ಮಧ್ಯಪ್ರದೇಶ: ಕನ್ಹಾ, ಸತ್ಪುರ್, ಬಂಢಾವಗಢ್, ಪೆಂಚ್, ಸಂಜಯ್ ದುಬ್ರಿ, ಪನ್ನಾ ಮತ್ತು ವೀರಂಗನ ದುರ್ಗಾವತಿ ಎಂಬ ಎಂಟು ಹುಲಿ ಸಂರಕ್ಷಿತ ತಾಣವನ್ನು ಮಧ್ಯಪ್ರದೇಶ ಹೊಂದಿದೆ.
ಈಗಾಗಲೇ ಏಳು ರಾಷ್ಟ್ರೀಯ ಹುಲಿ ಸಂರಕ್ಷಣಾ ಉದ್ಯಾನ ಹೊಂದಿರುವ ಮಧ್ಯಪ್ರದೇಶದಲ್ಲಿ ಎಂಟನೇ ಪಾರ್ಕ್ ಪ್ರಸ್ತಾಪಕ್ಕೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ತಾಂತ್ರಿಕ ಸಮಿತಿ ಸಮ್ಮತಿ ಸೂಚಿಸಿದೆ. ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಮಾಧವ್ ರಾಷ್ಟ್ರೀಯ ಪಾರ್ಕ್ ಹುಲಿ ಸಂರಕ್ಷಣೆ ಉದ್ಯಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕನ್ಹಾ, ಸಾತ್ಪುರ್, ಬಂಢಾವಗಢ್, ಪೆಂಚ್, ಸಂಜಯ್ ದುಬ್ರಿ, ಪನ್ನಾ ಮತ್ತು ವೀರಂಗನ ದುರ್ಗಾವತಿ ಎಂಬ ಎಂಟು ಹುಲಿ ಸಂರಕ್ಷಿತ ತಾಣವನ್ನು ಮಧ್ಯಪ್ರದೇಶ ಹೊಂದಿದೆ. ಈ ಕುರಿತು ಮಾತನಾಡಿರುವ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಹೆಚ್ಚುವರಿ ಪ್ರಧಾನ ಮುಖ್ಯಸ್ಥರಾದ ಎಲ್ ಕೃಷ್ಣಮೂರ್ತಿ ಮಾತನಾಡಿ, ಎನ್ಟಿಸಿಎ ತಾಂತ್ರಿಕ ಸಮಿತಿಯು ಮಾಧವ್ ರಾಷ್ಟ್ರೀಯ ಉದ್ಯಾನವನ್ನು ಹುಲಿ ಸಂರಕ್ಷಿತಧಾಮವಾಗುವ ಪ್ರಸ್ತಾವಕ್ಕೆ ಸಮ್ಮತಿಸಿದೆ. ಈ ಉದ್ಯಾನ 1,751 ಚ. ಕಿ.ಮೀ ಇದ್ದು, ಪ್ರಮುಖ ಪ್ರದೇಶ 375 ಚ.ಕಿ.ಮೀ ವ್ಯಾಪಿಸಿದೆ. ಬಫರ್ ಪ್ರದೇಶ 1,276 ಚ. ಕಿ.ಮೀ ಇದೆ. ಈ ಪಾರ್ಕ್ನಲ್ಲಿ ಹುಲಿಗಳನ್ನು ಬಿಡಲು ಸಮಿತಿ ಸಮ್ಮತಿಸಿದೆ ಎಂದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಸೂಚನೆ ಮೇರೆಗೆ ಈ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಮಾಧವ್ ಮತ್ತು ಕುನೋ ರಾಷ್ಟ್ರೀಯ ಉದ್ಯಾನದಲ್ಲಿನ ವನ್ಯಜೀವಿಗಳ ನಿರ್ವಹಣೆ ಬಲಪಡಿಸುವ ಉದ್ದೇಶದಿಂದ ಮಧ್ಯಪ್ರದೇಶದ ಸರ್ಕಾರ ಈ ಸಂರಕ್ಷಣಾ ಉಪಕ್ರಮಕ್ಕೆ ಮುಂದಾಗಿದೆ. ಇದು ಸ್ಥಳೀಯ ಸಮುದಾಯಕ್ಕೆ ಪರಿಸರ ಪ್ರವಾಸೋದ್ಯಮ ಪ್ರಯೋಜನ ತಂದುಕೊಡುವ ಜೊತೆಗೆ ಪ್ರದೇಶದಲ್ಲಿ ಅಭಿವೃದ್ಧಿಗೆ ಸಹಾಯವಾಗಲಿದೆ ಎಂದರು.
ಭಾರತದಲ್ಲಿ ಸಹ – ಪರಭಕ್ಷಕ ಮತ್ತು ಬೇಟೆ 2022ರ ವರದಿ ಅನುಸಾರ, ಮಧ್ಯಪ್ರದೇಶದಲ್ಲಿ 785 ಹುಲಿಗಳಿದ್ದು, ಇದು ದೇಶದಲ್ಲಿಯೇ ಅತಿಹೆಚ್ಚು ಹುಲಿ ಹೊಂದಿರುವ ರಾಜ್ಯವಾಗಿದೆ. ಇದರ ನಂತರದ ಸ್ಥಾನದಲ್ಲಿ ಕರ್ನಾಟಕ ಇದ್ದು, ಇಲ್ಲಿ 653, ಉತ್ತರಾಖಂಡ್ನಲ್ಲಿ 560 ಹುಲಿಗಳಿವೆ.
ಕುನೋ ರಾಷ್ಟ್ರೀಯ ಉದ್ಯಾನ ದೇಶದಲ್ಲಿರುವ ಏಕ ಮಾತ್ರ ಚಿರತೆ ಸಂರಕ್ಷಣಾ ಕೇಂದ್ರವಾಗಿದೆ. ಇದು ಶೋಪುರ್ ಜಿಲ್ಲೆಯಲ್ಲಿದ್ದು, ಮಾಧವ್ ರಾಷ್ಟ್ರೀಯ ಉದ್ಯಾನದ ಪಕ್ಕದಲ್ಲಿದೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now