spot_img
spot_img

ಉತ್ತರಾಖಂಡದಲ್ಲಿ ಬಸ್ ಪಲ್ಟಿ 36 ಪ್ರಯಾಣಿಕರ ದುರ್ಮರಣ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಡೆಹರಾಡೂನ್: ಉತ್ತರಾಖಂಡದ ಅಲ್ಮೋರಾ ಜಿಲ್ಲೆಯಲ್ಲಿ ಅಪಘಾತ ಸಂಭವಿಸಿ ಬಸ್ ಪಲ್ಟಿಯಾಗಿ ಕನಿಷ್ಠ 36 ಮಂದಿ ಜೀವ ಕಳೆದುಕೊಂಡಿರುವ ಘಟನೆ ನಡೆದಿದೆ.

ಪೌರಿ ಜಿಲ್ಲೆಯ ನೈನಿದಂಡದಿಂದ ರಾತ್ರಿ ಹೊರಟು, ಸುಮಾರು 250 ಕಿಮೀ ದೂರದ ನೈನಿತಾಲ್‌ನ ರಾಮನಗರಕ್ಕೆ ತೆರಳುತ್ತಿದ್ದ 45 ಸೀಟುಗಳ ಬಸ್‌ನಲ್ಲಿ 40ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ತನ್ನ ಗಮ್ಯ ತಾಣದಿಂದ 35 ಕಿಮೀ ದೂರದಲ್ಲಿರುವಾಗ ಬೆಳಿಗ್ಗೆ 8.25ರ ಸುಮಾರಿಗೆ ಮರ್ಚುಲಾದ ಸಾಲ್ಟ್ ಪ್ರದೇಶದಲ್ಲಿನ 200 ಮೀಟರ್ ಆಳದ ಕಂದಕಕ್ಕೆ ಬಸ್ ಉರುಳಿದೆ.

ಗಂಭೀರವಾಗಿ ಗಾಯಗೊಂಡಿದ್ದ ಕನಿಷ್ಠ 9 ಮಂದಿ ಆಸ್ಪತ್ರೆಗೆ ದಾಖಲಾದ ಬಳಿಕ ಕೊನೆಯುಸಿರೆಳೆದರು. ಚಿಂತಾಜನಕ ಸ್ಥಿತಿಯಲ್ಲಿ ಇರುವ ಮೂವರು ಪ್ರಯಾಣಿಕರನ್ನು ಏರ್‌ಲಿಫ್ಟ್ ಮಾಡಲಾಗಿದ್ದು, ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಅಲ್ಮೋರಾ ಮತ್ತು ರಾಮನಗರದ ಅಧಿಕಾರಿಗಳು ತೆರಳಿದ್ದು, ದುರಂತಕ್ಕೆ ಕಾರಣ ಏನು ಎಂದು ತಿಳಿಯಲು ತನಿಖೆ ನಡೆಸುತ್ತಿದ್ದಾರೆ. ಈ ಬಸ್ ಗರ್ವಾಲ್ ಮೋಟಾರ್ ಓನರ್ಸ್ ಒಕ್ಕೂಟಕ್ಕೆ ಸೇರಿದ್ದಾಗಿದೆ.
ಅಪಘಾತ ಸಂಭವಿಸಿದ ಸ್ಥಳದಲ್ಲಿ ಪೊಲೀಸರು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆಗೆ ಇಳಿದರು. ಕೆಲವು ಪ್ರಯಾಣಿಕರು ಸ್ಥಳದಲ್ಲಿಯೇ ಅಸುನೀಗಿದರು.

ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂ ಪರಿಹಾರ ಹಾಗೂ ಗಾಯಗೊಂಡವರಿಗೆ ತಲಾ 1 ಲಕ್ಷ ರೂ ಆರ್ಥಿಕ ನೆರವು ನೀಡುವುದಾಗಿ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಘೋಷಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ಜಿಲ್ಲಾ ಆಡಳಿತಕ್ಕೆ ಸೂಚನೆ ನೀಡಿರುವುದಾಗಿ ಸಿಎಂ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ ಹಾಗೂ ಗಾಯಾಳುಗಳಿಗೆ 50 ಸಾವಿರ ರೂ ಪರಿಹಾರ ಘೋಷಿಸಿದ್ದಾರೆ.

“ಅಲ್ಮೋರಾ ಜಿಲ್ಲೆಯ ಮರ್ಚುಲಾದಲ್ಲಿ ಸಂಭವಿಸಿದ ದುರದೃಷ್ಟಕರ ಬಸ್ ಅಪಘಾತದಲ್ಲಿ ಪ್ರಯಾಣಿಕರು ಸಾವಿಗೀಡಾದ ಬಹಳ ದುಃಖದ ಸುದ್ದಿ ಕೇಳಿದೆ. ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತವಾಗಿ ನಡೆಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ” ಎಂದು ಅವರು ಹೇಳಿದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಮೀನುಗಾರಿಕೆಗೆ ಕೇಂದ್ರದಿಂದ ₹4,969 ಕೋಟಿ ಅನುದಾನ

ನವದೆಹಲಿ: 4,969.62 ಕೋಟಿ ರೂ.ಗಳ ಪ್ರಸ್ತಾವನೆಗಳಿಗೆ ಕೇಂದ್ರದ ಮೀನುಗಾರಿಕೆ ಇಲಾಖೆ ಅನುಮೋದನೆ ನೀಡಿದೆ. ಸಣ್ಣ ಮೀನುಗಾರ ಸಮುದಾಯಗಳು ಹಾಗೂ ಸಾಂಪ್ರದಾಯಿಕ ಮೀನುಗಾರರ ಅಭಿವೃದ್ಧಿಗಾಗಿ ಮತ್ತು ಅವರ...

ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್.ಐ.ಆರ್. : ಸಿದ್ದರಾಮಯ್ಯ

ಬೆಂಗಳೂರು : ಚಂದ್ರಶೇಖರ ಸ್ವಾಮೀಜಿ ಅವರ ಪ್ರಕರಣದಲ್ಲಿ ಪೊಲೀಸರು ಕಾನೂನಿನ ದೃಷ್ಟಿಯಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ಕಾನೂನಿನ ಚೌಕಟ್ಟಿನೊಳಗೆ ಬಂದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇಲ್ಲವಾದರೆ...

ಶಾಂತಿ, ಸೌಹಾರ್ದತೆ ಕಾಪಾಡಬೇಕು : ಸಂಭಲ್ ಜಾಮಾ ಮಸೀದಿ

ಹೊಸದಿಲ್ಲಿ: ಸಂಭಲ್ ಜಾಮಾ ಮಸೀದಿಯ ಆವರಣದಲ್ಲಿನ ಸಮೀಕ್ಷೆಗೆ ಸುಪ್ರೀಂಕೋರ್ಟ್ ತಡೆ ನೀಡಿದ್ದು, ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಹೇಳಿದೆ. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅಲಹಾಬಾದ್...

99.17 crore released to Karnataka

The central government has taken steps to globally develop major tourist destinations that are not so popular in...