spot_img
spot_img

ರಾಕ್ಷಸನ ರೀತಿಯಲ್ಲಿ ವರ್ತನೆ; ರೇಣುಕಾಸ್ವಾಮಿ ಕೈಮುಗಿದು ಬೇಡಿಕೊಂಡರೂ ಬಿಡಲಿಲ್ಲವಂತೆ ದರ್ಶನ್

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಇಂದು ಕೋರ್ಟ್‌ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಚಾರ್ಜ್ಶೀಟ್ನಲ್ಲಿ ಏನೆಲ್ಲ ಉಲ್ಲೇಖ ಮಾಡಿದ್ದಾರೆ ಅನ್ನೋ ವಿವರಗಳು ಲಭ್ಯವಾಗಿದೆ.

ಇದನ್ನೂ ಓದಿ :ಕಾಂಗ್ರೇಸ್ನಲ್ಲಿ ಏನಾಗ್ತಿದೆ ಗೊತ್ತಾ? ಸಂಚಲನ ಮೂಡಿಸಿದ ಜಾರಕಿಹೊಳಿ ಹೈಕಮಾಂಡ್ ಗುಪ್ತ ಭೇಟಿ

ರೇಣುಕಾಸ್ವಾಮಿ ಕೇಸ್‌ನಲ್ಲಿ ಉಲ್ಲೇಖ ಏನು..?
ಚಾರ್ಜ್ಶೀಟ್ನಲ್ಲಿ ಜೂನ್ 9ರಂದು ನಡೆದ ಕ್ರೌರ್ಯದ ಬಗ್ಗೆ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ. ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಕರೆ ತಂದಿರುವ ಬಗ್ಗೆ ದರ್ಶನ್ಗೆ ಆರೋಪಿ ವಿನಯ್ ಮಾಹಿತಿ ನೀಡಿದ್ದ. ಈ ವೇಳೆ ದರ್ಶನ್ ಖಾಸಗಿ ಹೋಟೆಲ್ ಸ್ಟೋನಿ ಬ್ರೂಕ್ನಲ್ಲಿ ಪಾರ್ಟಿ ಮಾಡುತ್ತಿದ್ದರು. ಆಮೇಲೆ ದರ್ಶನ್, ಪವಿತ್ರ ಗೌಡ ಜೊತೆ ಶೆಡ್ಗೆ ಬಂದಿದ್ದರು ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಲಾಗಿದೆ.

ಶೆಡ್ಗೆ ಬರುತ್ತಿದ್ದಂತೆಯೇ ದರ್ಶನ್ ರೇಣುಕಾಸ್ವಾಮಿ ಮೇಲೆ ಕೋಪಿಸಿಕೊಂಡಿದ್ದಾರೆ. ನೇರವಾಗಿ ರೇಣುಕಾಸ್ವಾಮಿ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಸಿನಿಮಾ ರೀತಿಯಲ್ಲಿ ಎತ್ತಿ, ಬಿಸಾಡಿ ತುಳಿದಿದ್ದಾರೆ. ಮೃಗೀಯ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾಗ ರೇಣುಕಾಸ್ವಾಮಿ ಕೈಮುಗಿದು ಬೇಡಿಕೊಂಡಿದ್ದಾರೆ. ಆಗ ಎರಡೂ ಕಾಲನ್ನು ಹಿಡಿದು ಇಬ್ಬರು ಮರ್ಮಾಂಗಕ್ಕೆ ಥಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ :ನಿನ್ನ ಬಟ್ಟೆ ಬಿಚ್ಚಿಸಿ, ಬೆತ್ತಲೆ ಮೆರವಣಿಗೆ ಮಾಡಿಸ್ತೀನಿ ಎಂದ ಕಾಂಗ್ರೇಸ್‌ ಶಾಸಕ..! ಅದೇನು ಬಾಯೋ ಕೊಳಚೆಯೋ ಎನ್ನುತ್ತಿರುವ ಪ್ರಜೆಗಳು..!

ಇನ್ನು ದರ್ಶನ್ ಅವರ ಕ್ರೌರ್ಯವನ್ನು ನೋಡುತ್ತ ಪವಿತ್ರಗೌಡ ನಿಂತಿದ್ದರು. ಆಕೆ ನೋಡ್ತಿರುವ ಸಿಸಿಟಿವಿ ದೃಶ್ಯಗಳು ಪೊಲೀಸ್ರಿಗೆ ಲಭ್ಯವಾಗಿದ್ದು, ಈ ಬಗ್ಗೆ ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಿದ್ದಾರೆ. ಏಕಕಾಲದಲ್ಲಿ ದರ್ಶನ್ ಅಂಡ್ ಗ್ಯಾಂಗ್ನ 10 ಆರೋಪಿಗಳು ದಾಳಿ ಮಾಡಿದ್ದಾರೆ. ನಂತರ ಪವಿತ್ರ ಗೌಡಳ ಕಾಲಿಗೆ ಬೀಳುವಂತೆ ರೇಣುಕಾಸ್ವಾಮಿಯನ್ನು ಬೀಸಾಡಿದ್ದರು. ಕಾಲು ಹಿಡಿಯಲು ಬಂದಾಗ ಪವಿತ್ರಗೌಡ ಚಪ್ಪಲಿಯಿಂದ ಹೊಡೆದಿದ್ದಾರೆ ಎಂದು ಉಲ್ಲೇಖ ಮಾಡಲಾಗಿದೆ.‌

ಪವಿತ್ರ ಚಪ್ಪಲಿಯಲ್ಲಿ ಹೊಡೆಯುತ್ತಿದ್ದಂತೆ ಮತ್ತೆ ದರ್ಶನ್ ಕೋಪಿಸಿಕೊಂಡಿದ್ದಾರೆ. ಅದೇ ಚಪ್ಪಲಿ ತೆಗೆದುಕೊಂಡು ಹತ್ತಾರು ಬಾರಿ ದರ್ಶನ್ ಹಲ್ಲೆ ಮಾಡಿದ್ದಾರೆ. ಕೊನೆಗೆ ಪಕ್ಕದಲ್ಲಿ ನಿಂತಿದ್ದ ಗೂಡ್ಸ್ ಗಾಡಿಗೆ ರೇಣುಕಾಸ್ವಾಮಿಯನ್ನು ಎಸೆದು ಚಿತ್ರಹಿಂಸೆ ನೀಡಿದ್ದಾರೆ. ಆಗಲೂ ಕೂಡ ರೇಣುಕಾಸ್ವಾಮಿ ಕೈಮುಗಿದು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದ ಎಂಬ ವಿಚಾರವನ್ನು ಆರೋಪಿಗಳು ಸ್ವ-ಇಚ್ಛಾ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ವಿನಯ್ ಫೋನ್ನಲ್ಲಿ ಫೋಟೋಸ್ ರಿಟ್ರೀವ್ ಆಗಿದೆ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ :ಮದ್ಯಪ್ರಿಯರಿಗೆ ಶಾಕಿಂಗ್​ ವಿಚಾರ: ರಾಜ್ಯ ಸರ್ಕಾರದಿಂದ ಬಿಯರ್​ ಬೆಲೆ ಮತ್ತೆ ಏರಿಕೆ..!?

WhatsApp Group Join Now
Telegram Group Join Now
Instagram Account Follow Now
spot_img

Related articles

ಪೂರಕ ಪೌಷ್ಟಿಕ ಆಹಾರ ವಿತರಣೆ ಎನ್‌ಜಿಒಗಳಿಗೆ ವಹಿಸಿ : ಶಶೀಲ್ ನಮೋಶಿ

ಕಲಬುರಗಿ : ರಾಜ್ಯದ ಎಲ್ಲಾ ಮಕ್ಕಳಿಗೆ ವಾರದಲ್ಲಿ ಆರು ದಿನ ಪೌಷ್ಟಿಕ ಆಹಾರ ನೀಡುತ್ತಿರುವ 'ಪೂರಕ ಪೌಷ್ಟಿಕ ಆಹಾರ ವಿತರಣೆ' ಯೋಜನೆಯನ್ನು ಎನ್‌ಜಿಒಗಳಿಗೆ ವಹಿಸಬೇಕೆಂದು...

ಗಯಾನಾದಲ್ಲಿ ಜನೌಷಧಿ ಕೇಂದ್ರಗಳ ಸ್ಥಾಪನೆ: ಪ್ರಧಾನಿ ಮೋದಿ ಸಹಿ

ಜಾರ್ಜ್‍ಟೌನ್ : ಕೆರಿಬಿಯನ್ ರಾಷ್ಟ್ರ ಗಯಾನಾಕ್ಕೆ ಭಾರತವು ತನ್ನ ಔಷಧೀಯ ಉತ್ಪನ್ನಗಳ ರಫ್ತನ್ನು ಹೆಚ್ಚಿಸಲಿದೆ ಮತ್ತುಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸುತ್ತಿದೆ ಎಂದು ಪ್ರಧಾನಿ ನರೇಂದ್ರ...

ರೈತರ ಜಮೀನಿನ ಪಹಣಿ :ವಕ್ಫ್‌ ಹೆಸರು ಬೇಡ

ಬೆಂಗಳೂರು : ವಕ್ಫ್‌ ಮಂಡಳಿ ರದ್ದಾಗಬೇಕು, ರೈತರ ಜಮೀನಿನ ಪಹಣಿಯಲ್ಲಿ ಬರೆದ ವಕ್ಫ್‌ ಹೆಸರು ತೆಗೆದುಹಾಕಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಆಗ್ರಹಿಸಿದರು. ಸ್ವಾತಂತ್ರ್ಯ ಉದ್ಯಾನದಲ್ಲಿ...

ರೈತರ ಕಂಗೆಡಿಸಿದ ಡೀಮ್ಡ್ ಫಾರೆಸ್ಟ್

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ರೈತರು ಸಾಗುವಳಿ ಮಾಡುತ್ತಿರುವ ಜಮೀನಿಗೂ ಅರಣ್ಯ ಇಲಾಖೆಯಿಂದ ಬೇಲಿ ಹಾಕುತ್ತಿದ್ದರು. ಕೃಷಿ ಮಾಡುತ್ತಿದ್ದ ರೈತರೆಲ್ಲ ದಿಕ್ಕೆಟ್ಟು ಕೂತಿದ್ದರು. ಕೆಲವೆಡೆ ಸರಕಾರವೇ...