spot_img
spot_img

YASHASVI JAISWAL : ಟೆಸ್ಟ್, ಟಿ20, ಐಪಿಎಲ್ನಲ್ಲಿ ‘ಯಶಸ್ವಿ’ ಪ್ರದರ್ಶನ!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Yashasvi Jaiswal:

ಟೆಸ್ಟ್​, ಟಿ20 ಮತ್ತು ಐಪಿಎಲ್​ನಲ್ಲಿ YASHASVI JAISWAL ಪ್ರದರ್ಶನ ನೀಡಿದ ಜೈಸ್ವಾಲ್​ ಇಂದಿನ ಏಕದಿನ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಔಟಾಗುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಉಭಯ ತಂಡಗಳ ಮಧ್ಯೆ ನಡೆಯುತ್ತಿರುವ ಮೊದಲ ಪಂದ್ಯಕ್ಕೆ ನಾಗ್ಪುರದ ವಿದರ್ಭ ಕ್ರಿಕೆಟ್​ ಅಸೋಸಿಯೇಷನ್​ ಮೈದಾನ ಆತಿಥ್ಯ ವಹಿಸಿಕೊಂಡಿದೆ.

YASHASVI JAISWAL ಈ ಪಂದ್ಯದಲ್ಲಿ ಟಾಸ್​ ಗೆದ್ದಿರುವ ಇಂಗ್ಲೆಂಡ್​ ಮೊದಲಿಗೆ ಬ್ಯಾಟಿಂಗ್​ ಆಯ್ದುಕೊಂಡಿದೆ. ಫೆಬ್ರವರಿ 19 ರಿಂದ ಆರಂಭವಾಗುವ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತ ಮತ್ತು ಇಂಗ್ಲೆಂಡ್ ನಡುವಿನ ಕೊನೆಯ ಏಕದಿನ ಸರಣಿ ಇದಾಗಿರುವುದು ಗಮನಾರ್ಹ.

YASHASVI JAISWAL ಆಸ್ಟ್ರೇಲಿಯಾದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಯಶಸ್ವಿ ಜೈಸ್ವಾಲ್ ಅವರು ಏಕದಿನ ಮಾದರಿಯಲ್ಲಿ ಇಂದು ಪಾದಾರ್ಪಣೆ ಮಾಡುವ ಅವಕಾಶ ಸಿಕ್ಕಿತು. ವಿರಾಟ್ ಕೊಹ್ಲಿ ಬದಲಿಗೆ ಯಶಸ್ವಿ ಜೈಸ್ವಾಲ್ ತಂಡಕ್ಕೆ ಸೇರ್ಪಡೆಗೊಂಡಿರುವುದು ಗೊತ್ತಿರುವ ಸಂಗತಿ. ಗಾಯದ ಕಾರಣದಿಂದಾಗಿ ಕಿಂಗ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ದೂರ ಉಳಿದಿದ್ದಾರೆ. ಆದ್ರೆ ಮೊದಲ ಪಂದ್ಯದಲ್ಲೇ ಜೈಸ್ವಾಲ್​ ಕ್ರಿಕೆಟ್​ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

ಸದ್ಯ ಬ್ಯಾಟಿಂಗ್​ ಮಾಡಿರುವ ಇಂಗ್ಲೆಂಡ್​ ತಂಡ ಭಾರತ ತಂಡಕ್ಕೆ 249 ರನ್​ಗಳ ಗುರಿ ನೀಡಿದೆ. ಇನ್ನು ಜೈಸ್ವಾಲ್​ ಟೆಸ್ಟ್​, ಟಿ20 ಮತ್ತು ಐಪಿಎಲ್​ ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಟೆಸ್ಟ್​ನಲ್ಲಿ 19 ಪಂದ್ಯಗಳನ್ನಾಡಿರುವ ಜೈಸ್ವಾಲ್​ 1798 ರನ್​ ಗಳಿಸಿದ್ದು, ಇದರಲ್ಲಿ ನಾಲ್ಕು ಶತಕಗಳು ಒಳಗೊಂಡಿವೆ.

ಇನ್ನು 23 ಅಂತರಾಷ್ಟ್ರೀಯ ಟಿ20 ಪಂದ್ಯಗಳಾಡಿರುವ ಜೈಸ್ವಾಲ್​ 723 ರನ್​ ಗಳಿಸಿದ್ದು,​ ಒಂದು ಶತಕ ಸಿಡಿಸಿದ್ದಾರೆ. ಇನ್ನು 52 ಐಪಿಎಲ್​ ಪಂದ್ಯಗಳಲ್ಲಿ 1607 ರನ್​ ಗಳಿಸಿರುವ ಜೈಸ್ವಾಲ್​ ಎರಡು ಶತಕವನ್ನು ಬಾರಿಸಿದ್ದಾರೆ. ಅಷ್ಟೇ ಅಲ್ಲ ಟೆಸ್ಟ್​, ಟಿ20 ಮತ್ತು ಐಪಿಎಲ್​ನಲ್ಲಿ ತಮ್ಮ ಬೌಲಿಂಗ್​ ಕೈಚಳವೂ ತೋರಿಸಿದ್ದು, ಆದ್ರೆ ಈ ಮೂರು ವೇದಿಕೆಯಲ್ಲಿ ವಿಕೆಟ್​ ಮಾತ್ರ ಪಡೆಯಲಿ ಸಾಧ್ಯವಾಗಿಲ್ಲ.

ಆಂಗ್ಲರು ನೀಡಿರುವ ಗುರಿಯನ್ನು ಬೆನ್ನತ್ತಿರುವ ಭಾರತಂಡ ಆರಂಭಿಕ ಆಘಾತ ಎದುರಿಸಿತು. ಕೇವಲ 15 ರನ್​ಗಳಿಸಿದ್ದ ಯಶಸ್ವಿ ಜೈಸ್ವಾಲ್​ ಅವರು ಜೋಫ್ರಾ ಆರ್ಚರ್ ಬೌಲಿಂಗ್​ನಲ್ಲಿ ಸಾಲ್ಟ್​ಗೆ ಕ್ಯಾಚ್​ ನೀಡಿ ಪೆವಿಲಿಯನ್​​ಗೆ ನಿರ್ಗಮಿಸಿದರು. ಅಲ್ಪ ಮೊತ್ತಕ್ಕೆ ಕುಸಿದಿದ್ದರಿಂದ ಜೈಸ್ವಾಲ್​ ತಮ್ಮ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಇದಾದ ಬಳಿಕ ನಾಯಕ ರೋಹಿತ್​ ಶರ್ಮಾ ಕೇವಲ 2 ರನ್​ ಗಳಿಸಿದ್ದಾಗ ಸಾಕಿಬ್ ಮಹಮೂದ್ ಬೌಲಿಂಗ್​ನಲ್ಲಿ ಲಿವಿಂಗ್‌ಸ್ಟೋನ್​ಗೆ ಕ್ಯಾಚ್​ ನೀಡಿ ನಿರ್ಗಮಿಸಿದರು.

What Rohit Sharma said about Virat:

ಮೊದಲ ಪಂದ್ಯದಿಂದ ವಿರಾಟ್​ ಕೊಹ್ಲಿ ಹೊರಗುಳಿದಿದ್ದಾರೆ. ಕಾರಣ ಅಭ್ಯಾಸದ ವೇಳೆ ಕೊಹ್ಲಿ ಬಲ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಚಾಂಪಿಯನ್ಸ್​ ಟ್ರೋಫಿ ಸಮೀಪಿಸುತ್ತಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಕೊಹ್ಲಿಗೆ ಮೊದಲ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ ಎಂದು ರೋಹಿತ್​ ಶರ್ಮಾ ತಿಳಿಸಿದ್ದಾರೆ.

ಇದನ್ನು ಓದಿರಿ : Congress Sets Sight On 2027 Kerala Assembly Polls With Priyanka Gandhi’s Wayanad Visit From February 8-10

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

TALKS WITH FARMERS:ಸೌಹಾರ್ದಯುತವಾಗಿ ಕೊನೆಗೊಂಡ ಕೇಂದ್ರ ಸರ್ಕಾರ, ರೈತ ಸಂಘಟನೆಗಳ ಮಾತುಕತೆ

Chandigarh News: ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಚೌಹಾಣ್, "ಮುಂದಿನ ಸಭೆ ಮಾರ್ಚ್ 19ರಂದು ನಡೆಯಲಿದೆ" ಎಂದು ಹೇಳಿದರು. ಚೌಹಾಣ್ ಸೇರಿದಂತೆ ಕೇಂದ್ರ ವಾಣಿಜ್ಯ ಮತ್ತು...

MANN KI BAAT:ಅಂದು ಮಹಿಳೆಯರೇ ನಿರ್ವಹಿಸಲಿದ್ದಾರೆ ಪ್ರಧಾನಿಯ ಸೋಶಿಯಲ್ ಮೀಡಿಯಾ

New Delhi News: "ಮಹಿಳೆಯರ ಅದಮ್ಯ ಮನೋಭಾವವನ್ನು ನಾವು ಸಂಭ್ರಮಿಸೋಣ ಮತ್ತು ಗೌರವಿಸೋಣ" ಎಂದ ಅವರು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಹೆಚ್ಚುತ್ತಿರುವ ಭಾಗವಹಿಸುವಿಕೆಯನ್ನು ಶ್ಲಾಘಿಸಿದರು.ಮಾರ್ಚ್ 8...

INDIAN NATIONAL ANTHEM IN PAKISTAN:ಭಾರತ ತಂಡ ದುಬೈನಲ್ಲಿದ್ದರೂ ಪಾಕ್ ಮೈದಾನದಲ್ಲಿ ಮೊಳಗಿದ ರಾಷ್ಟ್ರಗೀತೆ!

Indian National Anthem in Pakistan News : ಈ ಪಂದ್ಯದಲ್ಲಿ ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಆಗಿದ್ದು, PAKISTANದ ಗಡಾಫಿ ಮೈದಾನ ಆತಿಥ್ಯ...

MOHAMMED SHAMI DIET:90 ಕೆ.ಜಿ ಇದ್ರಂತೆ ಬೌಲರ್ ಮೊಹಮ್ಮದ್ ಶಮಿ, ತೂಕ ಇಳಿಸಿದ್ದು ಹೇಗೆ?

Dubai News: ತಾವು 34ರ ಪ್ರಾಯದಲ್ಲೂ ಫಿಟ್‌ ಆಗಿರುವುದು ಹೇಗೆ ಎಂಬುದನ್ನು ಅವರು ವಿವರಿಸಿದರು. ಮಾಜಿ ಕ್ರಿಕೆಟಿಗ ಮತ್ತು ಕಾಮೆಂಟೇಟರ್ ನವಜೋತ್ ಸಿಂಗ್ ಸಿಧು ಅವರೊಂದಿಗೆ...