ಬೆಂಗಳೂರು : ರಾಜ್ಯದಲ್ಲಿ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಕೆಪಿಎಸ್ಸಿ (KPSC) ಮರುಪರೀಕ್ಷೆಯಲ್ಲಿ ನೂರಾರು ಗೊಂದಲ ಇದೆ. ಕೆಪಿಎಸ್ಸಿ ಪರೀಕ್ಷೆಯಲ್ಲಿ ಸರ್ಕಾರ ಮತ್ತೆ ನಡೆಸಲು ಮುಂದಾಗಿದೆ. ಆದರೆ, ಮರುಪರೀಕ್ಷೆಗಳಿಗೆ ಅಭ್ಯರ್ಥಿಗಳು ಮತ್ತೆ ಸಿದ್ಧರಾಗಬೇಕು. ಅಲ್ಲದೇ ಸರ್ಕಾರದ ಬೊಕ್ಕಸಕ್ಕೂ ಇದರಿಂದ ಕೋಟ್ಯಾಂತ ರೂಪಾಯಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ.
ಕರ್ನಾಟಕದಲ್ಲಿ ಆಗಸ್ಟ್ 27ರಂದು ನಡೆದ ಕೆಪಿಎಸ್ಸಿ ಪರೀಕ್ಷೆಯಲ್ಲಿ ಅನುವಾದ ಲೋಪ ಆಗಿದೆ. ಇದರಿಂದ ಲಕ್ಷಾಂತರ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಲಕ್ಷಾಂತರ ಜನ ಅಭ್ಯರ್ಥಿಗಳು ತಮ್ಮದಲ್ಲದ ತಪ್ಪಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದಲ್ಲದೇ ಸರ್ಕಾರಕ್ಕೆ ಈ ಪರೀಕ್ಷೆಗಾಗಿ ಮತ್ತೆ ಕೋಟ್ಯಾಂತರ ರೂಪಾಯಿ ಹಣ ಮೀಸಲಿರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಇದನ್ನೂ ಓದಿ :ಆಸ್ತಿ ವಿವರ ಸಲ್ಲಿಸದ 13 ಲಕ್ಷ ಸರ್ಕಾರಿ ನೌಕರರ ವೇತನ ತಡೆ ಹಿಡಿದ ಉತ್ತರ ಪ್ರದೇಶ ಸರ್ಕಾರ
ಕನ್ನಡಿಗರ ತೆರಿಗೆ ಹಣ ಒಬ್ಬ ಅಸಮರ್ಪಕ ಅಧಿಕಾರಿಯಿಂದ ನೀರಿನಲ್ಲಿ ಹೋಮವಾದಂತೆ ಆಗಿದೆ. ಕೆಪಿಎಸ್ಸಿಯು ಮೊದಲ ಬಾರಿ ನಡೆಸಿದ ಪರೀಕ್ಷೆಗೆ ಅಂದಾಜು 4ರಿಂದ 5 ಕೋಟಿ ರೂಪಾಯಿ ಖರ್ಚಾಗಿದೆ. ಇದೀಗ ಮತ್ತೊಮ್ಮೆ ಪರೀಕ್ಷೆ ನಡೆಸುವುದಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಹೇಳಿದೆ. ಇದರಿಂದ ಮತ್ತೊಮ್ಮೆ ಅದೇ ಪ್ರಮಾಣದ ಅಂದರೆ, 4ರಿಂದ 5 ಕೋಟಿ ರೂಪಾಯಿ ಖರ್ಚಾಗಲಿದೆ. ಇಷ್ಟು ದೊಡ್ಡ ಮೊತ್ತ ಕೇವಲ ಒಂದು ಸಣ್ಣ ಅನುವಾದದ ತಪ್ಪಿನಿಂದಲೇ ಆಗಿದೆ.
ಸರ್ಕಾರಕ್ಕೆ ಒಬ್ಬ ಅನುವಾದಕನ್ನು ನೇಮಿಸಲಾಗದೆ ? ರಾಜ್ಯದಲ್ಲಿ ಸಾವಿರಾರು ಜನ ಅನುಭವಿ ಅನುವಾದಕರಿದ್ದಾರೆ. ಆದರೂ, ಕೆಪಿಎಸ್ಸಿ ನಡೆಸುವ ಮಹತ್ವದ ಪರೀಕ್ಷೆಗೆ ಒಬ್ಬರು ಅನುವಾದಕರನ್ನು ನೇಮಿಸಿಕೊಳ್ಳಲು ಸಾಧ್ಯವಾಗಲಿಲ್ಲವೇ ಎನ್ನುವ ಪ್ರಶ್ನೆ ಎದುರಾಗಿದೆ. ಒಬ್ಬ ಅನುವಾದಕರನ್ನು ನೇಮಿಸಿಕೊಂಡಿದ್ದರೆ ಸಾಕಿತ್ತು. ಈ ಪ್ರಮಾಣದ ತಪ್ಪುಗಳು ತಪ್ಪುತ್ತಿತ್ತು.
ಸರ್ಕಾರವೂ ಮುಜುಗರರಿಂದ ತಪ್ಪಿಸಿಕೊಳ್ಳುತ್ತಿತ್ತು. ಆದರೆ, ಅನುವಾದ ಮಾಡುವುದನ್ನು ನಿರ್ಲಕ್ಷಿಸಿದ್ದು, ಗೂಗಲ್ ಟ್ರಾನ್ಸಲೇಷನ್(Google Translation)
ಹಾಗು ಎಐ ಟೂಲ್ನ(AI tool)
ಮೂಲಕ ಆಂಗ್ಲದಿಂದ ಕನ್ನಡಕ್ಕೆ ಅನುವಾದ ಮಾಡಲಾಗಿದೆ. ಈ ಆರೋಪವನ್ನು ಪರೀಕ್ಷೆ ಬರೆದ ಅಭ್ಯರ್ಥಿಗಳೇ ಮಾಡಿದ್ದು, ಪರೀಕ್ಷೆ ಪ್ರಶ್ನೆ ಪತ್ರಿಕೆಯೊಂದಿಗೆ ಅನುವಾದದ ಲೋಪವನ್ನು ವಿವರಿಸಿದ್ದಾರೆ.
ಇದನ್ನೂ ಓದಿ : ಗೌರಿ ಗಣೇಶ ಹಬ್ಬದ ನಿಮಿತ್ತ ಪ್ರಯಾಣಿಕ ಅನುಕೂಲಕ್ಕೆ KSRTC ಶುಭ ಸುದ್ದಿ : ಹಬ್ಬದ ಪ್ರಯುಕ್ತ ಹೆಚ್ಚುವರಿಯಾಗಿ ವಿಶೇಷ ಬಸ್ಸಿನ ವ್ಯವಸ್ತೆ..!
ರಾಜ್ಯ ಸರ್ಕಾರವು (ಕೆಪಿಎಸ್ಸಿ) ಈಚೆಗೆ 384 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಅದರಲ್ಲಿ ಗ್ರೂಪ್ ಎ ವೃಂದದ 159 ಹಾಗೂ ಗ್ರೂಪ್ ಬಿ ವೃಂದದ 225 ಹುದ್ದೆಗಳು ಸಹ ಸೇರಿದ್ದವು. ಈ ಪರೀಕ್ಷೆಗಳಿಗೆ ಒಟ್ಟು 2 (2,10,916)ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆದರೆ, ಪರೀಕ್ಷೆಗೆ 1.30 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. 564 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಇದೀಗ ಮತ್ತೊಮ್ಮೆ ಪರೀಕ್ಷೆ (ಮರು ಪರೀಕ್ಷೆ) ನಡೆಸುವುದಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆಯಾದರೂ, ಎಲ್ಲರಿಗೂ ಅವಕಾಶ (ಅರ್ಜಿ ಸಲ್ಲಿಸಿದ ಎಲ್ಲರೂ) ಸಿಗುವುದು ಅನುಮಾನ ಎಂದು ಹೇಳಲಾಗಿದೆ. ಈಗಾಗಲೇ ಪರೀಕ್ಷೆ ಬರೆದವರಿಗೆ ಮಾತ್ರ ಅವಕಾಶ ಸಿಗುವ ಸಾಧ್ಯತೆ ಇದೆ.
ಇದನ್ನೂ ಓದಿ :ಚಾಮುಂಡೇಶ್ವರಿ ದೇವಸ್ಥಾನ ನಮ್ಮ ಆಸ್ತಿ; ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಮೋದಾದೇವಿ
ಅಭ್ಯರ್ಥಿಗಳಿಗೆ ಮಾನಸಿಕ ಒತ್ತಡ ಲಕ್ಷಾಂತರ ಜನ ಕನ್ನಡ ಅಭ್ಯರ್ಥಿಗಳಿಗೆ ಅನಿವಾರ್ಯವಾಗಿ ಮತ್ತೊಮ್ಮೆ ಕೆಪಿಎಸ್ಸಿ ಪರೀಕ್ಷೆಗೆ ಸಿದ್ಧರಾಗಬೇಕಾದ ಪರಿಸ್ಥಿತಿ ಎದುರಾಗಿದೆ. ಆಗಸ್ಟ್ 27ರಂದು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದೀಗ ಇನ್ನೂ ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಅದೇ ಪರೀಕ್ಷೆಯನ್ನು ಬರೆಯಬೇಕಾಗಿದ್ದು, ಅಭ್ಯರ್ಥಿಗಳು ಗಾಢ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಅಲ್ಲದೇ ಅನಿವಾರ್ಯವಾಗಿ ಮತ್ತು ತಮ್ಮದಲ್ಲದ ತಪ್ಪಿಗೆ ಅಭ್ಯರ್ಥಿಗಳು ಶಿಕ್ಷೆ ಅನುಭವಿಸುವಂತಾಗಿದೆ.