ಭಾರತದ ಅಂಚೆ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) 2024ನೇ ಸಾಲಿನ ಮತ್ತೊಂದು ನೇಮಕ ಮಾಡಲು ಪ್ರಕಟಣೆ ಹೊರಡಿಸಲಾಗಿದೆ. ದೇಶದ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಎಕ್ಸಿಕ್ಯೂಟಿವ್ (ಕಾರ್ಯನಿರ್ವಾಹಕ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟಾರೆ 344 ಹುದ್ದೆಗಳಿದ್ದು, ಕೇಂದ್ರ ಸರ್ಕಾರಿ ಈ ಹುದ್ದೆಗಳಿಗೆ ಆಸಕ್ತರು ನಿಗದಿತ ಅವಧಿಯಲ್ಲಿ ಆನ್‌ಲೈನ್ ಮೂಲಕ ಅರ್ಜಿ ಹಾಕಲಾಗುವುದು. ಪದವಿ ಅಂಕಗಳ ಆಧಾರದಲ್ಲಿ ಮೆರಿಟ್ ಲಿಸ್ಟ್ ಸಿದ್ಧಪಡಿಸಿ, ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುವುದು.
ಯಾವುದೇ ಪದವಿ ಪಾಸಾಗಿರಬೇಕು. ಅಭ್ಯರ್ಥಿಗಳು ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿ ಪದವಿ ಪಾಸ್ ಮಾಡಿರಬೇಕು. ಅರ್ಜಿ ಸಲ್ಲಿಸುವ ಕೊನೆ ದಿನಾಂಕಕ್ಕೆ ಕನಿಷ್ಠ 21 ವರ್ಷ ಆಗಿರಬೇಕು.
ಗರಿಷ್ಠ 35 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳು 38 ವರ್ಷದವರೆಗೆ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳು 40 ವರ್ಷದವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ವೆಬ್‌ಸೈಟ್ ವಿಳಾಸhttps://ibpsonline.ibps.in/ippblsep24// ಕ್ಕೆ ಭೇಟಿ ನೀಡಿ. ಓಪನ್ ಆದ ವೆಬ್‌ಪೇಜ್‌ನಲ್ಲಿ ‘Click Here for New Registration’ ಎಂದಿರುವಲ್ಲಿ ಕ್ಲಿಕ್ ಮಾಡಿ. ನಂತರ ತೆರೆಯುವ ವೆಬ್‌ಪೇಜ್‌ನಲ್ಲಿ ಬೇಸಿಕ ವೈಯಕ್ತಿಕ ಮಾಹಿತಿ ನೀಡಿ ರಿಜಿಸ್ಟ್ರೇಷನ್ ಪಡೆಯಿರಿ.
ಮತ್ತೆ ಮೇಲಿನ ಲಿಂಕ್ ಕ್ಲಿಕ್ ಮಾಡಿ ಓಪನ್ ಆಗುವ ಪೇಜ್‌ನಲ್ಲಿ ರಿಜಿಸ್ಟರ್ ನಂಬರ್, ಪಾಸ್‌ವರ್ಡ್ ನೀಡಿ ಲಾಗಿನ್ ಆಗಿ. ಕೇಳಲಾದ ಮಾಹಿತಿ ನೀಡಿ ಅರ್ಜಿ ಪೂರ್ಣಗೊಳಿಸಿ. ಅಪ್ಲಿಕೇಶನ್ ಶುಲ್ಕ ರೂ.100. ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬಹುದು. ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್ ಅಧಿಕೃತ ವೆಬ್‌ಸೈಟ್ https://www.ippbonline.com/ಗೆ ಭೇಟಿ ನೀಡಿರಿ.
ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ ಅಕ್ಟೋಬರ್ 11, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಅಕ್ಟೋಬರ್31 ರ ರಾತ್ರಿ 11-59 ಗಂಟೆವರೆಗೆ. ಅರ್ಜಿಯ ಮಾಹಿತಿಗಳನ್ನು ತಿದ್ದುಪಡಿ ಮಾಡಲು ಕೊನೆ ದಿನಾಂಕ: ಅಕ್ಟೋಬರ್ 31 ಆನ್‌ಲೈನ್ ಮೂಲಕ ಶುಲ್ಕ ಪಾವತಿಗೆ ಕೊನೆ ದಿನಾಂಕ ಅಕ್ಟೋಬರ್ 31 ಅರ್ಜಿ ಪ್ರಿಂಟ್ ತೆಗೆದುಕೊಳ್ಳಲು ಕೊನೆ ದಿನಾಂಕ ಅಕ್ಟೋಬರ್ 15 ರ ರಾತ್ರಿ 11-59 ಗಂಟೆವರೆಗೆ ಅರ್ಜಿ ಸಲ್ಲಿಸಬಹುದು.