ಬೆಳಗಾವಿ : ರಾಷ್ಟ್ರ ಲಾಂಛನದ ಅಡಿಯಲ್ಲಿ ‘ಸತ್ಯಮೇವ ಜಯತೆ’ ಎಂಬ ಧ್ಯೇಯ ವಾಕ್ಯ ರಾಜ್ಯದ ಶಕ್ತಿ ಕೇಂದ್ರಗಳಾದ ವಿಧಾನಸೌಧ ಮತ್ತು ಸುವರ್ಣ ವಿಧಾನಸೌಧದ ಮೇಲೆ ಧ್ಯೇಯ ವಾಕ್ಯ ಬಳಸದೇ ಪ್ರದರ್ಶನ ಮಾಡುವುದು ಭಾರತದ ರಾಷ್ಟ್ರ ಲಾಂಛನ (ಅನುಚಿತ ಬಳಕೆಯ ನಿಷೇಧ) ಅಧಿನಿಯಮ 2005 ಹಾಗೂ ಬಳಕೆ ನಿಯಂತ್ರಣ ನಿಯಮ 2007 ರ ಉಲ್ಲಂಘನೆಯಾಗುತ್ತದೆ.
ರಾಜ್ಯದ ಎರಡೂ ಸೌಧಗಳ ಮೇಲೆ ‘ಸತ್ಯಮೇವ ಜಯತೆ’ ಧ್ಯೇಯ ವಾಕ್ಯ ಅಳವಡಿಸಲಾಗಿಲ್ಲ.
ಇದು ಲಾಂಛನದ ಘನತೆ ವಿಚಾರದಲ್ಲಿ ಸರಕಾರ ನಿರ್ಲಕ್ಷ್ಯ ವಹಿಸುತ್ತಿದೆಯೇ ಎಂಬ ಚರ್ಚೆ ಹುಟ್ಟುಹಾಕಿದೆ.
‘ಲಾಂಛನದ ಕೆಳಗೆ ಧ್ಯೇಯವಾಕ್ಯ ಅಳವಡಿಸಲು ಜಾಗವೇ ಇಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಲು ಹೋರಾಟಗಾರರು ಮುಂದಾಗಿದ್ದಾರೆ.
ಸರಕಾರದ ಅಧೀನ ಕಾರ್ಯದರ್ಶಿ ರಾಜಶೇಖರ ಎಂ.ಜಿ. ಅವರು, ‘‘ 1951-1956 ರ ಅವಧಿಯಲ್ಲಿ ವಿಧಾನ ಸೌಧ ನಿರ್ಮಿಸಲಾಗಿದ್ದು, ಅದೇ ಸಂದರ್ಭದಲ್ಲಿ ಕಟ್ಟಡದ ಮುಖ್ಯ ಗೋಪುರದ ಮೇಲೆ ರಾಷ್ಟ್ರ ಲಾಂಛನ ಪ್ರತಿಷ್ಠಾಪಿಸಲಾಗಿದೆ.
ಲಾಂಛನದ ಕೆಳಗೆ ಸತ್ಯಮೇವ ಜಯತೆ ಎಂಬ ಧ್ಯೇಯವಾಕ್ಯ ನಮೂದಾಗಿರುವುದಿಲ್ಲ ಹಾಗೂ ಇನ್ನು ಮುಂದೆ ನಮೂದಿಸಲೂ ಅಲ್ಲಿ ಸ್ಥಳಾವಕಾಶ ಇಲ್ಲ’’, ಎಂದು ತಿಳಿಸಿದ್ದಾರೆ.
ವಿಧಾನಸೌಧದಲ್ಲಿನ ಲಾಂಛನವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲಾಗುವುದು.
ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿನ ಲಾಂಛನದ ಕೆಳಗೆ ಧ್ಯೇಯವಾಕ್ಯ ಅಳವಡಿಸಲು ಕ್ರಮ ಕೈಗೊಳ್ಳುವ ಬಗ್ಗೆ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಅವರ ಮೂಲಕ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದ್ದಾರೆ.
ಭಾರತ ಸರಕಾರ 1950 ರ ಜನವರಿ 26 ರಂದು ಅಧಿಕೃತವಾಗಿ ತನ್ನ ರಾಷ್ಟ್ರ ಲಾಂಛನವನ್ನಾಗಿ ಆಯ್ದುಕೊಂಡಿದೆ.
ದೇವನಾಗರಿ ಲಿಪಿಯಲ್ಲಿರುವ ಸತ್ಯಮೇವ ಜಯತೆ ಎಂಬ ಧ್ಯೇಯ ವಾಕ್ಯವನ್ನು ಅದರಡಿ ಕಡ್ಡಾಯವಾಗಿ ಪ್ರದರ್ಶಿಸಲೇಬೇಕು ಎನ್ನುತ್ತವೆ ರಾಷ್ಟ್ರಲಾಂಛನ ಕುರಿತಾದ 2005 ಮತ್ತು 2007ರ ಕಾಯ್ದೆಗಳು ಇವೆ.
ಈ ಬಗ್ಗೆ ಕೇಂದ್ರ ಸರಕಾರಕ್ಕೆ ದೂರು ನೀಡಿ, ಸುಪ್ರೀಂ ಕೋರ್ಟ್‌ಗೆ ಪಿಐಎಲ್ ಸಲ್ಲಿಸಲಾಗುವುದು.