ದಾವಣಗೆರೆ: ಸಂಸಾರದಲ್ಲಿ ವೈರಾಗ್ಯದಿಂದ ಮದುವೆಯಾಗಬೇಕಾದ ವಯಸ್ಸಿನಲ್ಲಿ ಜೈನ ಸಮುದಾಯದ ಇಬ್ಬರು ಯುವತಿಯರು ಸನ್ಯಾಸ ಸ್ವೀಕರಿಸಿದರು.
ದಾವಣಗೆರೆಯಲ್ಲಿ 26 ವರ್ಷದ ಇಬ್ಬರು ಜೈನ್ ಯುವತಿಯರು ಸನ್ಯಾಸತ್ವ ಸ್ವೀಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಈ ವಯಸ್ಸಿಗೇ ಇವರು ಲೌಕಿಕ ಜೀವನ ತೊರೆದು ಅಲೌಕಿಕ ಜೀವನದ ಕಡೆಗೆ ಮನಸ್ಸು ಮಾಡಿರುತ್ತಾರೆ ಈ ಸುದ್ದಿಇದೀಗ ವೈರಲ್ ಆಗಿದೆ.
ಒಬ್ಬರು ದಾವಣಗೆರೆ ಯುವತಿ ಮಾನಸಿ ಕುಮಾರಿ. ಇವರು ಮನಶ್ಶಾಸ್ತ್ರದಲ್ಲಿ ಎಂಎ ಮಾಡಿದ್ದಾರೆ.
ಇನ್ನೊಬ್ಬರು ಗೋಕಾಕದ ಮುಮುಕ್ಷ ಭಕ್ತಿ ಕುಮಾರಿ. ಇವರು ಬಿಎ ಎಲ್ಎಲ್ಬಿ ಮಾಡಿದ್ದಾರೆ. ಇಬ್ಬರೂ ಸುಶಿಕ್ಷಿತರು ಆಗಿದ್ದರಿಂದ ಸ್ವೀಕಾರ ಮಾಡಿದ್ದಾರೆ.
ಸನ್ಯಾಸತ್ವ ಸ್ವೀಕರಿಸಲು ಮುಂದಾದ ಯುವತಿಯರಿಗೆ ದಾವಣಗೆರೆಯಲ್ಲಿ ನಿನ್ನೆ ಗೌರವ ಸಲ್ಲಿಕೆ, ಅದ್ಧೂರಿ ಮೆರವಣಿಗೆ ನಡೆಸಲಾಯಿತು.
ಮುಂದಿನ ತಿಂಗಳು 17ರಂದು ಜಾರ್ಖಂಡ್ನ ರುಜುಬಾಲಿಕ ಎಂಬಲ್ಲಿ ಸನ್ಯಾಸತ್ವ ಸ್ವೀಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದರು.
ಇಬ್ಬರ ಕುಟುಂಬಸ್ಥರೂ ಔತಣಕೂಟ ಏರ್ಪಡಿಸಿದ್ದರು.
ದಾವಣಗೆರೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದ್ದು, ಸನ್ಯಾಸತ್ವ ಸ್ವೀಕಾರದ ಸಿದ್ಧತೆಯಲ್ಲಿರುವ ಯುವತಿಯರು ಸಂಭ್ರಮದಿಂದ ಇದರಲ್ಲಿ ಭಾಗವಹಿಸಿದರು.