ಬೆಂಗಳೂರು : ನಗರದಲ್ಲಿ ಆಟೋ ಚಾಲಕರು ಮೀಟರ್‌ಗಳ ವಿವಿಧ ಕಂಪನಿಗಳ ಕ್ಯಾಬ್ ಸೇವೆ, ಬೈಕ್ ಟ್ಯಾಕ್ಸಿಗಳ ಹಾವಳಿ ಹೆಚ್ಚಾದಂತೆ ಸುಸ್ಥಿತಿ ಕಾಯ್ದಕೊಳ್ಳುವುದು ಮತ್ತು ಪ್ರತಿ ವರ್ಷ ಮೀಟರ್ ಸತ್ಯಾಪನೆ (ಸ್ಟ್ಯಾಂಪಿಂಗ್) ಮಾಡಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
ಆಟೋ ಚಾಲಕರು ಪ್ರಯಾಣಿಕರಿಗೆ ಬಾಡಿಗೆ ಸೇವೆ ಒದಗಿಸುವಾಗ ಮೀಟರ್ ಆಧಾರದಲ್ಲಿ ಸೇವಾ ಶುಲ್ಕ ಪಡೆಯಬೇಕು ಎಂಬ ಕಾನೂನು ಇದೆ.
ಈ ಸಂಬಂಧ ಕಾನೂನು ಮಾಪನಶಾಸ್ತ್ರ ಇಲಾಖೆ ಕಳೆದ 17 ತಿಂಗಳಲ್ಲಿ (ಆಗಸ್ಟ್‌ವರೆಗೆ) 10,721 ಪ್ರಕರಣಗಳನ್ನು ದಾಖಲಿಸಿದೆ.
ಆಟೋ ಪ್ರಯಾಣಿಕರು ಮತ್ತು ಚಾಲಕರ ನಡುವೆ ನಿತ್ಯ ಬಾಡಿಗೆ ಚೌಕಾಸಿ ವಾಗ್ವಾದ ನಡೆಯುತ್ತಿರುತ್ತವೆ.
ಹೆಚ್ಚಿನ ದರ ವಸೂಲಿ ಮಾಡುವ ಪ್ರಕರಣಗಳು ಕಂಡು ಬರುತ್ತಿವೆ.
ಈ ಹಿನ್ನೆಲೆಯಲ್ಲಿ ಆಗಾಗ್ಗೆ ತಪಾಸಣೆ ನಡೆಸಿ ಆಟೋ ಮೀಟರ್‌ಗಳನ್ನು ಪರಿಶೀಲನೆ ನಡೆಸಿರುವ ಕಾನೂನು ಮಾಪನಶಾಸ್ತ್ರ ಇಲಾಖೆ, 2023 ರ ಏಪ್ರಿಲ್‌ನಿಂದ 2024 ರ ಆಗಸ್ಟ್‌ವರೆಗೆ ಬೆಂಗಳೂರು ಮತ್ತು ರಾಮನಗರ ವೃತ್ತ ವ್ಯಾಪ್ತಿಯಲ್ಲಿ 10,721 ಪ್ರಕರಣ ದಾಖಲಿಸಿದೆ.
ಈ ಪೈಕಿ 2997 ಪ್ರಕರಣಗಳಲ್ಲಿ ಅಭಿಸಂಧಾನ (ದಂಡ) ವಿಧಿಸಿದ್ದು, 15.12 ಲಕ್ಷ ರೂ. ವಸೂಲು ಮಾಡಿದೆ.
1423 ಅಭಿಸಂಧಾನ (ದಂಡ) ವಿಧಿಸಲಾಗಿದೆ. ಇದರಿಂದಾಗಿ 7,49,091 ರೂ. ಅಭಿಸಂಧಾನ ದಂಡ ವಸೂಲಾಗಿದೆ.
ಈ ಪೈಕಿ 1574 ಪ್ರಕರಣಗಳಿಂದ 7,63,091 ರೂ. ವಸೂಲಾಗಿದೆ. ಉಳಿದವು ಪುನರಾವರ್ತಿತ ಪ್ರಕರಣಗಳಾಗಿದ್ದು, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ.
ತಪಾಸಣೆ ವೇಳೆ ಮೀಟರ್‌ಗೆ ಸ್ಟ್ಯಾಂಪಿಂಗ್ ಆಗಿಲ್ಲ ಎಂಬುದು ಕಂಡ ಬಂದರೆ 500 ರೂ. ದಂಡ ವಿಧಿಸಲಾಗುತ್ತದೆ. ಇಲಾಖೆಯು ಕಳೆದ 17 ತಿಂಗಳಲ್ಲಿ 57,073 ಆಟೋಗಳ ಮೀಟರ್‌ಗೆ ಸ್ಟ್ಯಾಂಪಿಂಗ್ ಮಾಡಿದ್ದು, 1,25,44,062 ರೂ. ಸತ್ಯಾಪನ ಶುಲ್ಕ ಸಂಗ್ರಹಿಧಿಸಿದೆ.
ಈ ಪೈಕಿ 64,95,303 ರೂ. 5 ತಿಂಗಳಲ್ಲಿ (ಏಪ್ರಿಲ್‌ನಿಂದ- ಆಗಸ್ಟ್) ವಸೂಲಾಗಿದೆ. ತಪಾಸಣೆಯ ವೇಳೆ ಚಾಲಕರನ್ನು ವಿಚಾರಣೆ ಮಾಡುವಾಗ ಈ ಅಂಶ ತಿಳಿದು ಬಂದಿದೆ. ಮತ್ತಷ್ಟು ಚಾಲಕರು ನಿರ್ಲಕ್ಷ್ಯ ಮಾಡುತ್ತಾರೆ ಎನ್ನುತ್ತವೆ ಇಲಾಖೆಯ ಮೂಲಗಳು. ಮೀಟರ್ ಪರಿಶೀಲನೆ ಮಾಡಿಸದೆ ಇದ್ದರೆ 500 ರೂ, ಪ್ರಮಾಣ ಪತ್ರ ಇಲ್ಲದಿದ್ದರೆ 500 ರೂ, ಸ್ಟ್ಯಾಂಪಿಂಗ್ ಮಾಡಿಸದಿದ್ದರೆ 500 ರೂ., ಮೀಟರ್ ದೋಷಪೂರಿತವಾಗಿದ್ದರೆ 2000 ರೂ. ಹೀಗೆ ಯಾವ ಯಾವ ನಿಯಮ ಉಲ್ಲಂಘನೆಯಾಗಿದೆ ಒಂದಕ್ಕಿಂತ ಹೆಚ್ಚು ಬಾರಿ ತಪ್ಪು ಪುನಾರಾವರ್ತನೆಯಾದರೆ ಅಂತಹ ಚಾಲಕರ ವಿರುದ್ಧ ನೇರವಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತೇವೆ ಇಲಾಖೆಯ ಅಧಿಕಾರಿ ಹೇಳುತ್ತಾರೆ.