Yadgir news Update!
ಹೆಚ್ಚು ಗಳಿಸಬೇಕು ಎಂಬ ಬಯಕೆ ಅಧಿಕಾರಿಗಳ ಮನಸಿನಲ್ಲಿ ಒಂದು ಭೂತದ ಹಾಗೆ ಕಾಡುತ್ತಿರುತ್ತೆ. ಅದಕ್ಕಾಗಿ ಅವರು ಏನು ಮಾಡುತ್ತಾರೆ ಎಂಬ ಮಾತು ನಿಮಗೆ ಗೊತ್ತೇ ಇದೆ. ಆದರೆ ಅವರು ತಮಗೆ ತಿಳಿದ ಕೆಲಸ ಮಾಡಿದರೆ ಏನಾಗುತ್ತೆ ಎಂಬ ಮಾತು ಅವರಿಗೆ ಗೊತ್ತಾಗುವುದಿಲ್ಲ! ಅವರಿಗೆ ಒಂದು ಒಳ್ಳೆಯ ಶಕ್ತಿ ಕಾಯುತ್ತಿರುತ್ತೆ ಅದು ಏನು ಎಂದು ನೀವೇ ಓದಿರಿ!
ಆಗಸ್ಟ್.04:
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಹಿನ್ನೆಲೆ ಯಾದಗಿರಿ Yadgir DHO ಡಾ.ಪ್ರಭುಲಿಂಗ್ ಮಾನಕರ್ ಅವರನ್ನು ಅಮಾನತು ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಡಳಿತಾಧಿಕಾರಿ ಆದೇಶ ಹೊರಡಿಸಿದ್ದಾರೆ.
ನೇರವಾಗಿ ಕಲಬುರಗಿ?
Yadgir DHO ಯಿಂದ ನೇರವಾಗಿ ಕಲಬುರಗಿ ತಾಲೂಕಿನ ಆಳಂದ ಸಾರ್ವಜನಿಕ ತಾಲೂಕು ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ದೂರು ಹಿನ್ನೆಲೆ ಕಳೆದ ಕೆಲ ತಿಂಗಳ ಹಿಂದೆ DHO ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು. ಜೊತೆಗೆ ಆಫೀಸ್, ಮತ್ತು ಎಲ್ಲ ಸಂಬಂದಿಕರ ಮನೆಯ ಮೇಲೆ ದಾಳಿ ನಡೆಸಿ ಸದ್ಯಕ್ಕೆ ಅವರನ್ನು ಅಮಾನತ್ತು ಮಾಡಲಾಗಿದೆ.
ಯಾದಗಿರಿ ಡಿಹೆಚ್ಒ ಜೊತೆ ಆಗಿದ್ದು ಏನು?
Yadgir ಡಿಎಚ್ಒ ಡಾ. ಪ್ರಭುಲಿಂಗ್ ಮಾನಕರ್ ಅವರನ್ನು ಅಮಾನತು ಮಾಡಲಾಗಿದೆ. ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪದಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪ್ರಭುಲಿಂಗ್ ಮಾನಕರ್ ಅವರನ್ನು ಅಮಾನತು ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಡಳಿತಾಧಿಕಾರಿ ಆದೇಶ ಹೊರಡಿಸಿದ್ದಾರೆ.
FIR ಮಾಡಿದ ಸಮಯ:
ಇದೆ ತಿಂಗಳ ಮೊದಲ ದಿನದಂದು ವಿವಿಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದ ಸಲುವಾಗಿ ನಂದಕುಮಾರ್ ವಿವಿಗೆ ಆಗಮಿಸಿದ್ದರು. ಈ ವೇಳೆ ನಂದಕುಮಾರ್ ಅವರನ್ನಿ ವಿವಿಯ ಹೊರಗಡೆ ಗೇಟ್ ಬಳಿಯೇ ತಡೆದು ವಿವಿಯ ಆವರಣದ ಒಳಗಡೆ ಬಿಡದೆ ಸೆಕ್ಯೂರಿಟಿ ತಡೆದಿದ್ದಾರೆ. ವಿವಿಯ ಒಳಗಡೆ ಬಿಡದಂತೆ ಕುಲಪತಿ ಮತ್ತು ಕುಲ ಸಚಿವರು ಹೇಳಿದ್ದಾರೆ ಎಂದ ಸೆಕ್ಯೂರಿಟಿ ತಿಳಿಸಿದ್ದಾರೆ. ಜೊತೆಗೆ ಕೀಳು ಜಾತಿಯವನು ಅಂತಾ ನನ್ನ ಒಳಗಡೆ ಬಿಟ್ಟಿಲ್ಲ ಅಂತಾ ಆರೋಪಿಸಿ ನಂದ ಕುಮಾರ್ ದೂರು ನೀಡಿದ್ದಾರೆ. ಕಳೆದ ವಾರವಷ್ಟೇ ಸಭೆಯಲ್ಲಿ RSS ಗೀತೆ ಮೊಳಗಿಸಲಾಗಿತ್ತು ಎಂದು ಈ ವಿವಿ ಸುದ್ದಿಯಾಗಿತ್ತು. ಇದೀಗ ಮತ್ತೊಂದು ವಿವಾದ ಮೈ ಮೇಲೆ ಏಳೆದುಕೊಂಡಿದೆ.
ಕುಲಸಚಿವರ ವಿರುದ್ಧ ಎಫ್ಐಆರ್!
ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿ ಬಳಿಯಿರುವ ಕೇಂದ್ರಿಯ ವಿಶ್ವವಿದ್ಯಾಲಯ ಕುಲಪತಿ ಮತ್ತು ಕುಲಸಚಿವರ ಮೇಲೆ ಎಫ್ಐಆರ್ ದಾಖಲಾಗಿದೆ. ಸಂಶೋಧನಾ ವಿದ್ಯಾರ್ಥಿ ನಂದಕುಮಾರ್ ಜಾತಿ ನಿಂದನೆ ಅಡಿಯಲ್ಲಿ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ನರೋಣಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ.
ಇನ್ನಷ್ಟು ಓದಿರಿ:
Tirupati Laddu: ದೇವಸ್ಥಾನದ ಪ್ರಸಾದಕ್ಕೀಗ 309 ವರ್ಷಗಳ ಸಂಭ್ರಮ!
MUDA Scam Updates: HDK ಒತ್ತಡಕ್ಕೆ ಮಣಿದ BJP ರಾಜ್ಯ ಪ್ರಧಾನ ಕಾರ್ಯದರ್ಶಿ?