ಜಾಗತಿಕ ಆಧ್ಯಾತ್ಮಿಕ ಗುರುಗಳಾದ, ಮಾನವತಾವಾದಿ ನಾಯಕರಾದ ಗುರುದೇವ್ ಶ್ರೀ ರವಿಶಂಕರವರಿಗೆ ದಕ್ಷಿಣ ಪೆಸಿಫಿಕ್ ರಾಷ್ಟ್ರವಾದ ಫಿಜಿಯು ತನ್ನ ಅತ್ಯನ್ನತ ಪೌರ ಪ್ರಶಸ್ತಿಯನ್ನು ನೀಡಿ ಅವರನ್ನು ಸನ್ಮಾನಿಸಿತು.
ವಿವಿಧ ಸಮುದಾಯಗಳನ್ನು ಮಾನವೀಯ ಚೌಕಟ್ಟಿಗೆ ತಂದು ಶಾಂತಿ ಮತ್ತು ಸಾಮರಸ್ಯದ ಬದುಕು ಕಟ್ಟಿಕೊಳ್ಳಲು ಶ್ರೀ ರವಿಶಂಕರ್ ಗುರೂಜಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಈ ಸೇವೆಯನ್ನು ಪರಿಗಣಿಸಿ ರಿಪಬ್ಲಿಕ್ ಆಫ್ ಫಿಜಿ ಅಧ್ಯಕ್ಷ ಎಚ್.ಇ.ರಟು ವಿಲಿಯಮ್ ಎಂ. ಕಟೋನಿವೆರಿ ಅವರು ಈ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಮಾನವ ಸ್ಫೂರ್ತಿಯನ್ನು ನಿರಂತರವಾಗಿ ಎತ್ತಿ ಹಿಡಿಯಲು ಅವರು ಮಾಡುತ್ತಿರುವ ಕಾರ್ಯಕ್ಕಾಗಿ, ವಿವಿಧ ಸಮುದಾಯಗಳನ್ನು ಶಾಂತಿ ಮತ್ತು ಸಾಮರಸ್ಯದ ಮೂಲಕ ಒಂದಾಗಿ ತರುವ ಅವರ ಕಾರ್ಯಕ್ಕಾಗಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು.
ಮಾನಸಿಕ ಆರೋಗ್ಯ, ಶಿಕ್ಷಣ, ಪರಿಸರ, ಮಹಿಳಾ ಹಾಗೂ ಯುವಕ ಸಬಲೀಕರಣ, ಒತ್ತಡ ನಿವಾರಣೆ , ಧ್ಯಾನದ ಕಾರ್ಯಕ್ರಮಗಳು, ಹೀಗೆ ಅನೇಕಾನೇಕ ಕ್ಷೇತ್ರಗಳಲ್ಲಿ ಅವರು ನಿರ್ವಹಿಸುತ್ತಿರುವ ಕಾರ್ಯಗಳಿಗಾಗಿ ಗುರೂಜಿಯವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಕೆಲವರು- ಫೀಜಿಯ ಸನ್ಮಾನ್ಯ ಉಪಪ್ರಧಾನಿಗಳಾದ ವಿಲಿಯಮೆ ಗಾವೋಕ ಮತ್ತು ಫೀಜಿಯ ಸಂಯುಕ್ತ ರಾಷ್ಟ್ರಗಳ ವಸತಿ ಸಂಯೋಜಕರಾದ ಡಿರ್ಕ್ ವಾಗೆನರ್. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಈ ದ್ವೀಪ ರಾಷ್ಟ್ರದಲ್ಲಿ ಯುವಕ ಸಬಲೀಕರಣ, ಸ್ಥಳೀಯ ಸಮುದಾಯಗಳ ಮಾನಸಿಕ ಆರೋಗ್ಯದ ಸುಧಾರಣೆ, ಕಾಲಾತೀತ ಜ್ಞಾನವಾದ ಆಯುರ್ವೇದದ ಜ್ಞನದ ಪರಿಚಯದ ಮೂಲಕ ಸಮಗ್ರ ಬೆಳವಣಿಗೆಗೆ ಆರ್ಟ್ ಆಫ್ ಲಿವಿಂಗ್ ಹೇಗೆ ಕಾಣಿಕೆ ನೀಡಬಹುದೆಂದು ಚರ್ಚಿಸಿದರು.
ರವಿ ಶಂಕರ್ ಗುರೂಜಿಯವರಿಗೆ ತಮ್ಮ ದೇಶದ ಅತ್ಯುನ್ನತ ಪೌರ ಪ್ರಶಸ್ತಿಯನ್ನು ನೀಡುತ್ತಿರುವ ಆರನೆಯ ದೇಶವು ಫೀಜಿಯಾಗಿದ್ದು, ಆರ್ಟ್ ಆಫ್ ಲಿವಿಂಗ್ ನ ಮೂಲಕ ಗುರೂಜಿಯವರು ಕಳೆದ 43 ವರ್ಷಗಳಿಂದ ಹರಡುತ್ತಿರುವ ಸಂತೋಷ ಮತ್ತು ಸಾಮರಸ್ಯವನ್ನು ಗುರುತಿಸಲಾಗಿದೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now