ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಮಹಿಳೆಯರ ಮೇಲೆ ದೌರ್ಜನ್ಯದ ವಿಚಾರ ಕುರಿತು ಫಿಲ್ಮ ಚೆೇಂಬರ್ನಲ್ಲಿ ನಡೆಸಲಾಗಿದ್ದ ಸಭೆಯಲ್ಲಿ ಪರ- ವಿರೋಧದ ಮಾತುಕತೆ ಜೋರಾಗಿದೆ. ವಾಣಿಜ್ಯ ಮಂಡಳಿಯಲ್ಲಿ ಈ ಬಗ್ಗೆ ಕಾವೇರಿದ ಚರ್ಚೆ ನಡೆದಿದೆ. ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ಕಲಾವಿದರ ಸಂಘ ಹಾಗೂ ಮಹಿಳಾ ಆಯೋಗದ ನಡುವೆ ಮಾತಿನ ವಾದ-ವಿವಾದವೇ ಜೋರಾಗಿತ್ತು.
ಇದನ್ನೂ ಓದಿ : ಹಿಂದೂ-ಮುಸ್ಲಿಂ ಧಾರ್ಮಿಕ ಸ್ಥಳಗಳ ಮೇಲೆ ಕಲ್ಲು ತೂರಾಟ.! ಅಂಗಡಿ ವಾಹನಗಳಿಗೆ ಬೆಂಕಿ ಹಚ್ಚಲಾಗಿ.!
ಗಲಾಟೆ ಮಾಡ್ತಿದ್ದವರ ಮೇಲೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಗರಂ ಆದರು. ಸಮಾಧಾನದಿಂದ ಇರುವಂತೆ ಹೇಳಿದ್ರು. ಅಷ್ಟಕ್ಕೂ ಜಟಾಪಟಿ ನಿಲ್ಲದಿದ್ದಾಗ ಸಭೆಯಿಂದ ನಾನು ಹೊರ ಹೋಗುತ್ತೇನೆಂದು ರಾಕ್ಲೈನ್ ಎಚ್ಚರಿಕೆ ನೀಡಿದ್ರು. ಬಳಿಕೆ ಮತ್ತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಸಭೆ ಮುಂದುವರಿಸಿದ್ರು.
ಸಭೆಯ ನಿರ್ಧಾರದ ಬಗ್ಗೆ ಕವಿತಾ ಲಂಕೇಶ ಅವರು ನಮಗೆ ಮಾತನಾಡೋಕೆ ಅವಕಾಶವೇ ಕೊಟ್ಟಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ. ಮಹಿಳೆಯರಿಗೆ ಯಾವುದೇ ಸಮಸ್ಯೆಯಾಗಿಲ್ಲ ಅಂತ ಹೇಳಿದ್ರು. ಆವಾಗ ನಟಿಯರನ್ನು ಮಾತನಾಡೋಕೆ ಬಿಡ್ತಿರಲಿಲ್ಲ.
ಇದನ್ನೂ ಓದಿ : ಮೋದಿ ಸರ್ಕಾರ ಕೈಗೊಂಡ ಮಹತ್ವದ ತೀರ್ಮಾನಗಳು ಏನು? ಕೇಂದ್ರ ಸರ್ಕಾರದ ಮೆಗಾ ಪ್ಲಾನ್ ಏನು?
ಈಗ ಮಹಿಳೆಯೇ ಮಂದೆ ಬರ್ತಿದ್ದಾರೆ ಎಂದು ನಾಗಲಕ್ಷ್ಮೀ ಹೇಳಿದ್ರು. ಕಾನ್ಫಿಡೆನ್ಷಿಯಲ್ ಸರ್ವೇ ಮಾಡುತ್ತೇವೆ ಎಂದು ಹೇಳಿದ್ದಾರೆ. ಅದು ಒಳ್ಳೆಯದೇ. ಆದ್ರೆ ಇಲ್ಲಿ ಪುರುಷರು ಯಾವುದೇ ರೀತಿಯ ಶೋಷಣೆ ಆಗ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಕವಿತಾ ಲಂಕೇಶ್ ಅಸಮಾಧಾನ ಹೊರ ಹಾಕಿದ್ದಾರೆ.
ಇನ್ನು ಕಮಿಟಿ ರಚನೆಗೆ ಆಗಬೇಕು ಎಂದು ಹೇಳಿರುವ ಕವಿತಾ ಲಂಕೇಶ್, ನಾವು ನಿವೃತ್ ಜಡ್ಜ್ ನೇಮಕ ಮಾಡಿ ಕಮೀಟಿ ರಚನೆ ಮಾಡಿ ಅಂತ ತಿಳಿಸಿದ್ವಿ. ಜಡ್ಜ್ ಪುರುಷರು ಇರಲಿ ಎಂದು ಕೂಡ ತಿಳಿಸಿದ್ವಿ. ಇದಕ್ಕೆ ವಿರೋಧ ಬಂತು.
ಸಮಿತಿ ಬೇಡ ಅಂತನೂ ಕೆಲವರು ಹೇಳಿದ್ರು. ಮಹಿಳೆಯರು ಇಲ್ಲದೇ ಸಿನಿಮಾ ಮಾಡಬೇಕು, ವ್ಯಾಪಾರ ನಿಂತು ಹೋಗುತ್ತೆ ಅಂತಲೂ ಹೇಳಿದ್ರು. ಮಹಿಳೆಯರು ಇಲ್ಲದೇನೇ ಸಿನಿಮಾ ಮಾಡ್ತೀವಿ ಅಂತಿದ್ದಾರೆ. ಇಲ್ಲೂ ಕೂಡ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ನಮ್ಮ ಬಳಿ ದೂರು ನೀಡಲು ಒಂದು ಹೆಲ್ಪ್ಲೈನ್ ಮಾಡಬೇಕು. ಅದಕ್ಕೆ ಕಮಿಟಿ ಬೇಕೆ ಬೇಕು ಅಂತ ತಿಳಿಸಿದ್ರು ಕವಿತಾ ಲಂಕೇಶ್.
ಇದನ್ನೂ ಓದಿ : ಸೂಪರ್ ಪ್ಲಾನ್ BSNL: ಅನಿಯಮಿತ ಕರೆ, 320GB ಡೇಟಾ.. 160 ದಿನಗಳ ವ್ಯಾಲಿಡಿಟಿ .!
ನಟ ಚೇತನ್ ಬಗ್ಗೆ ತುಂಬಾ ವಿರೋಧವಾಗಿ ಮಾತನಾಡಿದ್ದಾರೆ. ನಟಿ ನೀತು ಕಂಪ್ಲೆಂಟ್ ತೆಗೆದುಕೊಂಡು ಬಂದ್ರೆ ಏನೂ ಮಾಡಿಲ್ಲ. ನಮ್ಮನ್ನೂ ಮಾತನಾಡೋಕೆ ಬಿಡಲಿಲ್ಲ.. ಮಹಿಳೆಯರು ಧ್ವನಿ ಎತ್ತಿದ್ರೆ ಮಾತನಾಡೋದಕ್ಕೆ ಬಿಡೋದಿಲ್ಲ ಎಂದು ಕವಿತಾ ಲಂಕೇಶ್ ಆಕ್ರೋಶ ಹೊರಹಾಕಿದ್ದಾರೆ.