ಶಿಗ್ಗಾವಿ ಸವಣೂರು ಕ್ಷೇತ್ರದ ಯುವಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಇಂಜಿನಿಯರಿಂಗ್ ಕಾಲೇಜು ಕಟ್ಟುವ ಕಾಣಿಸಿದೆ ಎಂದು ಎಂದು ತಿಳಿಸಿದ್ದಾರೆ.
ಉಪಚುನಾವಣೆ ಪ್ರಚಾರದ ಭಾಗವಾಗಿ ಶಿಗ್ಗಾವಿಯಲ್ಲಿ ಏರ್ಪಡಿಸಿದ್ದ ಯುವಕರ ಸಮಾವೇಶದಲ್ಲಿ ಪಾಲ್ಗೊಂಡ ಬಿಜೆಪಿ ಅಭ್ಯರ್ಥ ಭರತ್ ಬೊಮ್ಮಾಯಿ ಕ್ಷೇತ್ರದ ಪರವಾಗಿ ತಮ್ಮ ಕನಸನ್ನು ಹಂಚಿಕೊಂಡಿದ್ದಾರೆ.
‘ನಾನು ಹಳ್ಳಿಗರ ಪರವಾಗಿ, ಯುವಕರ ಪರವಾಗಿ ಕೆಲಸ ಮಾಡುತ್ತೇನೆ. ನಮ್ಮ ತಂದೆ(ಮಾಜಿ ಸಿಎಂ ಬಸವರಾಜ ಬೊಮ್ಮಾಯಿ) ಈ ಕ್ಷೇತ್ರದ ನೀರಿನ ಸಮಸ್ಯೆ ಬಗೆ ಹರಿಸಿದ್ದಾರೆ. ಊರಿನಲ್ಲಿ ರಸ್ತೆಗಳು ಅಭಿವೃದ್ಧಿ ಆಗಿವೆ. ಕೇಂದ್ರ ಸರ್ಕಾರದಿಂದ ನೇರವಾಗಿ ಕಿಸಾನ್ ಸಮ್ಮಾನ್ ಯೋಜನೆ ಬರುತ್ತಿದೆ ಎಂದು ತಿಳಿಸಿದ್ದಾರೆ.
ಕನಕದಾಸರ ಬಾಡ ಅಭಿವೃದ್ಧಿ, ಶಿಶುನಾಳ ಶರೀಫರ ಊರು ಅಭಿವೃದ್ಧಿ, ಜಗತ್ತಿನ ಮೊದಲ ವಿಶ್ವವಿದ್ಯಾಲಯ ನಮ್ಮ ಕ್ಷೇತದಲ್ಲಿ ಬಂದಿದೆ.
ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡಿ, ಮನೆ ಮಗನಾಗಿ ಸೇವೆ ಮಾಡುತ್ತೇನೆ ಎಂದು ಪ್ರೋತ್ಸಾಹಿಸಿದರು.
ಚುನಾವಣ ಪ್ರಚಾರ ಸಂದರ್ಭದಲ್ಲಿ ಮತದಾರರನ್ನು ಉದ್ದೇಶಿಸಿ ಯತ್ನಾಳ್ ಮಾತನಾಡಿ, ಭಾರತ ದೇಶ ಹಾಗೂ ಹಿಂದು ಧರ್ಮ ಸುರಕ್ಷಿತವಾಗಿ ಇರಬೇಕೆಂದರೆ, ಜಾತಿ, ಮತ ಎನ್ನದೇ ಹಿಂದೂಗಳೆಲ್ಲ ಒಟ್ಟಾಗಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿಗೆ ಮತ ನೀಡಿ. ಐವತ್ತು ಸಾವಿರ ಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಯುವಕರ ಪರವಾಗಿ, ಶಾಲೆ, ಕಾಲೇಜು, ಜಿಟಿಟಿಸಿ, ಐಟಿಐ ಕಾಲೇಜು ಸ್ಥಾಪಿಸಿದ್ದಾರೆ. ಅಂಬುಜಾ ಕಂಪನಿ, ಶಾಹಿ ಸಂಸ್ಥೆ ಬಂದಿದೆ. ಗಾರ್ಮೆಂಟ್‌ನಲ್ಲಿ ಹತ್ತು ಸಾವಿರ ಹೆಣ್ಣುಮಕ್ಕಳು ಕೆಲಸ ಮಾಡುತ್ತಿದ್ದಾರೆ.
ಪ್ರಸ್ತುತ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಮಹತ್ವದ ಯೋಜನೆಯನ್ನು ನಿಲ್ಲಿಸಿದ್ದಾರೆ. ಇಂತಹ ಸರ್ಕಾರಕ್ಕೆ ಉಪ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಬೇಕು ಎಂದರು.
ಊರಿನಲ್ಲಿ ರಸ್ತೆಗಳು ಅಭಿವೃದ್ಧಿ ಆಗಿವೆ. ಕೇಂದ್ರ ಸರ್ಕಾರದಿಂದ ನೇರವಾಗಿ ಕಿಸಾನ್ ಸಮ್ಮಾನ್ ಯೋಜನೆ ಬರುತ್ತಿದೆ. ನಮ್ಮ ತಂದೆ ರೈತರ ಮಕ್ಕಳಿಗೆ ನೆರವಾಗುವ ದೃಷ್ಟಿಯಿಂದ ರೈತ ವಿದ್ಯಾನಿಧಿ ಯೋಜನೆ ಜಾರಿ ಮಾಡಿದ್ದರು.