spot_img
spot_img

ಲಾಹೋರ್​ನಲ್ಲಿ ಮಾರಣಾಂತಿಕ ವಾಯುಮಾಲಿನ್ಯ

spot_img
spot_img

Share post:

ಲಾಹೋರ್: ಲಾಹೋರ್ ಮತ್ತು ಪಾಕಿಸ್ತಾನದ ಇತರ ಹಲವಾರು ನಗರಗಳಲ್ಲಿ ದಟ್ಟ ವಿಷಕಾರಿ ಹೊಗೆ ಆವರಿಸಿದ್ದು, ಈ ನಗರಗಳ ಮಾಲಿನ್ಯದ ಮಟ್ಟ ಮೇರೆ ಮೀರಿದೆ. ಲಾಹೋರ್ ನಗರವೊಂದರಲ್ಲಿಯೇ ಕಳೆದ 24 ಗಂಟೆಗಳಲ್ಲಿ 15,000 ಕ್ಕೂ ಹೆಚ್ಚು ಜನರಿಗೆ ಉಸಿರಾಟ ಮತ್ತು ವೈರಲ್ ಸೋಂಕು ತಗುಲಿದೆ ಎಂದು ಎಆರ್​ವೈ ನ್ಯೂಸ್ ವರದಿ ಮಾಡಿದೆ.

ಲಾಹೋರ್​ನ ಆಸ್ಪತ್ರೆಗಳಲ್ಲಿ ಒಣ ಕೆಮ್ಮು, ಉಸಿರಾಟದ ತೊಂದರೆ, ನ್ಯುಮೋನಿಯಾ ಮತ್ತು ಎದೆಯ ಸೋಂಕಿನಿಂದ ಬಳಲುತ್ತಿರುವ ರೋಗಿಗಳು ಕಿಕ್ಕಿರಿದು ತುಂಬಿದ್ದಾರೆ ಎಆರ್​ವೈ ನ್ಯೂಸ್ ವರದಿ ಮಾಡಿದೆ.
ಮಾಯೋ ಆಸ್ಪತ್ರೆಯಲ್ಲಿ 4,000, ಜಿನ್ನಾ ಆಸ್ಪತ್ರೆಯಲ್ಲಿ 3,500, ಗಂಗಾರಾಮ್ ಆಸ್ಪತ್ರೆಯಲ್ಲಿ 3,000 ರೋಗಿಗಳು ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 2,000ಕ್ಕೂ ಅಧಿಕ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ.

ಅಸ್ತಮಾ ಮತ್ತು ಹೃದ್ರೋಗದಂಥ ದೀರ್ಘಾವಧಿ ರೋಗದಿಂದ ಬಳಲುತ್ತಿರುವವರು ಮತ್ತು ಮಕ್ಕಳ ಮೇಲೆ ಈ ಮಾಲಿನ್ಯದಿಂದ ಅತ್ಯಧಿಕ ದುಷ್ಪರಿಣಾಮವಾಗಲಿದೆ ಎಂದು ಪಾಕಿಸ್ತಾನದ ವೈದ್ಯಕೀಯ ತಜ್ಞ ಡಾ. ಅಶ್ರಫ್ ಜಿಯಾ ಎಚ್ಚರಿಸಿದ್ದಾರೆ.

ದೇಶದಲ್ಲಿನ ಮಾಲಿನ್ಯಕಾರಿ ಹೊಗೆಯ ಸಮಸ್ಯೆಯ ನಿವಾರಣೆಗೆ ಪಾಕಿಸ್ತಾನ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರಾಂತ್ಯದ ಬಹುತೇಕ ಭಾಗಗಳಲ್ಲಿ ಸಂಚಾರ ನಿರ್ಬಂಧ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಮುಂದಿನ 3 ತಿಂಗಳ ಕಾಲ ಯಾವುದೇ ವಿವಾಹ ಸಮಾರಂಭ ಏರ್ಪಡಿಸದಂತೆ ನಿರ್ಬಂಧಿಸಲಾಗಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶಾಲೆ ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಈಗ ಉತ್ತರ ಪಾಕಿಸ್ತಾನವನ್ನು ಆವರಿಸಿರುವ ತೀವ್ರ ಹೊಗೆಯನ್ನು ನಾಸಾದ ಮಧ್ಯಮ ರೆಸಲ್ಯೂಶನ್ ಇಮೇಜಿಂಗ್ ಸ್ಪೆಕ್ಟ್ರೋರಾಡಿಯೋಮೀಟರ್ (ಮೋದಿಸ್) (NASA’s Moderate Resolution Imaging Spectroradiometer -MODIS) ಕೂಡ ವರದಿ ಮಾಡಿದೆ.

“2024 ರ ನವೆಂಬರ್ ಆರಂಭದಲ್ಲಿ ಉತ್ತರ ಪಾಕಿಸ್ತಾನದ ಮೇಲೆ ಬೂದಿ ಮಿಶ್ರಿತ ದಟ್ಟವಾದ ಹೊಗೆ ಆವರಿಸಿದೆ. ಇದರಿಂದಾಗಿ ಗಾಳಿಯ ಗುಣಮಟ್ಟ ಕುಸಿದಿದ್ದು, ಶಾಲೆಗಳನ್ನು ಮುಚ್ಚಲಾಗಿದೆ ಮತ್ತು ನೂರಾರು ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ” ಎಂದು ನಾಸಾ ಮೋದಿಸ್ ಹೇಳಿದೆ. ಹಲವಾರು ಸುದ್ದಿ ವರದಿಗಳ ಪ್ರಕಾರ, ಪಾಕಿಸ್ತಾನದ ಪಂಜಾಬ್ ಪ್ರದೇಶದ ಕೆಲವು ಭಾಗಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು ನವೆಂಬರ್ 10 ರಂದು 1,900 ಕ್ಕಿಂತ ಕಳಪೆಯಾಗಿ ಎಂದು ನಾಸಾ ಹೇಳಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮಾಲಿನ್ಯದ ಈ ಸಂದರ್ಭವನ್ನು ವಿಪತ್ತು ಎಂದು ಘೋಷಿಸಿದೆ ಮತ್ತು ತುರ್ತು ಕ್ರಮಗಳನ್ನು ಜಾರಿಗೊಳಿಸಿದೆ ಎಂದು ಪಾಕಿಸ್ತಾನದ ಮಾಧ್ಯಮ ಮೂಲಗಳು ತಿಳಿಸಿವೆ. ನವೆಂಬರ್ 12 ರಂದು ಪಂಜಾಬ್ ಸರ್ಕಾರದ ವೆಬ್ ಸೈಟ್ ಪ್ರಕಾರ ಕಳೆದ 24 ಗಂಟೆಗಳಲ್ಲಿ ಪ್ರಾಂತ್ಯದ ಎಕ್ಯೂಐ ಸರಾಸರಿ 604 ರಷ್ಟಿದೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...