ಬೆಂಗಳೂರು, (ಅ. 18): ಮಹಿಳೆಯರು ಸ್ವಾವಲಂಬಿ ಆಗಲು `ನಮ್ಮ ಯಾತ್ರಿ’ ಸಂಸ್ಥೆಯು ಉಚಿತವಾಗಿ ಆಟೋ ಚಾಲನೆ ತರಬೇತಿ ನೀಡುವ ಈ ಗುರಿ ಮುಂದಾಗಿದೆ.
‘ಮಹಿಳಾ ಶಕ್ತಿ’ ಹೆಸರಿನಲ್ಲಿ ಈ ಯೋಜನೆಯನ್ನು 2023ರ ಅಕ್ಟೋಬರ್‌ನಲ್ಲಿ ‘ನಮ್ಮ ಯಾತ್ರಿ’ಯು ಆರಂಭಿಸಿತು.
108 ಮಹಿಳಾ ಚಾಲಕರು ಒಂದು ವರ್ಷದಲ್ಲಿ ತರಬೇತಿ ಪಡೆದು ಆಟೊ ಓಡಿಸಿ ಜೀವನ ಕಟ್ಟಿಕೊಂಡಿದ್ದಾರೆ.
ಸಾರ್ವಜನಿಕರಿಗೆ ‘ನಮ್ಮ ಯಾತ್ರಿ’ ಸಂಸ್ಥೆಯು ಆಟೊ ಸೇವೆಯನ್ನು ಒದಗಿಸುತ್ತಾ ಬಂದಿದೆ. ಆಸಕ್ತ ಮಹಿಳೆಯರಿಗೆ ಉಚಿತವಾಗಿ ಆಟೊ ಚಾಲನೆಯ ತರಬೇತಿ ನೀಡುವ ‘ಮಹಿಳಾ ಶಕ್ತಿ’ ಯೋಜನೆಯನ್ನು ಕಳೆದ ವರ್ಷ ರೂಪಿಸಲಾಯಿತು’
ಚಾಲಕರೂ ಮಹಿಳೆಯರೇ ಇದ್ದರೆ ಒಳ್ಳೆಯದು ಎಂದು ಕೆಲವು ಮಹಿಳಾ ಪ್ರಯಾಣಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
108 ಮಂದಿ ಪೂರ್ಣ ಪ್ರಮಾಣದಲ್ಲಿ ಆಟೊ ಓಡಿಸುವುದನ್ನೇ ವೃತ್ತಿ ಮಾಡಿಕೊಂಡಿದ್ದಾರೆ.
38 ಮಹಿಳೆಯರು ಸ್ವಂತ ಆಟೊವನ್ನು ಈಗ ಹೊಂದಿದ್ದಾರೆ. 30 ಮಹಿಳೆಯರು ಈಗ ತರಬೇತಿ ಪಡೆಯುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.
ಸೋಮವಾರದಿಂದ ಶುಕ್ರವಾರದವರೆಗೆ ಪ್ರಾಯೋಗಿಕ ತರಬೇತಿ. ಶನಿವಾರ ಚಾಲನಾ ಮಾಹಿತಿ (ಥಿಯರಿ) ತರಗತಿ ನೀಡಲಾಗುತ್ತದೆ.
ತರಬೇತಿಗೆ ಆಸಕ್ತಿ ತೋರುವ ಮಹಿಳೆಯರ ಸಂದರ್ಶನ ನಡೆಸಿದ ಬಳಿಕ ಮೂರು ದಿನ ಪರೀಕ್ಷಾ ತರಬೇತಿ ನೀಡಲಾಗುತ್ತದೆ.
ಕಲಿಯುವ ಆಸಕ್ತಿ ತೋರಿಸುವವರಿಗೆ 40 ದಿನಗಳ ತರಬೇತಿ ಆರಂಭವಾಗುತ್ತದೆ ಎಂದು `ನಮ್ಮ ಯಾತ್ರಿ’ ಚಾಲನಾ ವಿಭಾಗದ ಮುಖ್ಯ ತರಬೇತುದಾರರಾದ ನಾಗಲಕ್ಷ್ಮೀ ತಿಳಿಸಿದರು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now