ಹೈದರಾಬಾದ್: ವಿಪತ್ತು ನಿರ್ವಹಣೆಗೆ ಉನ್ನತಮಟ್ಟದ ಕಾರ್ಯಾಚರಣೆಗೆ ಸಜ್ಜಾಗುವ ಹಾಗೂ ಯಾವುದೇ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ಸಮರ್ಥ ಪಡೆ ಕಟ್ಟಲು ತೆಲಂಗಾಣ ಸರ್ಕಾರ ಮುಂದಾಗಿದೆ. ಇದೇ ಉದ್ದೇಶದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ರೀತಿಯಲ್ಲಿಯೇ ರಾಜ್ಯ ವಿಪತ್ತು ನಿರ್ವಹಣೆ ಪಡೆಯ ತರಬೇತಿ ರೀತಿಯ ವಿಶೇಷ ಪಡೆಯನ್ನು ತೆಲಂಗಾಣ ಸರ್ಕಾರ ರಚಿಸಿದೆ.
ಈ ಎಸ್ಡಿಆರ್ಎಫ್ ಪಡೆಗೆ ಇಂದು ಸಿಎಂ ರೇವಂತ್ ರೆಡ್ಡಿ ಔಪಚಾರಿಕವಾಗಿ ಚಾಲನೆ ನೀಡಿದ್ದು, ಇದು ರಾಜ್ಯ ವಿಪತ್ತು ಸನ್ನದ್ಧತೆಯಲ್ಲಿ ಗಮನಾರ್ಹ ಹೆಜ್ಜೆಯಾಗಿದೆ ಎಂದರು.
ವಾಹನ ಪಲ್ಟಿ ಅಥವಾ ಕಟ್ಟಡ ಕುಸಿತದಂತಹ ಬಿಕಟ್ಟಿನ ಸಂದರ್ಭದಲ್ಲಿ ತಕ್ಷಣಕ್ಕೆ ಜೀವನ ರಕ್ಷಣೆ ನಿರ್ಣಾಯಕವಾಗಿದೆ. ಇದನ್ನು ಅರ್ಥೈಸಿಕೊಂಡು ತೆಲಂಗಾಣ ಸರ್ಕಾರ 35.03 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಅಗ್ನಿ ಇಲಾಖೆ ನಿರ್ಮಾಣ ಮಾಡಿದ್ದು, ಇದಕ್ಕಾಗಿ ಅತ್ಯಾಧುನಿಕ ಸಾಧನಗಳ ಮತ್ತು ನುರಿತ ಸಿಬ್ಬಂದಿ ಹಾಗೂ ಸಮರ್ಪಕವಾಗಿ ವಿಪತ್ತು ನಿರ್ವಹಿಸುವ ಸಮರ್ಥ ತಂಡವೊಂದನ್ನು ಕಟ್ಟಿದೆ.
ಎಸ್ಡಿಆರ್ಎಫ್ ತೆಲಂಗಾಣ ಅಗ್ನಿ ವಿಭಾಗದಲ್ಲಿ 1,000 ಸಿಬ್ಬಂದಿಗಳಿದ್ದು, ತಮಿಳುನಾಡಿನ ಅರಕೊನಂ, ಮಹಾರಾಷ್ಟ್ರದ ಪುಣೆ, ಗುಜರಾತ್ನ ವಡೋದರ, ಒಡಿಶಾದ ಮುಂಡಲಿ, ಆಂಧ್ರ ಪ್ರದೇಶದ ಎನ್ಡಿಆರ್ಎಫ್ ಕೇಂದ್ರದಲ್ಲಿ ತರಬೇತಿ ನೀಡಲಾಗಿದೆ.
ಈ ಹೊಸ ಘಟಕದಲ್ಲಿ 2,000 ಮಂದಿ ಹೆಚ್ಚಿನ ತರಬೇತಿ ಸಿಬ್ಬಂದಿಗಳಾಗಿದ್ದು, ಅವರು ಪ್ರವಾಹ, ಭೂಕಂಪ ಅದರಲ್ಲೂ ಅಗ್ನಿ ವಿಪತ್ತಿನ ತುರ್ತು ಸಂದರ್ಭದಲ್ಲಿ ಸಮರ್ಥವಾಗಿ, ಪರಿಣಾಮಕಾರಿಯಾಗಿ ಈ ಪಡೆ ಕಾರ್ಯ ನಿರ್ವಹಿಸಲಿದೆ. ಈ ಎಸ್ಡಿಆರ್ಎಫ್ ಪಡೆಗೆ ಇಂದು ಸಿಎಂ ರೇವಂತ್ ರೆಡ್ಡಿ ಔಪಚಾರಿಕವಾಗಿ ಚಾಲನೆ ನೀಡಿದ್ದು, ಇದು ರಾಜ್ಯ ವಿಪತ್ತು ಸನ್ನದ್ಧತೆಯಲ್ಲಿ ಗಮನಾರ್ಹ ಹೆಜ್ಜೆಯಾಗಿದೆ ಎಂದರು.
ಬಸ್, ಟ್ರಕ್ ಮತ್ತು ಬೊಲೆರೊದ 20 ವಾಹನ ಮತ್ತು 40 ರಕ್ಷಣಾ ಬೋಟ್ ಕೊಳ್ಳಲಾಗಿದೆ. ವಾಟರ್ಪ್ರೂಫ್ ಜಾಕೆಟ್, ಎಲ್ಇಡಿ ಲೈಟ್ ಜೊತೆಗೆ ಹೆಲ್ಮೆಟ್, ಪ್ರವಾಹ ನೀರಿನ ಕಾರ್ಯಾಚರಣೆಯಲ್ಲಿ ಫೇಸ್ ಶೀಲ್ಡ್ ಸೇರಿದಂತೆ 67 ಬಗೆಯ ಸುಧಾರಿತ ಸಾಧನಗಳನ್ನ ನೀಡಲಾಗಿದೆ.
ತೆಲಂಗಾಣದಾದ್ಯಂತ ಎಲ್ಲ 137 ಅಗ್ನಿ ಕೇಂದ್ರದಲ್ಲಿ ಟಿಜಿಎಸ್ಡಿಆರ್ಫ್ ಸ್ಟೇಷನ್ ಕಾರ್ಯ ನಿರ್ವಹಿಸಲಿದೆ.
100 ಟನ್ಗಳವರೆಗಿನ ಭಾರ ಎತ್ತುವ ಸಾಮರ್ಥ್ಯದ ಬ್ಯಾಗ್, ನಿಮಿಷಕ್ಕೆ 2,000 ಲೀಟರ್ ನೀರು ಪಂಪ್ ಮಾಡುವ ಫ್ಲೋಟಿಂಗ್ ಪಂಪ್ ಕೂಡಾ ಇರಲಿದೆ.
ಟಿಜಿಎಸ್ಪಿ ಸಿಬ್ಬಂದಿ ಅಗ್ನಿಶಾಮಕ ದಳದ ಬಲ ಹೆಚ್ಚಿಸುವ ಜೊತೆಗೆ ತ್ವರಿತ ಮತ್ತು ಸಮರ್ಥ ವಿಪತ್ತು ನಿರ್ವಹಣೆ ಸೇವೆ ನೀಡಲಿದ್ದಾರೆ. ಎಸ್ಡಿಆರ್ಎಫ್ ಉತ್ತಮ ಸುರಕ್ಷಾ ಕ್ರಮದ ಮೂಲಕ ತೆಲಂಗಾಣದ ವಿಪತ್ತ ನಿರ್ವಹಣೆ ಪ್ರಯತ್ನದಲ್ಲಿ ಹೊಸ ಪ್ರಯತ್ನ ಆರಂಭಿಸಿದೆ ಎಂದರು.
ಈ ಹೊಸ ವ್ಯವಸ್ಥೆಯು ಪ್ರವಾಹ ಮತ್ತು ಅಗ್ನಿ ಅಪಘಾತದಂತಹ ವಿಪತ್ತನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಿದೆ ಎಂದು ತೆಲಂಗಾಣ ಅಗ್ನಿ ಸುರಕ್ಷಾ ಪ್ರಧಾನ ನಿರ್ದೇಶಕ ನಾಗಿ ರೆಡ್ಡಿ ತಿಳಿಸಿದ್ದಾರೆ.