ಬೆಂಗಳೂರು: ಶ್ರೀರಾಮ ಸೇವಾ ಮಂಡಳಿಯಿಂದ ಬೆಂಗಳೂರಿನ ರಾಜಾಜಿನಗರದ ಶ್ರೀರಾಮಮಂದಿರದಲ್ಲಿ ಕರ್ನಾಟಕದ ಅತಿ ಎತ್ತರದ 63 ಅಡಿ ಉದ್ದದ ಶ್ರೀರಾಮಾಂಜನೇಯ ಪ್ರತಿಮೆ ಉದ್ಘಾಟನೆ ಸಮಾರಂಭ ನೆರವೇರಿದೆ.
ಉಡುಪಿ ಪೇಜಾವರ ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು, ಅದಿ ಚುಂಚನಗಿರಿ ಮಹಾಸಂಸ್ಥಾನದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು, ಶ್ರೀ ಸೌಮ್ಯನಾಥ ಸ್ವಾಮೀಜಿರವರು ಲೋಕರ್ಪಣೆ ಮಾಡಿದರು.
ಇದೇ ವೇಳೆ ನಿರ್ಮಲಾನಂದನಾಥ ಸ್ವಾಮೀಜಿ ರವರು ಮಾತನಾಡಿ, ಮನುಷ್ಯನ ಜೀವನ ಮೌಲ್ಯಯುತವಾಗಿ ಬದುಕಲು ಮತ್ತು ಲೋಕದಲ್ಲಿ ಜನರು ಆದರ್ಶವಾಗಿ ಜೀವನ ಸಾಗಿಸಲು ಶ್ರೀರಾಮ ಆದರ್ಶ ಆಳವಡಿಸಿಕೊಳ್ಳಿ. ಹಿಂದೂ ಸಮಾಜ ಸಂರಕ್ಷಣೆ ಸಂಘಟನೆ ಒಗ್ಗಾಟಿಗೆ ಧರ್ಮ ಕಾರ್ಯಗಳು ನಡೆಯುತ್ತಿರಬೇಕು. ಎಲ್ಲರಿಗೂ ಶ್ರೀರಾಮನಾ ಮೂರ್ತಿ ಸ್ಪೂರ್ತಿಯಾಗಿದೆ ಎಂದು ತಿಳಿಸಿದ್ದಾರೆ.
ಪಿತೃವಾಕ್ಯ ಪರಿಪಾಲಕ, ಆದರ್ಶ ಪತಿ ಶ್ರೀರಾಮ, ಮಾರ್ಯಾದ ಪುರಷೋತ್ತಮ ಎಂದು ಕರೆಯುತ್ತಾರೆ ಅಂದರೆ ಜೀವನದಲ್ಲಿ ಯುವಕರು ತಂದೆ, ತಾಯಿಗೆ ಉತ್ತಮ ಮಗನಾಗಿ ಮತ್ತು ಸತಿಗೆ ಉತ್ತಮ ಪತಿಯಾಗಿ ಹಾಗೂ ಸಮಾಜದಲ್ಲಿ ಉತ್ತಮಪ್ರಜೆಯಾಗಿ ಜೀವನ ಸಾಗಿಸಲು ಪ್ರಭು ಶ್ರೀರಾಮ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.