, 115-ಡಿಗ್ರಿ ಫೀಲ್ಡ್-ಆಫ್-ವ್ಯೂ (FoV) ಒಳಗೊಂಡಿದೆ. ಈ ಫೋನ್ 8K/30fps ಅಥವಾ 4K/60fps ವರೆಗಿನ ವಿಡಿಯೋಗಳನ್ನು ರೆಕಾರ್ಡ್ ಮಾಡಬಹುದು.
Front camera:
ಕಂಪನಿಯು ಸೆಲ್ಫಿಗಳು ಮತ್ತು ವಿಡಿಯೋ ಕಾಲ್ಸ್ಗಾಗಿ ಈ ಫೋನ್‌ನಲ್ಲಿ f/2.0 ಅಪರ್ಚರ್ 32-ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನೂ ಸಹ ಒದಗಿಸಿದೆ.
Battery: ಈ ಫೋನ್ 90W (ವೈರ್ಡ್), 80W (ವೈರ್‌ಲೆಸ್) ಫಾಸ್ಟ್ ಚಾರ್ಜಿಂಗ್‌ನೊಂದಿಗೆ 6,000mAh ಬ್ಯಾಟರಿಯನ್ನು ಹೊಂದಿದೆ. ಇದು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಸಪೋರ್ಟ್ ಮಾಡುತ್ತದೆ.
Connectivity Features:
ಇದು 5G, Wi-Fi 7, ಬ್ಲೂಟೂತ್ 5.4, NFC, GPS, GLONASS, ಗೆಲಿಲಿಯೋ, BeiDou, NavIC, USB ಟೈಪ್-C ನಂತಹ ಸಂಪರ್ಕ ಕನೆಕ್ಟಿವಿಟಿ ಫೀಚರ್ಸ್ ಜೊತೆ ಬರುತ್ತದೆ.
Security Features:
ಈ ಫೋನ್ ಸುರಕ್ಷತೆಗಾಗಿ ಅಲ್ಟ್ರಾಸಾನಿಕ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ. ಈ ಫೋನ್ ಡಸ್ಟ್ ಮತ್ತು ವಾಟರ್ ರೆಸಿಸ್ಟೆನ್ಸಿಗಾಗಿ IP68 ರೇಟಿಂಗ್ ಹೊಂದಿದೆ.
Dimensions:
ಈ ಫೋನಿನ ಬ್ಲ್ಯಾಕ್, ವೈಟ್ ರೂಪಾಂತರಗಳು 161.3mm x 75.3mm x 9.35mm ಅಳತೆ ಮತ್ತು 226g ತೂಗುತ್ತವೆ. ಇದರ ಇತರ ರೂಪಾಂತರಗಳು 229 ಗ್ರಾಂ ತೂಕ ಮತ್ತು 9.48 ಮಿಮೀ ದಪ್ಪವನ್ನು ಹೊಂದಿವೆ.
Color option:
ಈ ಫೋನ್ ಕ್ಲಾಸಿಕ್ ಬ್ಲ್ಯಾಕ್ ಆ್ಯಂಡ್ ಸಿಲ್ವರ್, ಪೈನ್ ಮತ್ತು ಸೈಪ್ರೆಸ್ ಗ್ರೀನ್, ಬ್ಲ್ಯಾಕ್, ವೈಟ್ ಕಲರ್ಗಳಲ್ಲಿ ಮೂಡಿ ಬರುತ್ತೆದೆ. ಕಂಪನಿಯು ಈ ಹ್ಯಾಂಡ್‌ಸೆಟ್‌ನೊಂದಿಗೆ ಶಿಯೋಮಿ ಪ್ರೊಫೆಷನಲ್ ಇಮೇಜಿಂಗ್ ಕಿಟ್ ಅನ್ನು ಸಹ ಪರಿಕರವಾಗಿ ನೀಡುತ್ತಿದೆ. ಇದರ ಚಿಲ್ಲರೆ ಬೆಲೆ CNY 999 (ಸರಿಸುಮಾರು ರೂ. 12,000) ಆಗಿದೆ.
Xiaomi 15 Ultra Variants and Price:
ಕಂಪನಿಯು ಇದನ್ನು ಮೂರು ರೂಪಾಂತರಗಳಲ್ಲಿ ತಂದಿದೆ. 12GB RAM + 256GB ಸ್ಟೋರೇಜ್ ಬೆಲೆ: CNY 6,499 (ಅಂದಾಜು ರೂ. 78,000), 16GB RAM + 512GB ಸ್ಟೋರೇಜ್ ಬೆಲೆ: CNY 6,999 (ಅಂದಾಜು ರೂ. 84,000) ಮತ್ತು 16GB RAM + 1TB ಶೇಖರಣಾ ಬೆಲೆ: CNY 7,799 (ಅಂದಾಜು ರೂ. 93,000).