spot_img
spot_img

Tihar jail: ತಿಹಾರ್ ಜೈಲಿನಲ್ಲಿ 125 ಕೈದಿಗಳಿಗೆ HIV ಪಾಸಿಟಿವ್; ಬೆಚ್ಚಿ ಬೀಳಿಸೋ ವರದಿ ಬಹಿರಂಗ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ನವದೆಹಲಿ: ತಿಹಾರ್ ಜೈಲ್​ನಿಂದ ಬೆಚ್ಚಿ ಬೀಳಿಸುವಂತ ಮಾಹಿತಿಯೊಂದು ಹೊರ ಬಂದಿದೆ. ಜೈಲಿನಲ್ಲಿ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ 125 ಜನ ಕೈದಿಗಳು ಹೆಚ್​ಐವಿ ಎಂಬ ಜೀವ ಕಂಟಕ ರೋಗಕ್ಕೆ ತುತ್ತಾಗಿದ್ದಾರೆ ಎಂದು ಹೇಳಲಾಗುತ್ತಿದೆ. ತಿಹಾರ್ ಜೈಲಿನಲ್ಲಿ ಹೆಚ್​​ಐವಿ ಪಾಸಿಟಿವ್ ಕೇಸ್​ಗಳು ಹೊಸದೇನಲ್ಲ. ಅಲ್ಲಿರುವ 200 ಕೈದಿಗಳಲ್ಲಿ ಲೈಂಗಿಕತೆಗೆ ಸಂಬಂಧಿತ ರೋಗಗಳು ಇರೋದು ಗೊತ್ತಾಗಿದೆ. ಇತ್ತೀಚೆಗಷ್ಟೇ ಒಟ್ಟು 14 ಸಾವಿರ ಕೈದಿಗಳಲ್ಲಿ 10, 500 ಕೈದಿಗಳ ಮೆಡಿಕಲ್ ಸ್ಕ್ರೀನಿಂಗ್ ಮಾಡಲಾಗಿತ್ತು. ಈ ವೇಳೆ ಇಂತಹದೊಂದು ಆತಂಕಕಾರಿ ವಿಷಯ ಹೊರಗೆ ಬಂದಿದೆ.

ತಿಹಾರ್ ಜೈಲಿನಲ್ಲಿ ಆಗಾಗ ಕೈದಿಗಳಿಗೆ ಮೆಡಿಕಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಅದರಲ್ಲೂ ತಿಹಾರ್​ ಜೈಲಿಗೆ ನೂತನ ಡಿಜಿಯಾಗಿ ಸತೀಶ್ ಗೋಲಾಚ್​ ಅವರು ಅಧಿಕಾರವಹಿಸಿಕೊಂಡ ಬಳಿಕ ಇದೇ ಮೇ ಹಾಗೂ ಜೂನ್​ನಲ್ಲಿ 10, 500 ಜನ ಕೈದಿಗಳಿಗೆ ಮೆಡಿಕಲ್ ಸ್ಕ್ರೀನಿಂಗ್ ಮಾಡಿಸಲಾಗಿತ್ತು. ಇದರಲ್ಲಿ ಹೆಚ್​ಐವಿ ಪರೀಕ್ಷೆಯೂ ಕೂಡ ಇತ್ತು. ಮೆಡಿಕಲ್ ಸ್ಕ್ರೀನಿಂಗ್ ಬಳಿಕ ಒಟ್ಟು 125 ಕೈದಿಗಳಲ್ಲಿ ಹೆಚ್​ಐವಿ ಪಾಸಿಟಿವ್ ಇರೋದು ಕಂಡು ಬಂದಿವೆ.

ಆತಂಕಪಡುವ ವಿಷಯವಲ್ಲ ಎಂದ ಜೈಲು ಸಿಬ್ಬಂದಿ
ಜೈಲು ಸಿಬ್ಬಂದಿ ಹೇಳುವ ಪ್ರಕಾರ ಇದರಲ್ಲಿ ಅಚ್ಚರಿಗೊಳ್ಳುವ ವಿಷಯವೇನೂ ಇಲ್ಲ. ಕೈದಿಗಳು ಇಲ್ಲಿಗೆ ಬಂದ ಮೇಲೆ ಹೆಚ್​ಐವಿ ಪಾಸಿಟಿವ್ ಕಂಡು ಬಂದಿಲ್ಲ. ಹಲವು ಸಮಯಗಳಲ್ಲಿ ಹೊರಗಿನ ಜಿಲ್ಲೆಗಳಿಂದ ಇಲ್ಲಿಗೆ ಕೈದಿಗಳನ್ನು ಶಿಫ್ಟ್​ ಮಾಡಲಾಗುತ್ತದೆ. ಹಾಗೆ ಬಂದ ಕೈದಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆ ವೇಳೆಯೂ ಕೂಡ ಇವರಲ್ಲಿ ಹೆಚ್​ಐವಿ ಪಾಸಿಟಿವ್ ಕಂಡು ಬಂದಿತ್ತು. ಈಗ ಮತ್ತೆ ಹಲವು ಬಾರಿ ಮೆಡಿಕಲ್ ಚೆಕಪ್ ಮಾಡಿ ನೋಡಿದಾಗಲೂ ಕೂಡ ಅವರಲ್ಲಿ ಹೆಚ್​ಐವಿ ಇದೆ. ಹೀಗಾಗಿ ಆತಂಕಪಡುವಂತದ್ದು ಏನೂ ಇಲ್ಲ ಎನ್ನುತ್ತಾರೆ ಜೈಲು ಸಿಬ್ಬಂದಿ.

ಇದರ ಜೊತೆಗೆ 10,500 ಕೈದಿಗಳ ಪೈಕಿ 200 ಕೈದಿಗಳಲ್ಲಿ ಲೈಂಗಿಕ ಸಂಬಂಧಿತ ಕಾಯಿಲೆಗಳು ಕಾಣಿಸಿಕೊಂಡಿವೆ ಮತ್ತು ಸ್ಕಿನ್ ಇನ್ಫೆಕ್ಷನಂತಹ ಕಾಯಿಲೆಗಳೂ ಕೂಡ ಕಾಣಿಸಿಕೊಂಡಿವೆ. ಪರೀಕ್ಷೆಯಾದ ಯಾವುದೇ ಕೈದಿಗಳಲ್ಲಿ ಟಿಬಿಯ ಯಾವುದೇ ಪಾಸಿಟಿವ್ ಕೇಸ್ ಕಾಣಿಸಿಕೊಂಡಿಲ್ಲ ಎಂದು ಹೇಳಲಾಗಿದೆ.

ಮಹಿಳಾ ಕೈದಿಗಳಿಗೂ ನಡೆದಿದೆ ಕ್ಯಾನ್ಸರ್ ಟೆಸ್ಟ್​

ತಿಹಾರ್ ಜೈಲಿನ ಪ್ರೊಟೆಕ್ಟಿವ್ ಸರ್ವೆ ವಿಭಾಗವು. ಏಮ್ಸ್​ ಮತ್ತು ಸಫ್ದರ್​ಜಂಗ್ ಆಸ್ಪತ್ರೆಯೊಂದಿಗೆ ಸೇರಿ ಮಹಿಳಾ ಕೈದಿಗಳನ್ನು ಸರ್ವಾಯಿಕಲ್ ಕ್ಯಾನ್ಸರ್​ನ ಪರೀಕ್ಷೆಯನ್ನು ಕೂಡ ಮಾಡಿಸಿದ್ದಾರೆ. ಮಹಿಳೆಯರಲ್ಲಿ ಈ ಬಗೆಯ ಕ್ಯಾನ್ಸರ್​ ಕಾಯಿಲೆ ಕಾಣುವುದು ಸಾಮಾನ್ಯ, ಹೀಗಾಗಿ ಮುನ್ನೆಚ್ಚರಿಕೆಯ ಕ್ರಮವಾಗಿ ಆಗಾಗ ಈ ಪರೀಕ್ಷೆಯನ್ನು ಮಾಡಲಾಗುತ್ತದೆ. ಒಂದು ವೇಳೆ ಯಾವುದಾದರೂ ಮಹಿಳಾ ಕೈದಿಯಲ್ಲಿ ಈ ಬಗೆಯ ಕ್ಯಾನ್ಸರ್ ಕಂಡು ಬಂದಿದ್ದೆ ಆದಲ್ಲಿ, ಅವರಿಗೆ ಆರಂಭದಲ್ಲಿಯೇ ಉತ್ತಮ ಚಿಕಿತ್ಸೆ ನೀಡಲು ಅನಕೂಲವಾಗುತ್ತದೆ. ಹೀಗಾಗಿ ಈ ಸರ್ವಾಯಿಕಲ್ ಕ್ಯಾನ್ಸರ್ ಟೆಸ್ಟ್​ನ್ನು ಮಾಡಿಸಲಾಗುತ್ತದೆ.

WhatsApp Group Join Now
Telegram Group Join Now
Instagram Account Follow Now
spot_img

Related articles

MAHAKUMBH : ಆ ಅಘೋರಿ ಭವಿಷ್ಯವೇ ನಿಜವಾಯ್ತಾ?

MAHAKUMBH : ಉತ್ತರ ಪ್ರದೇಶದ ದೇವ ಪ್ರಯಾಗದಲ್ಲಿ MAHAKUMBH ನಡೆಯುತ್ತಿದೆ. ಕಳೆದ 30 ದಿನಗಳ ಅಂತರದಲ್ಲಿ 7 ಅಗ್ನಿ ದುರಂತ ಎದುರಾಗಿವೆ. ಈ ಹಿಂದೆ ಹೀಗೆ...

DARSHAN : ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿ ದರ್ಶನ್ ಭಾವುಕ

Darshan News: ಫೆಬ್ರವರಿ 16 ರಂದು ಚಾಲೆಂಜಿಂಗ್ ಸ್ಟಾರ್ DARSHAN ಹುಟ್ಟುಹಬ್ಬವನ್ನು ಆಚರಿಸಿಕೊಂಡರು. 48ನೇ ವರ್ಷಕ್ಕೆ ಕಾಲಿಟ್ಟ ದಾಸನಿಗೆ ಸ್ಯಾಂಡಲ್​ವುಡ್​ ತಾರೆಯರು, ವಿವಿಧ ಕ್ಷೇತ್ರದ ಗಣ್ಯರು...

TULASI GABBARD : ಅಮೆರಿಕ ಗುಪ್ತಚರ ಇಲಾಖೆಯ ನೂತನ ಮುಖ್ಯಸ್ಥೆ

TULASI GABBARD : TULASI GABBARD​, ಈಗ ಅಮೆರಿಕಾದ ರಾಷ್ಟ್ರೀಯ ಗುಪ್ತಚರ ದಳ ನಿರ್ದೇಶನದ ನೂತನ ಮುಖ್ಯಸ್ಥೆಯಾಗಿ ಆಯ್ಕೆಯಾಗಿದ್ದಾರೆ. ಭಾರತದೊಂದಿಗೆ ಅವರಿಗಿರುವ ನಂಟಿನ ಬಗ್ಗೆಯೂ ಕೂಡ...

MATSYA 6000 : ಸಮುದ್ರ ಜಲಾಂತರ್ಗಾಮಿ ನೌಕೆಯ ಪರೀಕ್ಷೆ ಯಶಸ್ವಿ

Matsya 6000: ದೇಶದ ನಾಲ್ಕನೇ ತಲೆಮಾರಿನ ಆಳ ಸಮುದ್ರ ಜಲಾಂತರ್ಗಾಮಿ ನೌಕೆಯ ಪರೀಕ್ಷೆ ಪೂರ್ಣಗೊಂಡಿದ್ದು, 2025ರ ಅಂತ್ಯದ ವೇಳೆಗೆ 500 ಮೀಟರ್ ಪ್ರಯೋಗ ನಡೆಯಲಿದೆ. ಇದು...