ಕರ್ನಾಟಕ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯ ಪ್ರಕಾರ ಮಾರ್ಚ್ ತಿಂಗಳಲ್ಲಿ 6ಕ್ಕೂ ಹೆಚ್ಚು ರಜೆಗಳಿದ್ದು, ನವೆಂಬರ್ 13ರಿಂದ 18ರವರೆಗೆ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗುತ್ತದೆ ಎಂದು ಸರ್ಕಾರ ಘೋಷಿಸಲಾಗಿದೆ.
ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲಾ ಮಕ್ಕಳಿಗೆ ಅಕ್ಟೋಬರ್ 3 ರಿಂದ 20 ತನಕ ದಸರಾ ರಜೆ ಘೋಷಿಸಿತ್ತು. ದಸರಾ ಹಾಗೂ ದೀಪಾವಳಿ ರಜೆ ಮುಗಿಸಿ ಮಕ್ಕಳು ಶಾಲೆಗೆ ಬರಲು ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಮಕ್ಕಳಿಗೆ ಮತ್ತೆ ರಜೆಗಳು ಬರಲಿದೆ. ಹೌದು ನವೆಂಬರ್ 13ರಿಂದ 18ರವರೆಗೆ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ 2024ರ ಶೈಕ್ಷಣಿಕ ವರ್ಷದ ಪ್ರಕಾರ ನವೆಂಬರ್ 13ರಂದು ತುಳಸಿ ಪೂಜೆ ಇದೆ.
ಸ್ಥಳೀಯ ರಜೆ ಘೋಷಣೆ ಅವಕಾಶದ ಆಧಾರದಲ್ಲಿ ಶಾಲೆಗಳು ಅಗತ್ಯವಿದ್ದಲ್ಲಿ ಮಾರ್ಚ್ 5 ರಂದು ಮಹರ್ಷಿ ದಯಾನಂದ ಸರಸ್ವತಿ ಜಯಂತಿ ದಿನಕ್ಕಾಗಿ, ಮಾರ್ಚ್ 25 ರಂದು ಹೋಳಿ ದಿನಕ್ಕಾಗಿ, ಮಾರ್ಚ್ 31 ರಂದು ಈಸ್ಟರ್ ದಿನಕ್ಕಾಗಿ ರಜೆ ಘೋಷಣೆ ಮಾಡಬಹುದು.
ಈ ವರ್ಷದ ಕ್ಯಾಲೆಂಡರ್ ಪ್ರಕಾರ ನವೆಂಬರ್ 13ರಂದು ತುಳಸಿ ಪೂಜೆ ಇದೆ. ಇದಾದ ಬಳಿಕ ನವೆಂಬರ್ 14ರಂದು ಮಕ್ಕಳ ದಿನಾಚರಣೆ ಸರ್ಕಾರಿ ರಜೆ ಇರಲಿದೆ. ನಂತರ ನವೆಂಬರ್ 15ರಂದು ಗುರುನಾನಕ್ ಜಯಂತಿ ಇರಲಿದೆ. ಇದಾದ ನಂತರ ನವೆಂಬರ್ 16ರಂದು ಶನಿವಾರ ಕೇವಲ ಅರ್ಧ ದಿನ ಮಾತ್ರ ಶಾಲೆ ನಂತರ ನವೆಂಬರ್ 17ರಂದು ರವಿವಾರ ರಜೆ ಇರಲಿದೆ.
ಇನ್ನು ನವೆಂಬರ್ 18ರಂದು ಕನಕದಾಸ ಜಯಂತಿ ಆಚರಿಸಲಾಗುತ್ತಿದೆ. ಹೀಗಾಗಿ ಕರ್ನಾಟಕದ ಅನೇಕ ಶಾಲೆಗಳಲ್ಲಿ ಈ ದಿನಂದು ರಜೆ ಇರಲಿದೆ. ಈ ಮೂಲಕ ಒಟ್ಟಾರೆಯಾಗಿ ನವೆಂಬರ್ 13ರಿಂದ ನವೆಂಬರ್ 18ರ ವರೆಗೆ ಒಟ್ಟು 6 ದಿನಗಳ ಕಾಲ ರಜೆ ಇರಲಿದೆ. ಆದರೆ ಈ ರಜೆ ನೀಡುವುದು ಶಿಕ್ಷಣ ಸಂಸ್ಥೆಗಳ ಪರಿಗಣನೆಗೆ ಬಿಟ್ಟಿರುವುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ಶಾಲೆಗಳು ಅಥವಾ ಅಧಿಕೃತವಾಗಿ ರಾಜ್ಯ ಶಿಕ್ಷಣ ಮಂಡಳಿ ಸುತ್ತೋಲೆ ಹೊರಡಿಸಬೇಕಿದೆ.
ಮಾರ್ಚ್ 8 ಮತ್ತು ಮಾರ್ಚ್ 29 ರಂದು ಸಾರ್ವತ್ರಿಕ ರಜೆ ಇದ್ದು, ವಿದ್ಯಾರ್ಥಿಗಳು ಈ ದಿನಗಳಂದು ರಜೆ ಪಡೆಯಲಿದ್ದಾರೆ. ಶಾಲೆ ವಿದ್ಯಾರ್ಥಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆಲ್ಲರಿಗೂ ಈ ರಜೆ ಇರಲಿವೆ. ಮಾರ್ಚ್ 08 ರಂದು ಶುಕ್ರವಾರ ಮಹಾಶಿವರಾತ್ರಿ ಹಿನ್ನೆಲೆ ಹಾಗೂ ಮಾರ್ಚ್ 29 ರಂದು ಶುಕ್ರವಾರ ಗುಡ್‌ಫ್ರೈಡೆ ವಿಶೇಷ ದಿನಗಳಿಗಾಗಿ ಸಾರ್ವತ್ರಿಕ ರಜೆ ದಿನಗಳನ್ನು ಸರ್ಕಾರ ಘೋಷಿಸಿದೆ.