ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ನ ಎರಡನೇ ದಿನದಲ್ಲಿ ಬೂಮ್ರಾ ಮುಂದೆ ಬಾಂಗ್ಲಾದೇಶದ ಆಟ ನಡೆಯಲಿಲ್ಲ. ಬೂಮ್ ಬೂಮ್ ಬೂಮ್ರಾ ದಾಳಿಗೆ ತತ್ತರಿಸುರುವ ಬಾಂಗ್ಲಾ ಬ್ಯಾಟ್ಸ್ಮನ್ಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿ : SSLC ಪಾಸ್ ಆಗಿದ್ರೆ ಸರ್ಕಾರಿ ಕೆಲಸ : ಆದಾಯ ತೆರಿಗೆ ಇಲಾಖೆ ಹುದ್ದೆಗಳಿಗೆ ಕಾಲ್ ಫಾರ್ಮ್.!
ಅಂದ್ಹಾಗೆ ಇಂದು ಬೆಳಗ್ಗೆ ಭಾರತವು ಜಡೇಜಾ ಹಾಗೂ ಅಶ್ವಿನ್ ಅವರ ವಿಕೆಟ್ ಕಳೆದುಕೊಂಡು ಬೇಗ ಆಲೌಟ್ ಆಯಿತು. 91.2 ಓವರ್ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 376 ರನ್ಗಳಿಸಿತು. ಈ ಟಾರ್ಗೆಟ್ನೊಂದಿಗೆ ಬ್ಯಾಟಿಂಗ್ಗೆ ಇಳಿದಿದ್ದ ಬಾಂಗ್ಲಾ ತಂಡ ಟೀ ಬ್ರೇಕ್ ಅಂತ್ಯದ ವೇಳೆಗೆ 112 ರನ್ಗಳಿಸಿ 8 ವಿಕೆಟ್ ಕಳೆದುಕೊಂಡು ಪೇಚಿಗೆ ಸಿಲುಕಿದೆ.
ಇದನ್ನೂ ಓದಿ : ಆ್ಯಪಲ್ ಪ್ರಿಯರಿಗೆ ಗೂಡ್ ನ್ಯೂಸ್ ; iPhone 16 ಸರಣಿಯನ್ನು ಮನೆ ಬಾಗಿಲಲ್ಲೇ ವಿತರಿಸುತ್ತೆ ಈ ಫ್ಲಾಟ್ಫಾರ್ಮ್!
ಟೀಂ ಇಂಡಿಯಾ ಪರ ಜಸ್ಪ್ರೀತ್ ಬೂಮ್ರಾ ಮಾರಕ ಬೌಲಿಂಗ್ ದಾಳಿ ನಡೆಸಿದರು. ಕೇವಲ 6.5 ಓವರ್ನಲ್ಲಿ 28 ರನ್ ನೀಡಿ 3 ಮೂರು ವಿಕೆಟ್ ಪಡೆದುಕೊಂಡರು.
ಬ್ಯಾಟಿಂಗ್ನಲ್ಲಿ ದರ್ಬಾರ್ ನಡೆಸಿದ್ದ ರವೀಂದ್ರ ಜಡೆಜಾ 2 ವಿಕೆಟ್ ಕಿತ್ತಿದ್ದಾರೆ. ಅದೇ ರೀತಿ ಆಕಾಶ್ ದೀಪ್ ಎರಡು ವಿಕೆಟ್ ಪಡೆದರೆ, ಸಿರಾಜ್ ಕೂಡ ಒಂದು ವಿಕೆಟ್ ಪಡೆದುಕೊಂಡಿದ್ದಾರೆ. ಇನ್ನು ಎರಡು ವಿಕೆಟ್ ಉರುಳಿದರೆ ರೋಹಿತ್ ಪಡೆ ಮೊದಲ ಇನ್ನಿಂಗ್ಸ್ನಲ್ಲಿ ಭಾರೀ ಅಂತರದ ಮುನ್ನಡೆ ಕಾಯ್ದುಕೊಳ್ಳಲಿದೆ.