ಮಂಗಳೂರು : ಕಾರವಾರದ ಕೋಡಿ ನದಿ ಬಳಿ ಸುತ್ತಮುತ್ತಲು ಕಳೆದ ಐದು ದಿನಗಳಿಂದ ರಣ ಹದ್ದು ಒಂದು ಹಾರಾಡುತ್ತಿದೆ. ಸುಮ್ಮನೆ ಹಾರಾಡುತ್ತಿದ್ದರೆ ಯಾರು ಭಯಪಡುವ ಅಗತ್ಯವಿಲ್ಲ. ಆದರೆ ರಣಹದ್ದಿಗೆ ಜಿಪಿಎಸ್ ಟ್ರಾನ್ಸ್ಮಿಟರ್ ಹಾಗೂ ಟ್ಯಾಗ್ ಅಳವಡಿಕೆಯಾಗಿದ್ದು ಸಹಜವಾಗಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.
ಜಿಪಿಎಸ್ ಟ್ರಾನ್ಸ್ಮಿಟರ್ ಟ್ಯಾಗ್ ಹೊಂದಿದ್ದ ರಣಹದ್ದು ಕೊಡಿ ನದಿ ಸುತ್ತ ಹಾರಾಡಿದೆ. ಕಳೆದ ಐದು ದಿನಗಳಿಂದ ಟ್ಯಾಗ್ ಇದ್ದ ರಣಹದ್ದು ಹಾರಾಡುತ್ತಿದೆ. ರಣಹದ್ದಿನ ಮೇಲಿನ ಟ್ಯಾಗ್ ನೋಡಿ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಶತ್ರುದೇಶ ಅಥವಾ ಉಗ್ರಸಂಘಟನೆಗಳ ಹದ್ದು ಎಂದು ಮಾಹಿತಿ ತಿಳಿದು ವಿವಿಧ ಇಲಾಖೆಯ ಅಧಿಕಾರಿಗಳು ದೌಡಾಯಿಸಿದ್ದಾರೆ. ಸ್ಥಳಕ್ಕೆ ಬಂದ ರಾಜ್ಯ ಮತ್ತು ಕೇಂದ್ರ ಗುಪ್ತಚರ ಅಧಿಕಾರಿಗಳು ಬಂದಿದ್ದಾರೆ.
ರಣಹದ್ದು ಟ್ಯಾಗ್ ಹಾಗೂ ಜಿಪಿಎಸ್ ಅಳವಡಿಕೆಯಿಂದ ಕಾರವಾರದಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ ಪರಿಶೀಲನೆ ವೇಳೆ ಟ್ರಾನ್ಸ್ಮಿಟರ್ ಮೇಲಿನ ಮಾಹಿತಿ ಬಹಿರಂಗವಾಗಿದೆ. Mahaforest.gov.in ಎಂದು ಟ್ರಾನ್ಸ್ ಮೀಟರ್ ಮೇಲೆ ಬರೆದಿದೆ. ಸಂಶೋಧನೆಗಾಗಿ ಈ ಒಂದು ರಣಹದ್ದನ್ನು ಬಳಸಿ ಆಗಿದೆ ಎಂಬ ಸಂಗತಿ ಬಹಿರಂಗವಾಗಿದೆ.
ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯಿಂದ ಸಂಶೋಧನೆ ನಡೆಸಲಾಗಿದೆ.ರಣಹದ್ದು ಜೀವನದ ಅಧ್ಯಯನಕ್ಕಾಗಿ ಟ್ಯಾಗ್ ಅಳವಡಿಕೆ ಮಾಡಲಾಗಿದೆ. ತಾಡೊಭಾ, ಬಾಂದೇರಿ ಟೈಗರ್ ಪ್ರೀಸರ್ ಒನ್ ಇಂದ ಈ ಒಂದು ರಣಹದ್ದನ್ನು ಹಾರಿಸಲಾಗಿತ್ತು. ಅಸಲಿ ವಿಚಾರ ಗೊತ್ತಾಗುತ್ತಿದ್ದಂತೆ ಸದ್ಯ ಆತಂಕ ನಿವಾರಣೆ ಆಗಿದೆ. ಸದ್ಯಕ್ಕೆ ರಣಹದ್ದಿಗೆ ಆಹಾರ ನೀಡಲು ಅರಣ್ಯ ಇಲಾಖೆ ಮುಂದಾಗಿದೆ.