ವಿವಿಧ ವೃತ್ತಿ ಹಿನ್ನೆಲೆಯ 12 ಮಹಿಳೆಯರಿಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನವೆಂಬರ್ 30ರಂದು ದೇವಿ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಸಮಾಜಕ್ಕೆ ನೀಡಿರುವ ಒಟ್ಟಾರೇ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
2014ರಿಂದಲೂ ದೇವಿ ಪ್ರಶಸ್ತಿಯನ್ನು ನೀಡುತ್ತಾ ಬರಲಾಗಿದೆ. ಕಳೆದ 10 ವರ್ಷಗಳಲ್ಲಿ 28 ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ಸಮಾಜದಲ್ಲಿ ಅಪಾರ ಸೇವೆ ಸಲ್ಲಿಸಿದ 290ಕ್ಕೂ ಮಹಿಳೆಯರನ್ನು ಗುರುತಿಸಿ, ಗೌರವಿಸಲಾಗಿದೆ.
ಪ್ರಸ್ತುತ ಅದಾನಿ, ಬೆಂಗಳೂರಿನ ಕಾವೇರಿ ಆಸ್ಪತ್ರೆ, ಪ್ರಾಯೋಜಕತ್ವದಲ್ಲಿ 2024 ದೇವಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದೆ. ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೆಎಂಎಫ್ ನಂದಿನಿ ಮತ್ತು KAPPEC ಸಹ ಪ್ರಯೋಜಕರಾಗಿದ್ದಾರೆ.
ಕಾವೇರಿ ಹ್ಯಾಂಡಿಕ್ರಾಪ್ಟ್ಸ್ ಪ್ರೋತ್ಸಾಹಕ ಪಾಲುದಾರರಾಗಿದ್ದು, Radico ಸೆಲೆಬ್ರೇಷನ್, ಅಹುಜಾಸನ್ಸ್ ಗಿಫ್ಟ್ ಪಾಲುದಾರರಾಗಿದ್ದಾರೆ. ನವೆಂಬರ್ 30 ರಂದು ನಡೆಯಲಿರುವ 29ನೇ ಆವೃತ್ತಿಯಲ್ಲಿ ಪ್ರಶಸ್ತಿ ಪಡೆಯಲಿರುವ ಸಾಧಕಿಯರ ವಿವರ
ಜಾಹ್ನವಿ ಫಾಲ್ಕಿ ವಿಜ್ಞಾನ ಮತ್ತು ತಂತ್ರಜ್ಞಾನದ ಇತಿಹಾಸಕಾರರಾಗಿದ್ದಾರೆ. ಜಾಹ್ನವಿ ಬೆಂಗಳೂರಿನ ವಿಜ್ಞಾನ ಗ್ಯಾಲರಿಯ ಸಂಸ್ಥಾಪಕ ನಿರ್ದೇಶಕರು ಆಗಿದ್ದಾರೆ.ಅವರಿಗೆ 2023 ರ ಇನ್ಫೋಸಿಸ್ ಮಾನವಿಕ ಪ್ರಶಸ್ತಿಯನ್ನು ನೀಡಲಾಗಿತ್ತು. ಎಂಟು ಅಂತಾರಾಷ್ಟ್ರೀಯ ಗ್ಯಾಲರಿಯ ನೆಟ್ ವರ್ಕ್ ಗಳಲ್ಲಿ ಇದು ಒಂದಾಗಿದ್ದು, ಏಕೈಕ ಸ್ವಾಯತ್ತ ಸಂಸ್ಥೆಯಾಗಿದೆ. 1.4 ಲಕ್ಷ ಚದರ ಅಡಿ ಗ್ಯಾಲರಿಯು ದೇಶದಲ್ಲಿ ‘ವಿಜ್ಞಾನವನ್ನು ಸಂಸ್ಕೃತಿಗೆ ಮರಳಿ ತರಲು ಪ್ರಯತ್ನಿಸುತ್ತಿದೆ.
ಡಾ. ವತ್ಸಲಾ ತಿರುಮಲೈ ಅವರು ಬೆಂಗಳೂರಿನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (TIFR) ನ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರದಲ್ಲಿ ಪ್ರೊಫೆಸರ್ ಮತ್ತು ಡೀನ್ (ಸಂಶೋಧನೆ) ಆಗಿದ್ದಾರೆ. ಮೋಟಾರು ವ್ಯವಸ್ಥೆ, ನರವ್ಯೂಹ ಅಭಿವೃದ್ಧಿ ಮತ್ತು ನ್ಯೂರೋಫಿಸಿಯಾಲಜಿ ಅವರ ಆಸಕ್ತಿಯ ವಿಷಯಗಳಾಗಿವೆ.
ಅಲಿನಾ ಆಲಂ ತನ್ನ 23 ನೇ ವಯಸ್ಸಿನಲ್ಲಿ ಮಿಟ್ಟಿ ಕೆಫೆಯನ್ನು ಪ್ರಾರಂಭಿಸಿದ್ದರು. ದಿವ್ಯಾಂಗರ ಹಕ್ಕುಗಳು ಮತ್ತು ಒಳಗೊಳ್ಳುವಿಕೆ ಕುರಿತು ಸಂಘಟನೆ ಅರಿವು ಮೂಡಿಸುವಲ್ಲಿ ನೆರವಾಗಿದೆ. ಅಲಿನಾ ನಾಲ್ಕು ಬಾರಿ TEDx ಭಾಷಣಕಾರರಾಗಿದ್ದು, 30 ವರ್ಷದೊಳಗಿನ ಏಷ್ಯಾದ 30 ಮಂದಿಯ ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ದಿವ್ಯಾಂಗರಿಗೆ ಆರ್ಥಿಕ ಸ್ವಾತಂತ್ರ್ಯ ಮತ್ತು ಘನತೆಯ ಬದುಕು ನೀಡುವಲ್ಲಿ ಮಿಟ್ಟಿ ಕೆಫೆಯ ಕೆಲಸ ಗಮನಾರ್ಹವಾಗಿದೆ. ಅವರು ಕಾಮನ್‌ವೆಲ್ತ್ ಯುವ ಪ್ರಶಸ್ತಿ ಪುರಸ್ಕೃತರಾಗಿದ್ದು, ನೀತಿ ಆಯೋಗದಿಂದಲೂ ಪ್ರಶಸ್ತಿ ಪಡೆದಿದ್ದಾರೆ.
ಸೋನಾಲಿ ಸತ್ತಾರ್, ಸುಮಾರು 20 ವರ್ಷಗಳಿಂದಲೂ ಸ್ವತಂತ್ರ್ಯ ಉದ್ಯಮಿಯಾಗಿದ್ದಾರೆ. ಹೆಚ್ಚಿನ ಸ್ಪರ್ಧಾ ಕ್ಷೇತ್ರಗಳಾದ ಬಟ್ಟೆ ಹಾಗೂ ಆಹಾರ ಉದ್ಯಮದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಇವರು 1994ರಲ್ಲಿ ದೆಹಲಿಯ ನ್ಯಾಷನಲ್ ಫ್ಯಾಷನ್ ಟೆಕ್ನಾಲಜಿ ಸಂಸ್ಥೆಯಿಂದ ಪದವಿ ಪಡೆದಿದ್ದಾರೆ.
ಪವಿತ್ರಾ ಮುದ್ದಯ್ಯ ವಿಮೋರ್‌ನ ಸಹ ಸಂಸ್ಥಾಪಕಿಯಾಗಿದ್ದಾರೆ. Vimor ನೇಕಾರರ ಸಬಲೀಕರಣಕ್ಕಾಗಿ 1974 ರಿಂದ ಕೆಲಸ ಮಾಡುತ್ತಿದೆ. ದೇಶದ ಜವಳಿ ಸಂಸ್ಕೃತಿಯನ್ನು ಕಾಪಾಡಲು ನೇಕಾರರನ್ನು ಬೆಂಬಲಿಸುವಲ್ಲಿ ಪವಿತ್ರಾ ಅವರು ಅಪಾರ ನಂಬಿಕೆ ಹೊಂದಿದ್ದಾರೆ.
ಡಾ.ಪ್ರತಿಮಾ ಮೂರ್ತಿ, ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (ನಿಮ್ಹಾನ್ಸ್)ನ ಮನೋವೈದ್ಯಶಾಸ್ತ್ರದ ನಿರ್ದೇಶಕಿ ಮತ್ತು ಹಿರಿಯ ಪ್ರಾಧ್ಯಾಪಕರಾಗಿದ್ದಾರೆ. ಅವರು ಬೆಂಗಳೂರು ವೈದ್ಯಕೀಯ ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿದ್ದಾರೆ.ಅವರು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಮೂರು ದಶಕಗಳ ಅನುಭವವನ್ನು ಹೊಂದಿದ್ದಾರೆ.
ಅರುಂಧತಿ ನಾಗ್, ಹಿರಿಯ ನಟಿ ಹಾಗೂ ರಂಗಕರ್ಮಿ ಆಗಿದ್ದಾರೆ.ಬೆಂಗಳೂರಿನ ರಂಗ ಶಂಕರ ಎಂಬ ರಂಗಮಂದಿರವನ್ನು ನಡೆಸುತ್ತಿರುವ ಸಂಕೇತ್ ಟ್ರಸ್ಟ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ಟ್ರಸ್ಟಿಯಾಗಿದ್ದಾರೆ.ಅವರು 50 ವರ್ಷಗಳಿಂದ ಬಹುಭಾಷಾ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಲೇಖಕಿಯಾಗಿರುವ ಸಂಹಿತಾ ಅರ್ನಿ 11ನೇ ವಯಸ್ಸಿನಲ್ಲಿಯೇ ‘ಮಹಾಭಾರತ’ ಬಾಲಕೃತಿ ಮೂಲಕ ಬರವಣಿಗೆಯನ್ನು ಆರಂಭಿಸಿದ್ದರು. ಸೀತಾ ರಾಮಾಯಣ ಅವರ ಎರಡನೇ ಕೃತಿಯಾಗಿದೆ. ದಿ ಮಿಸ್ಸಿಂಗ್ ಕ್ವೀನ್ ಹಾಗೂ ದಿ ಪ್ರೀನ್ಸ್ ಎಂಬ ಮತ್ತೆರಡು ಪುಸ್ತಕಗಳಾಗಿವೆ. The Prince 2020ರ ನೀವ್ ಬುಕ್ ಪ್ರಶಸ್ತಿ ಪಡೆದುಕೊಂಡಿದೆ.ಇದು ಏಳು ಭಾಷೆಯ ಆವೃತ್ತಿಗಳಲ್ಲಿ ಪ್ರಕಟವಾಗಿದೆ. 60, 000 ಪ್ರತಿಗಳು ಮಾರಾಟವಾಗಿವೆ.
ಡಾ. ಅಂಜು ಬಾಬಿ ಜಾರ್ಜ್, ದೇಶದ ಪ್ರಸಿದ್ಧ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ. 2002 ರಲ್ಲಿ ಅವರು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕವನ್ನು ಗೆದಿದ್ದರು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗಳಿಸಿದ್ದರು.2003ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದರು.
ಕವಿತಾ ಗುಪ್ತಾ ಸಬರ್ವಾಲ್ Neev ಶಾಲೆಯ ಸಂಸ್ಥಾಪಕರು ಹಾಗೂ ಮ್ಯಾನೇಜಿಂಗ್ ಟ್ರಸ್ಟಿಯಾಗಿದ್ದಾರೆ. 200 ಕ್ಕೂ ಹೆಚ್ಚು ಬೋಧಕ ವೃತ್ತಿಪರರನ್ನು ನೇಮಿಸಿಕೊಂಡಿದ್ದಾರೆ.ನೀವ್ ಪ್ರಸ್ತುತ ಬೆಂಗಳೂರಿನಲ್ಲಿ ಐದು ಪ್ರಿ-ಸ್ಕೂಲ್ ಮತ್ತು ಒಂದು ಅಕಾಡೆಮಿ ಕ್ಯಾಂಪಸ್ ಹೊಂದಿದ್ದು, ಸುಮಾರು 1,200 ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದೆ.
ಮೀನಾ ಗಣೇಶ್ 2013 ರಲ್ಲಿ ಪ್ರಮುಖ ಹೋಮ್ ಹೆಲ್ತ್‌ಕೇರ್ ಕಂಪನಿಯಾದ ಪೋರ್ಟಿಯಾ ಮೆಡಿಕಲ್ ಸ್ಥಾಪಿಸಿದರು. ಇದು ಈಗ ಭಾರತದ 20ಕ್ಕೂ ಹೆಚ್ಚು ನಗರಗಳಲ್ಲಿ 3,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ನಿರುಪಮಾ ರಾಜೇಂದ್ರ, ಭರತನಾಟ್ಯ ಮತ್ತು ಕಥಕ್ ಶೈಲಿಯನ್ನು ಕರಗತ ಮಾಡಿಕೊಂಡ ಪ್ರಸಿದ್ಧ ಶಾಸ್ತ್ರೀಯ ನೃತ್ಯಗಾರ್ತಿ ಮತ್ತು ನೃತ್ಯ ಸಂಯೋಜಕಿ.ಅವರ ಪತಿ ರಾಜೇಂದ್ರ ಜೊತೆಗೆ ಅವರು ಐದು ಖಂಡಗಳಲ್ಲಿ 1,000 ಪ್ರದರ್ಶನಗಳನ್ನು ನೀಡಿದ್ದು, ಏಳು ಮಿಲಿಯನ್ ಕಲಾವಿದರನ್ನು ತಲುಪಿದ್ದಾರೆ.35 ವರ್ಷ ಅಭಿನವ ಡ್ಯಾನ್ಸ್ ಕಂಪನಿಯ ಪ್ರದರ್ಶಕಿಯಾಗಿ, ಶಿಕ್ಷಕಿಯಾಗಿ, ನಿರ್ಮಾಪಕಿಯಾಗಿ ಮತ್ತು ನಿರ್ದೇಶಕಿಯಾಗಿ ಮಿಂಚಿದ್ದಾರೆ.