ಮೈಸೂರು: ಯೋಗಪಟುಗಳು ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರ, ಸೂರ್ಯ ನಮಸ್ಕಾರ, ವಜ್ರಾಸನ, ಸ್ವಾನಾಸನ, ತ್ರಿಕೋನಾಸನ, ಶವಾಸನ, ಸಿದ್ಧಾಸನ, ಅರ್ಧಚಕ್ರಾಸನ ಸೇರಿದಂತೆ ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು. ಮತ್ತು ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮವು ಯೋಗ ದಸರಾಗೆ ಮತ್ತಷ್ಟು ಮೆರುಗು ತಂದಿತು. ವಿಶ್ವವಿಖ್ಯಾತ ಮೈಸೂರು ದಸರಾದ 7ನೇ ದಿನವಾದ ಇಂದು ಯೋಗ ದಸರಾ ಉಪ ಸಮಿತಿ ವತಿಯಿಂದ ಚಾಮುಂಡಿ ಬೆಟ್ಟದ ತಪ್ಪಲು ಮತ್ತು ದೇವಸ್ಥಾನದ ಆವರಣದಲ್ಲಿ ‘ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರ ‘ ಕಾರ್ಯಕ್ರಮವನ್ನು ನಡೆಸಲಾಯಿತು.
ಯೋಗ ಅಧಿಕಾರೇತರ ಉಪಸಮಿತಿಯ ಅಧ್ಯಕ್ಷರಾದ ಎಂ.ಮಹೇಶ್ ಅವರು ಸಮಾರಂಭವನ್ನು ಉದ್ಘಾಟನೆ ಮಾಡಿದರು. ಯೋಗ ಸರಪಳಿಯಲ್ಲಿ ಯೋಗಪಟುಗಳು, ವಿದ್ಯಾರ್ಥಿಗಳು ಹಾಗೂ ಯುವಕರು, ಹಿರಿಯ, ಸಾರ್ವಜನಿಕರು ಸೇರಿದಂತೆ ಮೈಸೂರಿನ ವಿವಿಧೆಡೆಯಿಂದ ಆಗಮಿಸಿದ್ದ ಸುಮಾರು 250ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಬೆಳಗ್ಗೆ 7 ಗಂಟೆಗೆ ಚಾಮುಂಡಿ ಬೆಟ್ಟದ ಆವರಣದಲ್ಲಿ ನೆರೆದಿದ್ದ ಜನರ ದೃಶ್ಯವು ಮೈಸೂರಿನ ಸೊಬಗನ್ನು ಹೆಚ್ಚಿಸಿತು.
ಕೇಂದ್ರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ರಂಗನತಿಟ್ಟು ಪಕ್ಷಿಧಾಮವನ್ನು 2022ರಲ್ಲಿರಾರಯಮ್‌ಸರ್ ವೆಟ್‌ಲ್ಯಾಂಡ್ ಸೈಟ್ (ಜೌಗು ಪ್ರದೇಶ) ಪಟ್ಟಿಗೆ ಸೇರಿಸುವ ಮೂಲಕ ಅಂತಾರಾಷ್ಟ್ರೀಯ ಮಾನ್ಯತೆ ದೊರೆತಿದೆ. ಇದರಿಂದ ಪಕ್ಷಿಧಾಮದ ಸಮಗ್ರ ಅಭಿವೃದ್ಧಿ, ವೈಜ್ಞಾನಿಕ ನಿರ್ವಹಣೆಗೆ ಮಾಸ್ಟರ್ ಪ್ಲ್ಯಾನ್ ರೂಪಿತವಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಪ್ರಾಣಿ-ಪಕ್ಷಿ ತಜ್ಞರ ತಂಡ ಇಲ್ಲಿಗೆ ಬಂದು ಅಧ್ಯಯನ ನಡೆಸಲಿದೆ.
20ಕ್ಕೂ ಹೆಚ್ಚು ಚಿಕ್ಕ ಐಲ್ಯಾಂಡ್‌ಗಳನ್ನು ಒಳಗೊಂಡ 67 ಹೆಕ್ಟೇರ್ ವಿಸ್ತೀರ್ಣದ ರಂಗನತಿಟ್ಟು ಪಕ್ಷಿಧಾಮ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿಗುರುತಿಸಲ್ಪಟ್ಟಿದೆ. ಕರ್ನಾಟಕದ ಪಕ್ಷಿಕಾಶಿ ಎಂದೇ ಇದು ಹೆಸರಾಗಿದೆ. ದೇಶ-ವಿದೇಶಗಳಿಂದ ನಾನಾ ಜಾತಿಯ ಬಾನಾಡಿಗಳು ರಂಗನತಿಟ್ಟು ಪಕ್ಷಿಧಾಮಕ್ಕೆ ಆಗಮಿಸಿ, ಇಲ್ಲಿಸಂತಾನೋತ್ಪತ್ತಿ ನಡೆಸಿ ಪುನಃ ತಮ್ಮ ತವರಿಗೆ ಹಿಂದಿರುಗುತ್ತಿವೆ. ಈ ಪ್ರಕ್ರಿಯೆ ಪ್ರತಿ ವರ್ಷ ನಡೆಯುತ್ತದೆ.
ಇದರಿಂದಾಗಿ ವಿದೇಶಿ ಪ್ರವಾಸಿಗಳು ಸಹ ರಂಗನತಿಟ್ಟು ಪಕ್ಷಿಧಾಮಕ್ಕೆ ಆಗಮಿಸಿ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುವ ಜತೆಗೆ ಬಾನಾಡಿಗಳನ್ನು ನೋಡಿ ಸಂಭ್ರಮಿಸುತ್ತಾರೆ. ಪ್ರತಿ ವರ್ಷ ರಂಗನತಿಟ್ಟು ಪಕ್ಷಿಧಾಮಕ್ಕೆ ವಿದೇಶಿಯರು ಸೇರಿದಂತೆ 3.5 ಲಕ್ಷದಿಂದ 4 ಲಕ್ಷ ಪ್ರವಾಸಿಗರು ಬರುತ್ತಾರೆ. ವಾರ್ಷಿಕ ಮೂರ್ನಾಲ್ಕು ಕೋಟಿ ರೂ. ಆದಾಯ ಬರುತ್ತಿದೆ. ಹೀಗಾಗಿ ಈ ಪಕ್ಷಿಧಾಮವನ್ನು ಜನರಿಗೆ ಇನ್ನಷ್ಟು ಪರಿಚಯಿಸುವುದು ಇದರ ಉದ್ದೇಶವಾಗಿದೆ.
ಕೆಆರ್‌ಎಸ್ ಕೊಡಗಿನಲ್ಲಿ ಹುಟ್ಟಿ ಹರಿಯುವ ಕಾವೇರಿ ನದಿಗೆ ಅಡ್ಡಲಾಗಿ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ನಲ್ಲಿ ಅಣೆಕಟ್ಟೆ 1911ರಲ್ಲಿ ನಿರ್ಮಾಣಗೊಂಡಿದೆ. ಜಲಾಶಯ ನಿರ್ಮಾಣ ಕಾಮಗಾರಿಗೆ ಆರ್ಥಿಕ ಸಮಸ್ಯೆಯಾದಾಗ ಆಗಿನ ಮೈಸೂರು ಮಹಾರಾಜ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಅರಮನೆ ಆಭರಣಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ ಜಲಾಶಯ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿದ್ದಾರೆ.
ಸುರ್ಕಿ ಗಾರೆಯಿಂದ ನಿರ್ಮಾಣಗೊಂಡಿರುವ ಅಣೆಕಟ್ಟೆಯಿಂದ ಗುರುತ್ವಾಕರ್ಷಣೆಯಿಂದ ನೀರು ಹರಿಯುತ್ತಿದೆ. ಕಾವೇರಿ ನದಿಯ ಉಪ ನದಿಗಳಾದ ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿಗಳ ಸಂಗಮ ಸ್ಥಳದಿಂದ ಕೆಳ ಭಾಗದಲ್ಲಿರುವ ಅಣೆಕಟ್ಟೆ ಬಳಿ ನಿರ್ಮಿಸಿರುವ ಬೃಂದಾವನ ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದೆ.
ವಿವಿಧ ಭಂಗಿಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್.ಸಮೂಹದ ಮುಖ್ಯಸ್ಥರಾದ ಶ್ರೀಹರಿ, ಯೋಗ ದಸರಾ ಉಪಸಮಿತಿಯ ವಿಶೇಷಾಧಿಕಾರಿಗಳಾದ ಕೆ.ರಮ್ಯ, ಕಾರ್ಯಾಧ್ಯಕ್ಷರಾದ ಅನಂತರಾಜು, ಕಾರ್ಯದರ್ಶಿ ಪುಷ್ಪ , ಚಾಮುಂಡಿ ಬೆಟ್ಟದ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಾಗಮ್ಮ ಮತ್ತು ಉಪಾಧ್ಯಕ್ಷರಾದ ರವಿಕುಮಾರ್ ವೈ ಎಸ್.ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.