spot_img
spot_img

ಲವ್ ದೋಖಾ ಆಗಿದ್ದಕ್ಕೆ ಯುವತಿ ಆತ್ಮಹತ್ಯೆಗೆ ಶರಣು..! ಮಾಜಿ ಕಾರ್ಪೊರೇಟರ್ ಮಗ ಮಾಡಿದ್ದೆನು?

spot_img
spot_img

Share post:

ಬೆಂಗಳೂರಿನ ಮಾಜಿ ಕಾರ್ಪೊರೇಟರ್ ಮಗ ಮದುವೆಯಾವುದಾಗಿ ನಂಬಿಸಿ ಯುವತಿಗೆ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಮಾಜಿ ಕಾರ್ಪೊರೇಟರ್‌ ಮಗನನ್ನು ಪ್ರೀತಿಸುತ್ತಿದ್ದ ಯುವತಿ ಸಾವಿಗೆ ಶರಣಾಗಿದ್ದಾಳೆ. ಮಗಳ ದುರಂತಕ್ಕೆ ನಿರಾಶೆಯಾಗಿರುವ ಯುವತಿ ತಾಯಿ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ.

ಸಾವಿಗೆ ಶರಣಾಗಿರೋ ಯುವತಿ ಹೆಸರು ವಾಸುಕಿ. ವಾಸುಕಿ ತಾಯಿ RT ನಗರ ಮಾಜಿ ಕಾರ್ಪೊರೇಟರ್ ಗೋವಿಂದರಾಜು ಮಗ ಶ್ರವಣ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮಾಗಡಿ ರೋಡ್‌ ಪೊಲೀಸ್‌ ಠಾಣೆಯಲ್ಲಿ FIR ಕೂಡ ದಾಖಲಿಸಿದ್ದಾರೆ. ಆದರೆ ಪೊಲೀಸರು ಮಗಳ ಸಾವಿಗೆ ಕಾರಣರಾದ ಆರೋಪಿಯನ್ನ ಬಂಧಿಸಿಲ್ಲ ಅಂತ ಕಣ್ಣೀರು ಹಾಕುತ್ತಿದ್ದಾರೆ.

ಏನಿದು ಲವ್ ದೋಖಾ?
25 ವರ್ಷದ ಯುವತಿ ವಾಸುಕಿ ಜೊತೆ ಶ್ರವಣ್ 6 ವರ್ಷಗಳಿಂದ ಲವ್ ಮಾಡುತ್ತಿದ್ದರಂತೆ. ಕೊನೆಗೆ ಮದುವೆಯಾಗೋದಾಗಿ ನಂಬಿಸಿ ಮೋಸ ಮಾಡಿದ್ದಾರೆಂದು  ಆರೋಪಿಸಲಾಗಿದೆ. ಶ್ರವಣ್‌ ಮದುವೆಯಾಗದೇ ಸತಾಯಿಸುತ್ತಿದ್ದಕ್ಕೆ ನೊಂದು ವಾಸುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಶ್ರವಣ್ ವರ್ತನೆಯಿಂದ ನೊಂದಿದ್ದ ವಾಸುಕಿ ಬೇರೆ ಯುವಕನ ಜೊತೆಯಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ನಿಶ್ಚಿತಾರ್ಥವೂ ಆಗಿತ್ತು, ಆದ್ರೆ, ಶ್ರವಣ್ ಬಂದು ಬೆದರಿಕೆ ಹಾಕಿದ್ದನಂತೆ. ಹೇಗೆ ಮದುವೆ ಆಗ್ತೀಯೋ ನೋಡೋಣ ಅಂತ ಧಮ್ಕಿಸಿದ್ದರು ಎಂದು ಆರೋಪಿಸಲಾಗಿದೆ.

ಯುವತಿ ಸಾವಿಗೆ ಕಾರಣವೇನು?
ಕಳೆದ ಆಗಸ್ಟ್‌ 22ರ ಸಾಯಂಕಾಲ 7.45ಕ್ಕೆ ವಾಸುಕಿ ಅವರು ಸಾವಿಗೆ ಶರಣಾಗಿದ್ದಾರೆ. ಈ ಘಟನೆಯ ಬಳಿಕ ಆಕೆಯ ಫೋನ್ ಅ​ನ್ನ ಚೆಕ್​ ಮಾಡಲಾಗಿದೆ. ಆಗ ಆರೋಪಿ ಶ್ರವಣ್​​, ಅಶ್ಲೀಲ ವಿಡಿಯೋ ಕಳುಹಿಸುತ್ತಿದ್ದ ಸತ್ಯ ಗೊತ್ತಾಗಿದೆ. ಇದರಿಂದಲೇ ಮಗಳು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಾಗಡಿ ರೋಡ್‌ ಪೊಲೀಸ್ ಠಾಣೆಯಲ್ಲಿ ಎಫ್ಐಆರ್‌ (FIR) ಕೂಡ ದಾಖಲಿಸಿದ್ದಾರೆ.

ಆರೋಪಿಯ ತಂದೆ ಪ್ರಭಾವಿ ಆಗಿರುವುದರಿಂದ ಪೊಲೀಸರು ನೋಟಿಸ್​ ನೀಡಿ ತನಿಖೆಗೂ ಕರೆದಿಲ್ಲ. ತನಿಖೆಯೂ ಮಾಡ್ತಿಲ್ಲ ಎಂದು ವಾಸುಕಿ ಕುಟುಂಬಸ್ಥರು ಆರೋಪಿಸಿದ್ದಾರೆ. ಇದ್ದ ಒಬ್ಬಳೇ ಒಬ್ಬ ಮಗಳನ್ನ ಕಳೆದುಕೊಂಡು ತಾಯಿ ವೆಂಕಟಲಕ್ಷ್ಮಿ ಕಣ್ಣೀರು ಹಾಕುತ್ತಿದ್ದಾರೆ. ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಬೇಡಿಕೊಳ್ಳುತ್ತಿದ್ದಾರೆ.

spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...