spot_img
spot_img

Z MORH TUNNEL INAUGURATION : ನಾಳೆ ಝಡ್-ಮೋರ್ಹ್ ಸುರಂಗ ಮಾರ್ಗ ಉದ್ಘಾಟನೆ

spot_img
spot_img

Share post:

Jammu and Srinagar News:

ಇಲ್ಲಿನ ಗಂಡೇರ್ಬಾಲ್ ಜಿಲ್ಲೆಯಲ್ಲಿ ನಿರ್ಮಿಸಲಾದ Z MORH TUNNEL INAUGURATION ಜನವರಿ 13ರಂದು(ನಾಳೆ) ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಇದಕ್ಕಾಗಿ ಕಾಶ್ಮೀರಕ್ಕೆ ಭೇಟಿ ನೀಡಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ. ಒಮರ್ ಅಬ್ದುಲ್ಲಾ ಅವರ ಎಕ್ಸ್​ ಪೋಸ್ಟ್‌ಗಳಿಗೆ ಶನಿವಾರ ಪ್ರತಿಕ್ರಿಯಿಸಿರುವ ಮೋದಿ, Z MORH TUNNEL INAUGURATIONಯಿಂದಾಗುವ ಪ್ರಯೋಜನಗಳಿಗೆ ಸಂತಸ ವ್ಯಕ್ತಪಡಿಸಿ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಹಂಚಿಕೊಂಡ ಫೋಟೋಗಳು ಮತ್ತು ವಿಡಿಯೋಗಳು ಬಹಳ ಇಷ್ಟವಾಯಿತು ಎಂದು ತಿಳಿಸಿದ್ದಾರೆ.

“ಸುರಂಗ ಮಾರ್ಗದ ಉದ್ಘಾಟನೆಗಾಗಿ ಜಮ್ಮು ಕಾಶ್ಮೀರದ ಸೋನ್​ಮಾರ್ಗ್​ಗೆ ಭೇಟಿ ನೀಡಲು ಕಾತುರದಿಂದ ಕಾಯುತ್ತಿದ್ದೇನೆ. ಪ್ರವಾಸೋದ್ಯಮ ಮತ್ತು ಸ್ಥಳೀಯ ಆರ್ಥಿಕತೆಗಾಗುವ ಪ್ರಯೋಜನಗಳನ್ನು ನೀವು ಸರಿಯಾಗಿಯೇ ತೋರಿಸಿದ್ದೀರಿ. ಅಲ್ಲದೇ ವೈಮಾನಿಕ ಚಿತ್ರಗಳು ಮತ್ತು ವಿಡಿಯೋಗಳು ಇಷ್ಟವಾದವು” ಎಂದು ಪ್ರಧಾನಿ ಎಕ್ಸ್​ ಪೋಸ್ಟ್​ನಲ್ಲಿ ಪ್ರತಿಕ್ರಿಯಿಸಿದ್ದಾರೆ.ಇದಕ್ಕೂ ಮುನ್ನ ಶನಿವಾರ ಬೆಳಗ್ಗೆ ಅಬ್ದುಲ್ಲಾ ಸುರಂಗ ಮಾರ್ಗ ಉದ್ಘಾಟನೆಯ ಸಿದ್ಧತೆಗಳನ್ನು ಪರಿಶೀಲಿಸಲು ಸೋನ್​ಮಾರ್ಗ್​​ಗೆ ಭೇಟಿ ನೀಡಿದ್ದರು.

“ಸೋಮವಾರ ಪ್ರಧಾನಿ ಮೋದಿ ಉದ್ಘಾಟನೆಗೆ ಆಗಮಿಸುತ್ತಿದ್ದು, ಸಿದ್ಧತೆಗಳನ್ನು ಪರಿಶೀಲಿಸಲು ಇಂದು ಸೋನ್​ಮಾರ್ಗ್​ಗೆ ಭೇಟಿ ನೀಡಿದ್ದೇನೆ. Z MORH TUNNEL INAUGURATIONಯಿಂದ ವರ್ಷಪೂರ್ತಿ ಸೋನ್​ಮಾರ್ಗ್​ ಪ್ರವಾಸೋದ್ಯಮಕ್ಕೆ ಮುಕ್ತವಾಗಲಿದೆ. ಸೋನ್​ಮಾರ್ಗ್​ ಈಗ ಸ್ಕೀ ರೆಸಾರ್ಟ್​ ಆಗಿ ಅಭಿವೃದ್ಧಿ ಹೊಂದಲಿದೆ. ಸ್ಥಳೀಯರು ಚಳಿಗಾಲದಲ್ಲಿ ಇಲ್ಲಿಂದ ತೆರಳಬೇಕಾಗಿಲ್ಲ, ಹಾಗೂ ಶ್ರೀನಗರದಿಂದ ಕಾರ್ಗಿಲ್​/ಲೇಹ್​ಗೆ ಪ್ರಯಾಣದ ಸಮಯವೂ ಕಡಿಮೆಯಾಗುತ್ತದೆ” ಎಂದು ಅಬ್ದುಲ್ಲಾ ತಮ್ಮ ಬರೆದುಕೊಂಡಿದ್ದಾರೆ.

ನಂತರ ವಿಮಾನದಿಂದ ತೆಗೆದ ಫೋಟೋಗಳೂ ಸೇರಿದಂತೆ ಯೋಜನಾ ಸ್ಥಳದ ಹಲವು ಫೋಟೋಗಳು ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದರು.

Tight security in Kashmir:

“ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಹೆಚ್ಚುವರಿ ಚೆಕ್​ಪೋಸ್ಟ್‌ಗಳನ್ನು ಸ್ಥಾಪಿಸಿವೆ. ವಿಶೇಷವಾಗಿ ಮಧ್ಯ ಕಾಶ್ಮೀರದಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ. ಕಣಿವೆಯ ನಿರ್ಣಾಯಕ ಭಾಗಗಳಲ್ಲಿ ಎಸ್‌ಪಿಜಿಯನ್ನು ನಿಯೋಜಿಸಲಾಗಿದೆ. ಈ ಪ್ರದೇಶದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಅರೆಸೈನಿಕ ಪಡೆಗಳು ಮತ್ತು ಸೇನೆ ಜಂಟಿ ತಂಡಗಳ ಮೂಲಕ ಭದ್ರತಾ ವ್ಯವಸ್ಥೆಗಳನ್ನು ತೀವ್ರಗೊಳಿಸಲಾಗಿದೆ.

ಈ ಕ್ರಮಗಳು ಜನವರಿ 13ರವರೆಗೆ ಜಾರಿಯಲ್ಲಿರುತ್ತವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಧಾನಿ ಮೋದಿ ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕಣಿವೆಯಾದ್ಯಂತ ಭದ್ರತೆ ಹೆಚ್ಚಿಸಲಾಗಿದೆ. ಝಡ್​-ಮೋರ್ಹ್​​ ಮತ್ತು ಇತರ ವಿಭಾಗಗಳಲ್ಲಿ ವಿಶೇಷ ರಕ್ಷಣಾ ಗುಂಪನ್ನು (ಎಸ್​ಪಿಜಿ) ನಿಯೋಜಿಸಲಾಗಿದೆ.

What is Z-More Subway?:

ಈ ಸುರಂಗ ಮಾರ್ಗ ನಿರ್ಮಾಣ, ತೀವ್ರ ಹಿಮಪಾತದಿಂದಾಗಿ ಚಳಿಗಾಲದಲ್ಲಿ ಸಾಮಾನ್ಯವಾಗಿ ಹೋಗಲಾಗದ ಪ್ರದೇಶವಾದ ಸೋನ್​ಮಾರ್ಗ್​ಗೆ ಎಲ್ಲಾ ರೀತಿಯ ಹವಾಮಾನವಿದ್ದಾಗಲೂ ಭೇಟಿ ನೀಡಲು ಅನುವು ಮಾಡಿಕೊಡುತ್ತದೆ.  ಝಡ್​-ಮೊರ್ಹ್ ಸುಮಾರು 6.4 ಕಿ.ಮೀ ಉದ್ದ ಸುರಂಗ ಮಾರ್ಗ. ಜನಪ್ರಿಯ ಪ್ರವಾಸಿ ತಾಣ ಸೋನ್​ಮಾರ್ಗವನ್ನು ಮಧ್ಯ ಕಾಶ್ಮೀರದ ಗಂಡರ್ಬಲ್​ ಜಿಲ್ಲೆಯ ಕಂಗನ್​ ಪಟ್ಟಣದ ಜೊತೆಗೆ ಸಂಪರ್ಕಿಸುತ್ತದೆ.

ಝಡ್​ ಆಕಾರದ ರಸ್ತೆ ಭಾಗದಲ್ಲಿ ಇದನ್ನು ನಿರ್ಮಿಸಿರುವ ಕಾರಣ ಇದಕ್ಕೆ ಝಡ್​ ಹೆಸರು ನೀಡಲಾಗಿದೆ. ಝಡ್​-ಮೊರ್ಹ್​ ಸುರಂಗ್​ ಮಾರ್ಗ ನಿರ್ಮಾಣ ಯೋಜನೆಯನ್ನು ಆರಂಭದಲ್ಲಿ 2012ರಲ್ಲಿ ಬಾರ್ಡರ್​ ರೋಡ್ಸ್​ ಆರ್ಗನೈಸೇಶನ್​ ಪಡೆದುಕೊಂಡಿತ್ತು. ನಂತರ ಅದನ್ನು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್​ಗೆ ಹಸ್ತಾಂತರಿಸಲಾಯಿತು.

ಮರು ಟೆಂಡರ್​ ಪ್ರಕ್ರಿಯೆಯ ನಂತರ APCO ಇನ್ಫ್ರಾಟೆಕ್‌ಗೆ ನಿರ್ಮಾಣ ಒಪ್ಪಂದವನ್ನು ನೀಡಲಾಯಿತು. ವಿಶೇಷ ಉದ್ದೇಶದ ವಾಹನವಾದ APCO-ಶ್ರೀ ಅಮರನಾಥಜಿ ಸುರಂಗ ಖಾಸಗಿ ಲಿಮಿಟೆಡ್ ಮೂಲಕ ಯೋಜನೆಯನ್ನು ನಿರ್ವಹಿಸಿದೆ. 8,500 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ಈ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲಾಗಿದೆ. ಈ ಸುರಂಗಮಾರ್ಗದಿಂದಾಗಿ ಲಡಾಖ್​ ಹಾಗೂ ಕಾಶ್ಮೀರವನ್ನು ಸಂಪರ್ಕಿಸುವ ಶ್ರೀನಗರ- ಲೇಹ್​ ಮಾರ್ಗದ ಒಂದು ಭಾಗವಾದ ಸೋನ್​ಮಾರ್ಗ್​ಗೆ ವರ್ಷಪೂರ್ತಿ ಭೇಟಿ ನೀಡಲು ಸಾಧ್ಯವಾಗುತ್ತದೆ.

ಮಾತ್ರವಲ್ಲದೆ ಸೇನಾ ಚಟುವಟಿಕೆಗಳಿಗೆ ಹಾಗೂ ಪ್ರವಾಸೋದ್ಯಮ ಉತ್ತೇಜನಕ್ಕೂ ಸಹಕಾರಿಯಾಗಿದೆ. ಇದು ಲಡಾಖ್‌ನಲ್ಲಿರುವ ಭಾರತೀಯ ಮಿಲಿಟರಿ ಸಿಬ್ಬಂದಿಗೆ, ವಿಶೇಷವಾಗಿ ಚೀನಾ-ಭಾರತ ವಾಸ್ತವಿಕ ನಿಯಂತ್ರಣ ರೇಖೆ (LAC) ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK)ಗಡಿಗೆ ಹತ್ತಿರವಿರುವ ಪ್ರದೇಶಗಳಿಗೆ ಪ್ರವೇಶವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ.

ಯೋಜನೆ ಪ್ರಾರಂಭಗೊಂಡ 12 ವರ್ಷಗಳ ನಂತರ Z MORH TUNNEL INAUGURATIONವನ್ನು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಕೇಂದ್ರ ಮೇಲ್ಮೈ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಆರಂಭದ ಯೋಜನೆಯಂತೆ 2023ರ ಆಗಸ್ಟ್​ ಓಳಗೆ ಸುರಂಗಮಾರ್ಗ ಪೂರ್ಣಗೊಳ್ಳಬೇಕಿತ್ತು. ಆದರೆ ಯೋಜನೆ ವಿಳಂಬದಿಂದಾಗಿ ಉದ್ಘಾಟನೆಯನ್ನು ಮುಂದೂಡಲಕಾಯಿತು. 2024ರಲ್ಲಿ ಫೆಬ್ರವರಿಯಲ್ಲಿ ಸಾಫ್ಟ್​ ಲಾಂಚ್​ ಆದರೂ ಜಮ್ಮು ಹಾಗೂ ಕಾಶ್ಮೀರ ವಿಧಾನಸಭಾ ಚುನಾವಣೆಯಿಂದಾಗಿ ಅಧಿಕೃತ ಉದ್ಘಾಟನೆ ವಳಂಬವಾಯಿತು.

Significance of Z-Morh Tunnel Project :

ಸುಮಾರು 2,680 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಝಡ್-ಮೋರ್ಹ್ ಸುರಂಗಮಾರ್ಗ ದ್ವಿ-ಪಥದ ರಸ್ತೆಯನ್ನು ಒಳಗೊಂಡಿದೆ. ಈ ಪ್ರದೇಶದ ಕಠಿಣ ಹವಾಮಾನ ಪರಿಸ್ಥಿತಿಗಳನ್ನು ತಡೆದುಕೊಳ್ಳಲು ವಿನ್ಯಾಸಗೊಳಿಸಲಾದ ಎಸ್ಕೇಪ್ ಸುರಂಗ, ವಾತಾಯನ ವ್ಯವಸ್ಥೆಗಳು ಮತ್ತು ಕಲ್ವರ್ಟ್‌ಗಳಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ.

ಇದನ್ನು ಓದಿರಿ : SANGOLLI RAYANNA UTSAV : ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಅದ್ಧೂರಿ ಚಾಲನೆ

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...